ಅವರ ಪ್ರತೀ ಹೆಜ್ಜೆಯೂ ರೆಕಾರ್ಡ್ ಆಗುತ್ತಿದೆ. ಇದರಿಂದ ಯಾರಿಗೆ ಮತ್ತು ಹೇಗೆ ಲಾಭ ಎನ್ನುವ ಆಘಾತಕಾರಿ ಸಂಗತಿ ತಿಳಿಯುವ ಹೊತ್ತಿಗೆ ಗಾಢ ಭಯವೊಂದು ನೋಡುಗರನ್ನು ಎಚ್ಚರಿಸಿ ಹೋಗುತ್ತದೆ.
ಆರ್. ಕೇಶವಮೂರ್ತಿ
ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಕಥೆಯನ್ನು ಹೇಳುತ್ತಿದೆ... ಅಪ್‌ಡೇಟೆಡ್ ಜಗತ್ತಿನ ಅಪ್‌ಡೇಟ್ ಆಗಿರುವ ಕತೆಯನ್ನು ತೆರೆ ಮೇಲೆ ತಂದು ತಾಂತ್ರಿಕತೆ, ಇಂಟರ್‌ನೆಟ್, ಈಗಿನ ಜನರೇಷನ್, ಅವರ ಆಸೆ ಮತ್ತು ದುರಾಸೆಗಳನ್ನು ನಿರೂಪಿಸುತ್ತಾ ಸಾಗುತ್ತದೆ ಸಿನಿಮಾ. ಆರಂಭದಲ್ಲಿ ಈ ಮನೆಯಲ್ಲಿ ದೆವ್ವ ಇದೆ ಎನ್ನುವ ಅನುಮಾನ ಮೂಡಿಸುತ್ತದೆ. ಈ ದೆವ್ವ ಅಥವಾ ಆತ್ಮಯಾರದ್ದು, ಇಲ್ಲಿ ಯಾರ ಕೊಲೆ ನಡೆದಿರಬಹುದು ಎನ್ನುವ ತರ್ಕದಲ್ಲಿದ್ದಾಗಲೇ ಇದು ಇಂಟ್ ನೆಟ್‌ನ ಕರಾಳತೆ ಎನ್ನುವ ಅಚ್ಚರಿಯನ್ನು ತೆರೆದಿಡುತ್ತದೆ.
ಈಗ ಆ ಮನೆಯಲ್ಲಿರುವ ಮೂವರ ಕತೆ ಏನು ಎನ್ನುವ ಆತಂಕ ಹುಟ್ಟಿಸುತ್ತದೆ. ಹೀಗೆ ಪ್ರತೀ ದೃಶ್ಯಕ್ಕೂಭಯ, ಆತಂಕ, ಕುತೂಹಲದ ನೆರಳು ಆವರಿಸಿಕೊಳ್ಳುತ್ತಾ ಸಾಗುತ್ತದೆ. ಕಾಸ್‌ಟ್ಯೂಮ್ ಡಿಸೈನರ್ ಆಗಿರುವ ಕೀರ್ತಿ, ಕ್ರಿಕೆಟರ್ ಆಗುವ ಕನಸು ಕಂಡು, ಕೊನೆಗೆ ಹಾಸಿಗೆ ಹಿಡಿದಿರುವ ಅಮಿತ್, ಕುಡಿತಕ್ಕೆ ದಾಸನಾಗಿರುವ ಇವರ ತಂದೆ. ಈ ಮೂರು ಪಾತ್ರಧಾರಿಗಳ ಸುತ್ತಾ ಬೇಬಿ ಸುಮನ್, ಜುಟ್ಟು ಚಕ್ರಿ ಡಾರ್ಕ್ ವೆಬ್‌ನ ಕರಾಳತೆಯಲ್ಲಿ ಬೀಳಿಸುತ್ತಾರೆ. ಈ ಮನೆಯಲ್ಲಿರುವ ಪಾತ್ರಧಾರಿಗಳ ಖಾಸಗಿ ಜೀವನ ಅವರ ಕೈಯಲ್ಲಿ ಇಲ್ಲ.
ಚಿತ್ರ: ಕಪಟಿ
ತಾರಾಗಣ: ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ, ನಂದಗೋಪಾಲ್
ನಿರ್ದೇಶನ: ಕಿರಣ್, ಚೇತನ್ ಎಸ್ ಪಿ
ಅವರ ಪ್ರತೀ ಹೆಜ್ಜೆಯೂ ರೆಕಾರ್ಡ್ ಆಗುತ್ತಿದೆ. ಇದರಿಂದ ಯಾರಿಗೆ ಮತ್ತು ಹೇಗೆ ಲಾಭ ಎನ್ನುವ ಆಘಾತಕಾರಿ ಸಂಗತಿ ತಿಳಿಯುವ ಹೊತ್ತಿಗೆ ಗಾಢ ಭಯವೊಂದು ನೋಡುಗರನ್ನು ಎಚ್ಚರಿಸಿ ಹೋಗುತ್ತದೆ. ಆಧುನಿಕತೆ ಎಂಬುದು ಯಾರ ಕೈಯಲ್ಲಿ ಏನೆಲ್ಲ ಅನಾಹುತಗಳನ್ನು ಮಾಡಿಸುತ್ತದೆ, ನಮಗೇ ಗೊತ್ತಿಲ್ಲದೆ ನಾವು ಯಾರದ್ದೋ ಕ್ಯಾಮೆರಾ ಕಣ್ಣಿನಲ್ಲಿ ಅರೆಸ್ಟ್ ಆಗಿರುತ್ತೇವೆ ಎನ್ನುವ ಎಚ್ಚರಿಕೆ ಸಂದೇಶ ಈ ಚಿತ್ರ ನೀಡುತ್ತದೆ. ಬಿಗಿಯಾದ ಚಿತ್ರಕಥೆಯೇ ಪ್ಲಸ್ ಪಾಯಿಂಟ್. ಥಿಲ್ಲರ್‌ಪ್ರಿಯರ ಬಹು ಮೆಚ್ಚಿನ ಚಿತ್ರವಾಗುತ್ತದೆ.
