5D Review: ನಾರಾಯಣ ರಕ್ತ ಪಾರಾಯಣ
ಆದಿತ್ಯ, ಅದಿತಿ ಪ್ರಭುದೇವ, ಎಸ್. ನಾರಾಯಣ್, ಜ್ಯೋತಿ ರೈ ನಟನೆಯ 5ಡಿ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ?
ಆರ್.ಎಸ್.
ಒಬ್ಬ ಬೋರ್‌ವೆಲ್ ತೋಡುವ ಕಾಮಗಾರಿಯಲ್ಲಿ ತೊಡಗಿರುವ ತರುಣ. ಅವನ ಹಿಂದೆ ಬಿದ್ದಿರುವ ಆಟೋ ಚಾಲಕಿಯಾಗಿರುವ ತರುಣಿ. ಹೀಗೆ ಸರಳವಾಗಿ ಶುರುವಾಗುವ ಕತೆಯಲ್ಲಿ ಇದ್ದಕ್ಕಿದ್ದಂತೆ ಉಂಟಾಗುವ ಎರಡು ಘನಘೋರ ಕೊಲೆಗಳ ನಂತರ ಕತೆಯೇ ದಿಕ್ಕೇ ಬದಲಾಗುತ್ತದೆ. ಕುತೂಹಲಕರವಾಗುತ್ತದೆ. ರೋಚಕವಾಗುತ್ತದೆ.
ಆರಂಭದಲ್ಲಿ ಆದಿತ್ಯ, ಅದಿತಿ ಪ್ರಭುದೇವ ಕತೆಯನ್ನು ಮುಂದೆ ತೆಗೆದುಕೊಂಡು ಹೋದರೆ ಕೊಲೆಯ ನಂತರ ಬರುವುದು ಅರಿಭಯಂಕರ ಪೊಲೀಸ್ ಆಫೀಸರ್ ಅಭಿನಂದನ್. ಆ ಪಾತ್ರ ಮಾಡಿರುವುದು ಎಸ್.ನಾರಾಯಣ್. ಈ ಸಿನಿಮಾದಲ್ಲಿ ನಗುವೇ ಇಲ್ಲದ, ಘನಗಂಭೀರ ಮುಖಮುದ್ರೆಯ, ಚೂಪು ಮೀಸೆಯ, ಬಿಲ್ಡಪ್ ಶಾಟ್‌ಗಳುಳ್ಳ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ನಾರಾಯಣ್ ಅವರನ್ನು ಕಾಣಬಹುದು. ತನಿಖೆ ಸಾಗುತ್ತಿದ್ದಂತೆ ಅವರ ಉಪಸ್ಥಿತಿಯೇ ಈ ಸಿನಿಮಾದ ವೇಗವನ್ನು ಮತ್ತಷ್ಟು ಜಾಸ್ತಿ ಮಾಡುತ್ತದೆ.
Ondu Sarala Prema Kathe Review ಆಹ್ಲಾದಕರ ಅನುಭವ ಉಳಿಸುವ ಪ್ರೀತಿ ಕತೆ
ನಿರ್ದೇಶನ: ಎಸ್. ನಾರಾಯಣ್
ತಾರಾಗಣ: ಆದಿತ್ಯ, ಅದಿತಿ ಪ್ರಭುದೇವ, ಎಸ್. ನಾರಾಯಣ್, ಜ್ಯೋತಿ ರೈ
ರೇಟಿಂಗ್: 3
Juni Review ಬದುಕು ಡಿಸಾರ್ಡರ್, ಪ್ರೇಮ ಪ್ರೀ- ಆರ್ಡರ್
ಈ ಪ್ರಯಾಣದಲ್ಲಿ ಒಂದೊಂದೇ ತಿರುವುಗಳು ಒಂದೊಂದು ಕತೆಯನ್ನು ಹೇಳುತ್ತಾ ಸಾಗುತ್ತವೆ. ಕೊನೆಗೆ ಈ ಚಿತ್ರದ ಉದ್ದೇಶ ತೆರೆದುಕೊಂಡು ಈ ಸಿನಿಮಾಗೊಂದು ಘನತೆ ಪ್ರಾಪ್ತವಾಗುತ್ತದೆ. ನಿರ್ದೇಶಕರು ಬ್ಲಡ್ ಮಾಫಿಯಾವನ್ನು ಥ್ರಿಲ್ಲರ್ ಚಿತ್ರಕತೆಗೆ ಸೂಕ್ತ ಅನ್ನಿಸುವಂತೆ ಹೊಂದಿಸಿ ಬರೆದಿದ್ದಾರೆ. ಬ್ಲಡ್ ಮಾಫಿಯಾದ ಕತೆ ಬರುವಾಗ ಅದು ಮನುಕುಲದ ಕತೆಯಂತೆ ಕಾಣುತ್ತದೆ.
ಆದಿತ್ಯ ಸೊಗಸಾಗಿ ಕಾಣಿಸುತ್ತಾರೆ. ತಾಯಿ ಪಾತ್ರಧಾರಿ ಜ್ಯೋತಿ ರೈ ಗಮನ ಸೆಳೆಯುತ್ತಾರೆ. ಅದಿತಿ ಪ್ರಭುದೇವ ಟಾಮ್ ಬಾಯ್ ಆಗಿ ನಟಿಸಿದ್ದಾರೆ. ಒಟ್ಟಾರೆಯಾಗಿ ಹುಡುಕಾಟ ಮತ್ತು ಸಂಕೀರ್ಣ ವಸ್ತು ಇರುವ ಸಿನಿಮಾ. ಉತ್ತಮ ಉದ್ದೇಶ ಇರುವ ಪಕ್ಕಾ ಥ್ರಿಲ್ಲರ್.