ಚಿತ್ರ ವಿಮರ್ಶೆ: ಗ್ರೂಫಿ
ಒಂದು ನೈಜ ಘಟನೆ, ಮತ್ತೊಂದು ಕಾಲ್ಪನಿಕ, ಇನ್ನೊಂದು ಹಾರರ್... ಈ ಮೂರು ಸೇರಿದರೆ ‘ಗ್ರೂಫಿ’ ಹೆಸರಿನ ಸಿನಿಮಾ ಕಣ್ಣ ಮುಂದೆ ಬರಬಹುದು.
ಆರ್. ಕೇಶವಮೂರ್ತಿ
ಕಾಡು, ಯುವಕ- ಯುವತಿಯರ ಚಾರಣ, ಫೋಟೋ ಜರ್ನಲಿಸ್‌ಟ್, ಐದು ಮಂದಿ ಸಾವು, ಆ ಸಾವಿನ ಹಿಂದಿರುವ ಕತೆಯನ್ನು ನಿರ್ದೇಶಕರು ಪ್ರೇಕ್ಷಕರಿಗೆ ತೀರಾ ಸರಳವಾಗಿ ಈ ಚಿತ್ರದಲ್ಲಿ ಹೇಳಿ ಮುಗಿಸಿದ್ದಾರೆ.
ಅದ್ದೂರಿ ಮೇಕಿಂಗ್, ಬಹು ತಾರಾಗಣ, ರೋಮಾಂಚನ ಮೂಡಿಸುವ ಸಾಹಸಗಳು, ಪಂಚಿಂಗ್ ಡೈಲಾಗ್‌ಗಳ ಹೊರತಾಗಿ ಯಾವುದೇ ತಲೆಬಿಸಿ ಇಲ್ಲದೆ ಸುಮ್ಮನೆ ಕೂತು ಸಿನಿಮಾ ನೋಡಬೇಕು. ಚಿತ್ರಮಂದಿರದಲ್ಲಿ ಕೂತಷ್ಟು ಕಾಲ ಆ ಚಿತ್ರದಿಂದ ಯಾವುದೇ ತೊಂದರೆ ಆಗಬಾರದು ಎಂಬಿತ್ಯಾದಿಯಾಗಿ ಷರತ್ತುಗಳೇನಾದರೂ ಇದ್ದರೂ ನೀವು ‘ಗ್ರೂಫಿ’ಗೆ ಜತೆಯಾಗಬಹುದು. ಕತೆ ಹೀಗೆ; ತಮ್ಮ ಕಾಲೇಜಿನ ಎಚ್‌ಓಡಿ ಅವರು ತಯಾರಿಸುತ್ತಿರುವ ಪ್ರಾಜೆಕ್‌ಟ್ಗಾಗಿ ಔಷಧಿಯ ಗುಣಗಳು ಇರುವ ಸಸ್ಯಗಳ ಹುಡುಕಾಟಕ್ಕಾಗಿ ಐದು ಮಂದಿ ಮೆಡಿಕಲ್ ವಿದ್ಯಾರ್ಥಿಗಳು ಪಶ್ಚಿಮ ಘಟ್ಟಕ್ಕೆ ಬರುತ್ತಾರೆ. ಇರಲ್ಲಿ ಒಬ್ಬ ಹುಡುಗಿಗೆ ಪದೇ ಪದೇ ಗ್ರೂಫಿ ತೆಗೆಸಿಕೊಳ್ಳುವ ಹುಚ್ಚು. ಹೋದ ಕಡೆಯಲ್ಲ ತನ್ನ ಸ್ನೇಹಿತರನ್ನು ಹತ್ತಿರ ಕರೆದು ಒಂದು ಫೋಟೋ ತೆಗೆಯುತ್ತಿರುತ್ತಾಳೆ. ಇದೇ ರೀತಿ ಬಹು ಎತ್ತರದ ಫಾಲ್‌ಸ್ನ ತುದಿಯಲ್ಲಿ ನಿಂತು ಗ್ರೂಪ್ ಸೆಲ್ಫಿ ತೆಗೆಸಿಕೊಳ್ಳುವಾಗ ಕಾಲು ಜಾರಿ ಅಷ್ಟೂ ಮಂದಿ ಪ್ರಪಾತಕ್ಕೆ ಬೀಳುತ್ತಾರೆ.
'ಗ್ರೂಫಿ' ಹಾಡುಗಳ ಲೋಕಾರ್ಪಣೆ; ಆಗಸ್ಟ್ 20ಕ್ಕೆ ಸಿನಿಮಾ ರಿಲೀಸ್!ತಾರಾಗಣ: ಆರ್ಯನ್, ಪದ್ಮಶ್ರೀ ಸಿ ಜೈನ್, ಗಗನ್, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್, ಶ್ರೀಧರ್, ರಘು ಪಾಂಡೇಶ್ವರ್, ಸಂಗೀತ
ನಿರ್ದೇಶನ: ರವಿ ಅರ್ಜುನ್
ನಿರ್ಮಾಣ: ಕೆ ಜಿ ಸ್ವಾಮಿ
ಸಂಗೀತ: ವಿಜೇತ್ ಕೃಷ್ಣ
ಛಾಯಾಗ್ರಾಹಣ: ಅಜಯ್ ಲಕ್ಷ್ಮೀಕಾಂತ
ರೇಟಿಂಗ್: 2
ಮುಂದೆ ಅದೇ ಕಾಡಿಗೆ ಒಬ್ಬ ಫೋಟೋ ಜರ್ನಲಿಸ್‌ಟ್ ಬರುತ್ತಾನೆ. ಕಾಲು ಜಾರಿ ನೀರಿಗೆ ಬಿದ್ದ ತಂಡ ಈತನಿಗೆ ಎದುರಾಗುತ್ತದೆ. ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ಮುಗಿಯುವ ತನಕ ಕಾಯಬೇಕಿರುತ್ತದೆ. ಚಿತ್ರದ ವಿರಾಮ ಹಾಗೂ ಕ್ಲೈಮ್ಯಾಕ್‌ಸ್ ಯಾರ ಊಹೆಗೂ ಸಿಗಲ್ಲ! ಹಾರರ್ ಜಾನರ್‌ನಲ್ಲಿ ಒಳ್ಳೆಯ ಕತೆ ಹೇಳುವ ಪ್ರಯತ್ನ ಮಾಡಿದ್ದರೂ ಚಿತ್ರಕತೆ ಹಾಗೂ ಪಾತ್ರಧಾರಿಗಳು, ಮೇಕಿಂಗ್‌ನಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕಿತ್ತು.