Asianet Suvarna News Asianet Suvarna News

Ramzan review: ಧರ್ಮ, ಬದುಕು ಮತ್ತು ಸರಕಾರ

ಸಂಗಮೇಶ ಉಪಾಸೆ, ಭಾಸ್ಕರ್‌ ಮಣಿಪಾಲ್‌, ಪ್ರೇಮಾವತಿ ಉಪಾಸೆ, ಪದ ದೇವರಾಜ್‌, ಬೇಬಿ ಈಶಾನಿ, ಮಾ.ವೇದಿಕ್‌ ಅಭಿನಯಿಸಿರುವ ರಂಜಾನ್ ಸಿನಿಮಾ ಬಿಡುಗಡೆಯಾಗಿದೆ. 

Sangamesh Bhaskar Manipal Ramzan kannada film review vcs
Author
First Published Apr 22, 2023, 10:24 AM IST

ಆರ್‌ ಕೇಶವಮೂರ್ತಿ

ದೇವರಿಗಾಗಿ ಉಪವಾಸ ಮಾಡಿದರೆ ಸತ್ತ ಮೇಲೆ ಸ್ವರ್ಗದಲ್ಲಿ ಒಳ್ಳೆಯ ಜೀವನ ಸಿಗುತ್ತದೆಯೇ, ಅಲ್ಲಿ ಹೊಟ್ಟೆತುಂಬಾ ಊಟ, ಹೊಸ ಬಟ್ಟೆ, ದೊಡ್ಡ ಮನೆ ಹೀಗೆ ಎಲ್ಲ ಸೌಲಭ್ಯ ಅಲ್ಲಿ ಇರುತ್ತದೆಯೇ ಎನ್ನುವ ಕನಸಿನಲ್ಲಿ ಇರುವ ಹುಡುಗ. ಸರ್ಕಾರದ ಅಭಿವೃದ್ದಿಗೆ ಬಾಳಿ ಬದುಕಿದ ನೆಲೆಯನ್ನೇ ತೊರೆಯಬೇಕಾಗಿದೆ. ಯಾವ ಕಾರಣಕ್ಕೆ ಮನೆ- ಜಮೀನು ಬಿಡಬಾರದು ಎನ್ನುವ ಹೋರಾಟ ಸಂಕಟದಲ್ಲಿರುವ ಆ ಹುಡುಗನ ತಂದೆ. ಮಗನ ಕನಸು, ತಂದೆಯ ಹೋರಾಟ ಕೊನೆಗೆ ಏನಾಗುತ್ತದೆ ಎಂಬುದೇ ‘ರಂಜಾನ್‌’ ಸಿನಿಮಾದ ಕತೆ. ಇದರ ನಡುವೆ ಧರ್ಮದ ಪ್ರಾಮುಖ್ಯತೆ, ಉಳ್ಳವರು ಮತ್ತು ಇಲ್ಲದವರ ಬದುಕಿನ ಚಿತ್ರಣಗಳು ಕೂಡ ಬಂದು ಹೋಗುತ್ತವೆ. ಸಾಹಿತಿ ಫಕೀರ್‌ ಮುಹಮ್ಮದ್‌ ಕಟ್ಪಾಡಿ ಅವರ ‘ನೊಂಬು’ ಕತೆ ಆಧರಿಸಿ ಪಂಚಾಕ್ಷರಿ ಸಿ ನಿರ್ದೇಶಿಸಿರುವ ಚಿತ್ರವಿದು.

ತಾರಾಗಣ: ಸಂಗಮೇಶ ಉಪಾಸೆ, ಭಾಸ್ಕರ್‌ ಮಣಿಪಾಲ್‌, ಪ್ರೇಮಾವತಿ ಉಪಾಸೆ, ಪದ ದೇವರಾಜ್‌, ಬೇಬಿ ಈಶಾನಿ, ಮಾ.ವೇದಿಕ್‌

ನಿರ್ದೇಶನ: ಪಂಚಾಕ್ಷರಿ ಸಿ

Chandini Bar Review: ಬಾರ್‌ ಹುಡುಗರ ಬಯಾಗ್ರಫಿ

ಕರಾವಳಿ ಭಾಗದ ಹಿನ್ನೆಲೆಯಲ್ಲಿ ಕೆಳ ಮಧ್ಯಮ ವರ್ಗದ ಒಂದು ಮುಸ್ಲಿಂ ಕುಟುಂಬದ ಮೂಲಕ ಚಿತ್ರದ ಕತೆ ಸಾಗುತ್ತದೆ. ಅಂದು ಕೂಡ ರಂಜಾನ್‌ ಹಬ್ಬದ ಉಪವಾಸ ಹಿನ್ನೆಲೆಯಲ್ಲಿ. ಗುಜರಿ ವ್ಯಾಪಾರಸ್ಥ. ಪ್ರತಿ ದಿನ ಹಳೆ ಪೇಪರ್‌, ಕಬ್ಬಿಣ, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ಸಂಗ್ರಹಿಸಿ ಗುಜರಿ ಅಂಗಡಿಗೆ ಮಾರುವುದು ಇವರ ಕಾಯಕ. ಇನ್ನು ಮನೆಯಲ್ಲಿರುವ ಇವರ ಪತ್ನಿ ಹಾಗೂ ಇಬ್ಬರು ಮಕ್ಕಳು ಇಡೀ ದಿನ ಬೀಡಿ ಸುತ್ತುವ ಕೆಲಸ. ಅಲ್ಲಾ ಎಂದರೆ ಭಕ್ತಿ. ಇಸ್ಲಾಂ ಧರ್ಮದ ಆಚರಣೆಗಳನ್ನು ನಿಯತ್ತಾಗಿ ಪಾಲಿಸುತ್ತಿರುವ ಕುಟುಂಬ. ಆದರೂ ಉಪವಾಸ ಮತ್ತು ಬಡತನ ಈ ಕುಟುಂಬದ ಬಹುಕಾಲದ ನೆಂಟರು! ಮತ್ತೊಂದು ಕಡೆ ಸರಕಾರ ಜಮೀನು ವಶಪಡಿಸಿಕೊಳ್ಳುವ ತಯಾರಿಯಲ್ಲಿರುತ್ತದೆ. ಮುಂದೇನು ಎಂಬುದು ಚಿತ್ರ ನೋಡಿ ತಿಳಿಯಬೇಕು.

Bisilu Kudure Review: ರೈತ ಬದುಕಿನ ಬೆಂಕಿ ಬಿಸಿಲು

ಇಡೀ ಸಿನಿಮಾ ಸಂದೇಶಕ್ಕೆ ಸೀಮಿತ ಆದಂತಿದೆ. ಅಲ್ಲದೆ ಸಾಹಿತಿಗಳ ಕತೆಗಳನ್ನು ಹೀಗೆ ಮಾಡಬೇಕು ಎನ್ನುವ ಚೌಕಟ್ಟು ಹಾಕಿಕೊಂಡಂತೆ ಚಿತ್ರವನ್ನು ಮುಗಿಸಿದ್ದಾರೆ. ಈ ವಿಚಾರದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರು ಅಲ್ಪತೃಪ್ತರು ಅನಿಸುತ್ತದೆ. ಹೀಗಾಗಿ ಮೇಕಿಂಗ್‌, ತಾಂತ್ರಿಕತೆ ಮತ್ತು ದೃಶ್ಯಗಳ ಸಂಯೋಜನೆ ತೀರಾ ಜಾಳುಜಾಳು. ಆಗಾಗ ಬರುವ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಕತೆ- ಚಿತ್ರವನ್ನು ಮುಂದಕ್ಕೆ ನಡೆಸುವ ಪ್ರಯತ್ನ ಮಾಡುತ್ತವೆ. ಪುಸ್ತಕದ ಕತೆ ತೆರೆ ಮೇಲೆ ಬಂದರೆ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದವರು ಈ ಸಿನಿಮಾ ನೋಡಬಹುದು. ಗುಜರಿ ವ್ಯಾಪಾರಿ ಪಾತ್ರ ಮಾಡಿರುವ ಸಂಗಮೇಶ ಉಪಾಸೆ ಇಡೀ ಚಿತ್ರದ ಹೈಲೈಟ್‌.

Follow Us:
Download App:
  • android
  • ios