ವಯಸ್ಸಾದ ಹೆತ್ತವರನ್ನು ಸಾಕದೆ ಅವರನ್ನು ಬೀದಿಗೆ ತಳ್ಳುವ ಮಕ್ಕಳಿಗೆ ಏನಾದರು ಪಾಠ ಮಾಡಬೇಕು ಕಲಿಸಬೇಕು ಎಂದುಕೊಳ್ಳುವವರಿಗಾಗಿಯೇ ಹುಟ್ಟಿಕೊಂಡಿರುವ ಪಾಠವೇ ‘ಅಪ್ಪಾ ಐ ಲವ್‌ ಯೂ’.

ಆರ್‌ಕೆ

ತಾಯಿ ಇಲ್ಲದ ಮಗನಿಗೆ ತಂದೆಯೇ ಎಲ್ಲಾ. ಅಪ್ಪನ ನೆರಳಿನಲ್ಲಿ ಬೆಳೆದ ಮಗ ಅದೇ ಅದೇ ತಂದೆಯನ್ನು ಬೀದಿಗೆ ತಳ್ಳುತ್ತಾನೆ. ಮುಂದೆ ಏನಾಗುತ್ತದೆ ಎಂಬುದು ‘ಅಪ್ಪಾ ಐ ಲವ್‌ ಯೂ’ ಚಿತ್ರದ ಕತೆ. ತಾಯಿ ಮಮತೆ, ಅಪ್ಪನ ಜವಾಬ್ದಾರಿಗಳು, ಹೆತ್ತವರ ಸಂಕಟಗಳನ್ನು ಒಳಗೊಂಡ ಕಿರುಚಿತ್ರಗಳು, ರೀಲ್ಸ್‌ಗಳ ಸಾಲಿಗೆ ಸೇರುವ ಕತೆಯ ಸಿನಿಮಾ ಇದು.

ವಯಸ್ಸಾದ ಹೆತ್ತವರನ್ನು ಸಾಕದೆ ಅವರನ್ನು ಬೀದಿಗೆ ತಳ್ಳುವ ಮಕ್ಕಳಿಗೆ ಏನಾದರು ಪಾಠ ಮಾಡಬೇಕು ಕಲಿಸಬೇಕು ಎಂದುಕೊಳ್ಳುವವರಿಗಾಗಿಯೇ ಹುಟ್ಟಿಕೊಂಡಿರುವ ಪಾಠವೇ ‘ಅಪ್ಪಾ ಐ ಲವ್‌ ಯೂ’. ಒಂದು ‘ಕಿರು’ ಚಿತ್ರದ ಸರಕನ್ನು ‘ಹಿರಿ’ ಚಿತ್ರ ಮಾಡುವುದಕ್ಕೆ ನಿರ್ದೇಶಕ ಅಥರ್ವ್‌ ಆರ್ಯ ಶ್ರಮಿಸಿದ್ದಾರೆ.

ಚಿತ್ರ: ಅಪ್ಪಾ ಐ ಲವ್‌ ಯೂ
ತಾರಾಗಣ: ತಬಲಾ ನಾಣಿ, ಜೀವಿತಾ, ಸಂಜಯ್‌, ನೆನಪಿರಲಿ ಪ್ರೇಮ್‌, ಮಾನ್ವಿತಾ ಹರೀಶ್‌, ಬಲ ರಾಜ್ವಾಡಿ, ಅರುಣ ಬಾಲರಾಜ್‌
ನಿರ್ದೇಶನ: ಅಥರ್ವ್‌ ಆರ್ಯ
ರೇಟಿಂಗ್:

ಅಥಿತಿ ಪಾತ್ರಗಳಲ್ಲಿ ನಟಿಸಿರುವ ನೆನಪಿರಲಿ ಪ್ರೇಮ್‌ ಹಾಗೂ ಮಾನ್ವಿತಾ ಹರೀಶ್‌, ಒಂದು ಮಗುವನ್ನು ದತ್ತು ಪಡೆಯಲು ಅನಾಥಾಶ್ರಮಕ್ಕೆ ಬರುತ್ತಾರೆ. ಅಲ್ಲಿಂದ ಕತೆ ಶುರುವಾಗುತ್ತದೆ. ಇವರು ಮಗುವನ್ನು ದತ್ತು ಪಡೆಯುತ್ತಾರೋ ಇಲ್ಲವೋ ಎಂಬುದು ಚಿತ್ರದ ಟ್ವಿಸ್ಟ್‌ಗಳಲ್ಲಿ ಒಂದು. ಉಳಿದಂತೆ ನಿರೀಕ್ಷೆಯಂತೆ ಸಿನಿಮಾ ಸಾಗುತ್ತದೆ. ತಬಲಾ ನಾಣಿ ಹಾಗೂ ಬಲ ರಾಜ್ವಾಡಿ ತಮ್ಮ ಪಾತ್ರಗಳ ಮೂಲಕ ಚಿತ್ರದ ಘನತೆಯನ್ನು ಹೆಚ್ಚಿಸುತ್ತಾರೆ.