Sambhavami Yuge Yuge Film Review: ಉದಾತ್ತ ಆಲೋಚನೆ ಹೊಂದಿರುವ ಹಸಿರು ಸಿನಿಮಾ

ಅಮ್ಮನ ಕನಸನ್ನು ನೆರವೇರಿಸಲು ನಗರವನ್ನು ಬಿಟ್ಟು ಹಳ್ಳಿ ಬಂದಿರುವ ತಾಯಿಗೆ ತಕ್ಕ ಮಗ. ಒಳ್ಳೆಯ ಕೆಲಸಗಳಿಂದ ಊರವರ ಮೆಚ್ಚುಗೆ ಪ್ರಾಪ್ತಿ. ಎಂದಿನಂತೆ ಒಳ್ಳೆಯದಾಗುತ್ತದೆ ಅನ್ನುವಾಗ ಆತಂಕಕೋರರು ಬಂದು ಪರಿಸ್ಥಿತಿಯನ್ನು ತಿರುವು ಮುರುವು ಮಾಡುವಲ್ಲಿಗೆ ಸಿನಿಮಾ ಮತ್ತೊಂದು ಎತ್ತರಕ್ಕೆ ಹೋಗುತ್ತದೆ.
 

Jayaram Shetty Nisha Rajput Starrer Sambhavami Yuge Yuge Film Review gvd

ಆರೆಸ್

ಹಳ್ಳಿಗಳು ಉಳಿಯಬೇಕು ಎಂಬ ಉದಾತ್ತತೆ, ಗ್ರಾಮೀಣ ಪ್ರದೇಶದ ಹಸಿರು ಪರಿಸರ, ಕೌಟುಂಬಿಕ ಮೌಲ್ಯಗಳು, ಈ ಮಧ್ಯೆ ಒಂಚೂರು ಪ್ರೇಮ, ಸ್ವಲ್ಪ ಬಡಿದಾಟ ಎಲ್ಲವೂ ಸೇರಿಕೊಂಡಿರುವ ಸಿನಿಮಾ ಇದು. ಇಲ್ಲಿ ಆದರ್ಶವಿದೆ, ಪ್ರೇಮವಿದೆ, ಹೋರಾಟವಿದೆ, ಹೊಡೆದಾಟವಿದೆ, ತ್ಯಾಗವಿದೆ, ಅಕ್ಕರೆಯಿದೆ. ಎಲ್ಲವನ್ನೂ ಪ್ಯಾಕೇಜ್ ಆಗಿ ಕಟ್ಟಿಕೊಟ್ಟಿರುವುದು ಚಿತ್ರದ ವಿಶೇಷತೆ. ಮಗ ಬದುಕು ಕೊಟ್ಟ ಊರಿನ ಸೇವೆಯನ್ನು ಮಾಡಬೇಕು ಎಂಬ ಆಸೆಯನ್ನು ಹೊತ್ತಿರುವ ಅಮ್ಮ. 

ಅಮ್ಮನ ಕನಸನ್ನು ನೆರವೇರಿಸಲು ನಗರವನ್ನು ಬಿಟ್ಟು ಹಳ್ಳಿ ಬಂದಿರುವ ತಾಯಿಗೆ ತಕ್ಕ ಮಗ. ಒಳ್ಳೆಯ ಕೆಲಸಗಳಿಂದ ಊರವರ ಮೆಚ್ಚುಗೆ ಪ್ರಾಪ್ತಿ. ಎಂದಿನಂತೆ ಒಳ್ಳೆಯದಾಗುತ್ತದೆ ಅನ್ನುವಾಗ ಆತಂಕಕೋರರು ಬಂದು ಪರಿಸ್ಥಿತಿಯನ್ನು ತಿರುವು ಮುರುವು ಮಾಡುವಲ್ಲಿಗೆ ಸಿನಿಮಾ ಮತ್ತೊಂದು ಎತ್ತರಕ್ಕೆ ಹೋಗುತ್ತದೆ. ಕತೆಯನ್ನು ಸುದೀರ್ಘ ಶೈಲಿಯಲ್ಲಿ ಹೇಳುವುದು ಈ ಸಿನಿಮಾದ ವಿಶೇಷತೆ. ಹಾಗಾಗಿ ಪ್ರಯಾಣ ಅಲ್ಲಲ್ಲಿ ಕೊಂಚ ದೀರ್ಘ ಅನ್ನಿಸುತ್ತದೆ. ಕಥಾ ಪ್ರಯಾಣವನ್ನು ಕೊಂಚ ಸಂಕ್ಷಿಪ್ತಗೊಳಿಸಿದ್ದರೆ ಕತೆಯ ತೀವ್ರತೆ ಹೆಚ್ಚಾಗಬಹುದಿತ್ತು. 

ಚಿತ್ರ: ಸಂಭವಾಮಿ ಯುಗೇಯುಗೇ
ನಿರ್ದೇಶನ: ಚೇತನ್‍ ಚಂದ್ರಶೇಖರ್ ಶೆಟ್ಟಿ
ತಾರಾಗಣ: ಜಯ್‍ ಶೆಟ್ಟಿ, ನಿಶಾ ರಜಪೂತ್‍, ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರ ಗೌಡ
ರೇಟಿಂಗ್: 3

ಈ ಚಿತ್ರಕ್ಕೊಂದು ಉದ್ದೇಶವಿದೆ. ಹಳ್ಳಿ ಉಳಿಸುವುದು. ಹಳ್ಳಿ ಬೆಳೆಸುವುದು. ಅದು ಸಾಧ್ಯವಾಗುತ್ತದೆಯೋ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕತೆ ಮನರಂಜನಾತ್ಮಕವಾಗಿ ಮುಂದೆ ಸಾಗುತ್ತದೆ. ಕಟ್ಟಕಡೆಗೆ ಸಿನಿಮಾ ಮನಸ್ಸಲ್ಲಿ ಏನನ್ನು ಉಳಿಸಿ ಹೋಗುತ್ತದೆ ಅನ್ನುವುದೇ ಈ ಚಿತ್ರದ ಸಾರ್ಥಕತೆ. ಕತೆ ಮತ್ತು ಉದ್ದೇಶಕ್ಕೆ ಪೂರಕವಾಗಿ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾಗೆ ಅವರವರ ಕೊಡುಗೆಗಳನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಿದ್ದಾರೆ. ಹಾಗಾಗಿ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದೆ.

Latest Videos
Follow Us:
Download App:
  • android
  • ios