Sugar Factory Review: ಆಧುನಿಕ ಕಾಲದ ಸಂಕೀರ್ಣ ಸಂಬಂಧಗಳ ಸುತ್ತ..
ಡಾರ್ಲಿಂಗ್ ಕೃಷ್ಣ, ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ, ರಂಗಾಯಣ ರಘು, ಶಶಿಕುಮಾರ್ ನಟನೆಯ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ಆರ್.ಕೆ.
ಚಿತ್ರದ ಶೀರ್ಷಿಕೆಯ ಹೆಸರಿನ ಪಬ್‌ನಲ್ಲಿ ಶುರುವಾಗಿ ಅದೇ ಪಬ್‌ನಲ್ಲಿ ಮುಕ್ತಾಯಗೊಳ್ಳುವ ಚಿತ್ರ ‘ಶುಗರ್ ಫ್ಯಾಕ್ಟರಿ’. ಈ ಚೌಕಟ್ಟಿನಲ್ಲಿ ಆಧುನಿಕ ಕಾಲದ ಸಂಬಂಧಗಳ ಕಷ್ಟಗಳನ್ನು, ಸಂಕೀರ್ಣತೆಯನ್ನು ಹೇಳುವ ಪ್ರಯತ್ನ ಈ ಸಿನಿಮಾ.
ಒಬ್ಬ ಯೂಟ್ಯೂಬರ್, ಪಬ್ಬು ಮಾಲೀಕ, ಅಲ್ಲೊಬ್ಬ ಸಪ್ಲೈಯರ್, ನಾಯಕನ ನಾಲ್ಕು ಮಂದಿ ಸ್ನೇಹಿತರು, ಇಬ್ಬರು ನಾಯಕಿಯರು ಚಿತ್ರದ ಮುಖ್ಯ ಪಾತ್ರಧಾರಿಗಳು. ಪ್ರೀತಿ- ಪ್ರೇಮ ಮತ್ತು ಹುಡುಗಿಯರಿಂದ ದೂರ ಇರುವ ಆರ್ಯ ಹೆಸರಿನ ಪಾತ್ರದ ಮೂಲಕ ಕತೆ ಹೇಳುತ್ತಾರೆ ನಿರ್ದೇಶಕ ದೀಪಕ್ ಅರಸ್. ಲವ್ವು ಎಂದರೆ ಆಗದ ನಾಯಕ ಮತ್ತು ನಾಯಕಿ ಜೀವನ ಪ್ರಯಾಣದಲ್ಲಿ ಒಟ್ಟಾಗುತ್ತಾರೆ. ಅವರ ಮುಂದಿನ ಬದುಕಿನ ದಾರಿಯೇ ಈ ಕತೆಯ ಕುಹೂತಲ. ಅವರಿಬ್ಬರು ಮುಂದೆ ಪ್ರೀತಿಯ ಬಲೆಯಲ್ಲಿ ಬೀಳುತ್ತಾರಾ ಎಂಬ ಅಂಶವೇ ಈ ಸಿನಿಮಾವನ್ನು ಮುನ್ನಡೆಸುತ್ತದೆ.
ನಿರ್ದೇಶನ: ದೀಪಕ್ ಅರಸ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ, ರಂಗಾಯಣ ರಘು, ಶಶಿಕುಮಾರ್
ರೇಟಿಂಗ್: 3
ಚಿತ್ರದ ಕತೆ ಮೈಸೂರು, ಗೋವಾ, ಪಬ್ಬು ಮುಂತಾದ ಕಡೆ ಸುತ್ತಾಡಿಕೊಂಡು ಬರುತ್ತದೆ. ಕತೆ ಸ್ವಲ್ಪ ಪ್ರಿಡಿಕ್ಟಿಬಲ್ ಆಗುತ್ತದೆ ಅನ್ನಿಸುವ ಹೊತ್ತಿಗೆ ತಿರುವುಗಳು ಎದುರಾಗುತ್ತವೆ. ಇದೊಂದು ಲೈವ್ಲಿಯಾಗಿ ಕಾಣಿಸುವ ಆದರೆ ಹಿನ್ನೆಲೆಯಲ್ಲಿ ಸಂಬಂಧಗಳ ಭಾರ ಹೊತ್ತಿರುವ ಸಿನಿಮಾ.
Sapta Sagaradaache Ello Side B Review: ಅವಳು ಸುಖವಾಗಿರಲಿ ಎಂದು ಹಾರೈಸುತ್ತಾ...
ನಾಯಕಿಯರಾದ ಸೋನಲ್ ಮೊಂತೆರೋ, ಅದ್ವಿತಿ ಶೆಟ್ಟಿ, ಶಿಲ್ಪಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನಟನಾ ಪ್ರತಿಭೆ ಡಾರ್ಲಿಂಗ್ ಕೃಷ್ಣ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪೋಷಕ ನಟ ರಂಗಾಯಣ ರಘು, ಅತಿಥಿ ಪಾತ್ರಧಾರಿ ಶಶಿ ಕುಮಾರ್, ಹಾಸ್ಯ ನಟ ಗೋವಿಂದೇಗೌಡ ಪಾತ್ರಗಳೇ ಆಗಿದ್ದಾರೆ. ಪ್ರತಿಭಾವಂತ ಛಾಯಾಗ್ರಾಹ ಸಂತೋಷ್ ರೈ ಪಾತಾಜೆ ಕಣ್ಣಲ್ಲಿ ಪ್ರತೀ ಫ್ರೇಮ್ ಕೂಡ ಸುಂದರ. ಅನುಭವಿ ಸಂಕಲನಕಾರ ಕೆ ಎಂ ಪ್ರಕಾಶ್ ಚೆನ್ನಾಗಿ ಕೆಲಸ ಮಾಡಿದ್ದಾರೆ.