ಚಿತ್ರರಂಗದ ಸೊಗಸು, ಬೆಡಗು ಬಿನ್ನಾಣದ ಜೊತೆ ಮಾನವ ಸಹಜ ದುರಾಸೆ, ಅತಿಯಾಸೆಯನ್ನು ನಿಧಾನಕ್ಕೆ ಬಿಚ್ಚಿಡುತ್ತಾ ಹೋಗುತ್ತದೆ ಈ ಸಿನಿಮಾ. ವೈಭವದ ಜೊತೆ ವಿಷಾದವನ್ನೂ ಕಟ್ಟಿಕೊಡುತ್ತದೆ. ಮನುಷ್ಯನ ಮನಸ್ಸಿನ ಅಗಾಧ ಸಾಧ್ಯತೆಯನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ.
ಆರ್.ಬಿ.
ಒಬ್ಬ ನಿರ್ದೇಶಕನ ಕತೆ ಇದು. ಅವನೇ ಬೆಳೆಸಿ ಹೊತ್ತು ಮೆರೆಸಿದ ಇಬ್ಬರು ನಾಯಕಿಯರ ಕತೆ ಇದು. ಒಬ್ಬಾಕೆ ಆ ನಿರ್ದೇಶಕರ ಸಿನಿಮಾದಲ್ಲಿ ನಟಿಸಿ ಆ ಸಿನಿಮಾ ಹಿಟ್ ಆದ ಮೇಲೆ ನಿರ್ದೇಶಕರಿಂದ ಮುಖ ತಿರುಗಿಸುತ್ತಾಳೆ. ಅದೇ ಹಠದಲ್ಲಿ ಆ ನಿರ್ದೇಶಕರು ಮತ್ತೊಬ್ಬ ಹಳ್ಳಿ ಹುಡುಗಿಯನ್ನು ತನ್ನ ಸಿನಿಮಾದ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಮುಂದೇನು ಎಂಬುದು ಈ ಸಿನಿಮಾದ ಕುತೂಹಲ. ಚಿತ್ರರಂಗದ ಸೊಗಸು, ಬೆಡಗು ಬಿನ್ನಾಣದ ಜೊತೆ ಮಾನವ ಸಹಜ ದುರಾಸೆ, ಅತಿಯಾಸೆಯನ್ನು ನಿಧಾನಕ್ಕೆ ಬಿಚ್ಚಿಡುತ್ತಾ ಹೋಗುತ್ತದೆ ಈ ಸಿನಿಮಾ. ವೈಭವದ ಜೊತೆ ವಿಷಾದವನ್ನೂ ಕಟ್ಟಿಕೊಡುತ್ತದೆ. ಮನುಷ್ಯನ ಮನಸ್ಸಿನ ಅಗಾಧ ಸಾಧ್ಯತೆಯನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ.
ಚಿತ್ರ: ಗಗನ ಕುಸುಮ
ನಿರ್ದೇಶನ: ನಾಗೇಂದ್ರಕುಮಾರ್ ಜೈನ್
ತಾರಾಗಣ: ಎಸ್.ಕೆ. ಪ್ರಕಾಶ್ ಸಣ್ಣಕ್ಕಿ, ದಿನೇಶ್ ಗೌಡ, ಕಾವ್ಯ ಪ್ರಕಾಶ್, ಆಶಾ, ಹರಣಿ ನಟರಾಜ್
ಒಬ್ಬರ ಹಠ, ಮತ್ತೊಬ್ಬರ ಮತ್ಸರ, ಇನ್ನೊಬ್ಬರ ಕರುಣೆ ಎಲ್ಲವನ್ನೂ ದಾಟಿಸುತ್ತದೆ. ನಿರ್ದೇಶಕನ ಪಾತ್ರದಲ್ಲಿ ನಟಿಸಿರುವ ಸಣ್ಣಕ್ಕಿ ಪ್ರಕಾಶ್, ಇಬ್ಬರು ನಾಯಕಿಯರಾಗಿ ನಟಿಸಿರುವ ಕಾವ್ಯ ಪ್ರಕಾಶ್, ಹರಣಿ ನಟರಾಜ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರರಂಗದ ಕತೆಯುಳ್ಳ ಈ ಸಿನಿಮಾ ಕೊನೆಗೊಂದು ನಿಟ್ಟುಸಿರನ್ನು ಉಳಿಸಿಬಿಡುತ್ತದೆ.
