ಚಿತ್ರ ವಿಮರ್ಶೆ: ನಮ್ ಗಣಿ ಬಿಕಾಂ ಪಾಸ್
ವಿದ್ಯಾವಂತ ನಿರುದ್ಯೋಗಿಯೊಬ್ಬ ಶ್ರೀಮಂತನಾಗುವ ಕನಸು ಕಂಡು, ಆ ಕನಸನ್ನು ಹೇಗೆ ಈಡೇರಿಸಿಕೊಳ್ಳುತ್ತಾನೆ ಎಂಬುದೇ ‘ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಒಂದು ಸಾಲಿನ ಕಥೆ.
ಆರ್ ಕೇಶವಮೂರ್ತಿ
ಬಿಕಾಂ ಓದಿರುವ ಹುಡುಗ, ಕಾಲೇಜು ಹುಡುಗನನ್ನು ಲವ್ ಮಾಡುವ ಹೈಸ್ಕೂಲ್ ಹುಡುಗಿ. ಇವರಿಬ್ಬರ ಪ್ರೇಮ ಕತೆಯಲ್ಲಿ ಮತ್ತೊಬ್ಬಳ ಪ್ರವೇಶ. ಆಕೆಗೆ ದುಡ್ಡೇ ದೊಡ್ಡಪ್ಪ. ನಾಯಕನ ಪೋಷಕರು ಮತ್ತು ನೆಂಟರ ಬುದ್ದಿ ಮಾತುಗಳು, ಜತೆಗೊಂದಿಷ್ಟು ಫೀಲಿಂಗ್ ಸಾಂಗ್- ಮಾತು... ಇವಿಷ್ಟು ಈ ಚಿತ್ರದ ಅಂಶಗಳು. ಕೊನೆಗೆ ತಾನು ಮದುವೆಯಾದ ಹುಡುಗಿ ಶ್ರೀಮಂತ ಕುಟುಂಬದವಳಾಗಿರುತ್ತಾಳೆ. ಅಲ್ಲಿಗೆ ನಾಯಕನ ಕನಸು ನನಸಾಗುತ್ತದೆ.
ಗಣಿ ಜೊತೆ 10 ಲಕ್ಷ ಸಂಪಾದಿಸಲು ಮುಂದಾದ ಸ್ಯಾಂಡಲ್‌ವುಡ್ ನಟಿ! .
ನಾಯಕ ಬಿಕಾಂ ಪಾಸ್ ಆಗಿದ್ದೇ ದೊಡ್ಡ ಸಂಭ್ರಮ ಪಡುತ್ತಿರುವಾಗ ಆತ ಕೆಲಸಕ್ಕೆ ಸೇರಿ ಮನೆ ಜವಾಬ್ದಾರಿ ಹೊರಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಮನೆಯವರ ಒತ್ತಾಯಕ್ಕೆ ಮಣಿದು ನಾಯಕ ಹಲವು ಕಂಪನಿಗಳ ಬಾಗಿಲು ತಟ್ಟುತ್ತಾನೆ. ಸ್ವಂತ ವ್ಯಾಪಾರ ಆರಂಭಿಸಲು ಸ್ನೇಹಿತರ ಜತೆ ಸೇರುತ್ತಾನೆ. ಅದಕ್ಕೆ ಬೇಕಿರುವ ಹಣಕ್ಕಾಗಿ ವಿಧುವೆಯನ್ನು ಮದುವೆ ಆಗಲು ಮುಂದಾಗುತ್ತಾನೆ. ಆ ವಿಧವೆ ನಾಯಕನನ್ನು ಪೊಲೀಸ್ ಠಾಣೆಗೆ ಹೋಗುವಂತೆ ಮಾಡುತ್ತಾಳೆ, ಆಮೇಲೆ ಮತ್ತೊಬ್ಬಳು ನಾಯಕಿಯ ಆಗಮನ ಆಗುತ್ತದೆ. ಹೀಗೆ ಸಿನಿಮಾ ಸಾಗುತ್ತದೆ.
ಇಂಗ್ಲಿಷ್ ಬಾರದ ಬಿಕಾಂ ಪಾಸ್ ಹುಡುಗನ ಕಥೆ ಇದು!
ಕತೆಯಲ್ಲಿ ಹೊಸತನವಿಲ್ಲ. ಸರಳವಾದ ಕತೆಯಲ್ಲಿ ಗೊಂದಲ ಸೃಷ್ಟಿಸಲೆಂದೇ ಡ್ರಗ್ಸ್ ಸಪ್ಲೇ ಅಂಶವನ್ನು ತರುತ್ತಾರೆ. ಮ್ಯಾರೇಜ್ ಬ್ರೋಕರ್ ಪಾತ್ರವೂ ಈ ಗೊಂದಲದ ಭಾಗಿಯೇ ಹುಟ್ಟಿಕೊಂಡಿದೆ. ಹಾಡು, ಚಿತ್ರದ ಸಂಭಾಷಣೆ ಹಾಗೂ ದೃಶ್ಯಗಳಲ್ಲಿ ಯಾವುದೇ ಗಟ್ಟಿತನ ಇಲ್ಲ. ನಟಿ ಐಶಾನಿ ಶೆಟ್ಟಿ ಈ ಹಿಂದಿನ ಚಿತ್ರಗಳಿಗಿಂತಲೂ ಇಲ್ಲಿ ನೋಡಲು ಚೆಂದ. ಸಾಧಾರಣ ಕತೆಯನ್ನು ಸಂಕಲಕಾರನ ಗೈರು ಹಾಜರಿಯಲ್ಲಿ ಸಾಧ್ಯವಾದಷ್ಟು ಎಳೆದು ಸಿನಿಮಾ ಮಾಡಿದ್ದಾರೆ!