ಚಿತ್ರ ವಿಮರ್ಶೆ: ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್
ಪ್ರೀತಿಯ ಕತೆಗಳು ಔಟ್‌ಡೇಟೆಡ್ ಆಗಲ್ಲ! ಈ ಮಾತನ್ನು ಮನಸ್ಸಲ್ಲಿಟ್ಟುಕೊಂಡು ನಾಗಶೇಖರ್ ನಿರ್ದೇಶನ ಶ್ರೀಕೃಷ್ಣ ಅಟ್ ಜೀಮೇಲ್ ಡಾಟ್ ಕಾಮ್ ಚಿತ್ರ ನೋಡಬೇಕು.
ನಿತ್ತಿಲೆ
ಶ್ರೀಕೃಷ್ಣ ಅಟ್ ಜೀಮೇಲ್ ಡಾಟ್ ಕಾಮ್ ಚಿತ್ರದಲ್ಲಿ ಹುಡುಗ ಹುಡುಗಿ ಪ್ರೀತಿಗಿಂತಲೂ ಅಪ್ಪನ ಪ್ರೀತಿ, ಮಗುವಿನ ಹಂಬಲವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಆದರೆ ಕೊಂಚ ತೀವ್ರತೆ ಪಡೆದುಕೊಳ್ಳೋದು ಹೆಣ್ಣು ಗಂಡಿನ ಪ್ರೇಮ. ನಾಯಕಿ ಶ್ರೀಮಂತೆ, ಲಾಯರ್, ಜೊತೆಗೆ ಪುಟ್ಟಮಗಳ ಅಮ್ಮ. ಫೈವ್ ಸ್ಟಾರ್ ಹೊಟೇಲಿನ ಸಪ್ಲೈಯರ್ ಆಗಿದ್ದು, ಕೆಳ ಮಧ್ಯಮ ವರ್ಗದ ಆರ್ಥಿಕ ಸಂಕಷ್ಟಗಳಲ್ಲಿ ತೊಳಲಾಡುವ ನಾಯಕ. ತನ್ನ ಮಗಳು ನಾಯಕನನ್ನು ಅಪ್ಪ ಅಂತ ಕರೆದಳು ಅಂದ ಮಾತ್ರಕ್ಕೆ ಹಣ ಕೊಟ್ಟು ಆತ ಮಗಳ ಜೊತೆಗೆ ಬೆರೆಯುವಂತೆ ಮಾಡುವ ನಾಯಕಿ.
ಚಿತ್ರ ವಿಮರ್ಶೆ: ಸಲಗಹೀಗೆ ಅನಿವಾರ್ಯತೆಗೆ ಬಿದ್ದು ಪರಿಚಿತರಾಗುವ ಈ ಇಬ್ಬರೂ ಒಂದು ಹಂತದಲ್ಲಿ ಮತ್ತೊಂದು ಲೆವೆಲ್‌ಗೆ ಆತ್ಮೀಯವಾಗುತ್ತಾರೆ. ಇನ್ನೇನು ಇಬ್ಬರ ನಡುವೆ ಅನುರಾಗ ಬೆಳೆಯಬೇಕು ಅಂದಾಗ ಟ್ವಿಸ್ಟ್. ಸೆಕಂಡ್ ಹಾಫ್ ತುಂಬ ಇಂಥಾ ಟ್ವಿಸ್ಟ್‌ಗಳೇ. ಅಲ್ಲಲ್ಲಿ ಬೇಡದ ಸಂಗತಿಗಳು ಮೂಗು ತೋರಿಸಿ ಇರಿಟೇಟ್ ಮಾಡುತ್ತವೆ.
ತಾರಾಗಣ: ಡಾರ್ಲಿಂಗ್ ಕೃಷ್ಣ, ಭಾವನಾ ಮೆನನ್
ನಿರ್ದೇಶನ: ನಾಗಶೇಖರ್
ರೇಟಿಂಗ್: 3
ಚಿತ್ರ ವಿಮರ್ಶೆ: ಕೋಟಿಗೊಬ್ಬ 3ಚಿತ್ರದಲ್ಲಿ ಪ್ರೀತಿ, ಸಂಕಟ, ಸಂಬಂಧ, ಡಿವೋರ್ಸ್ ಇತ್ಯಾದಿಗಳ ಎಳೆ ಇದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಹಾಡುಗಳು, ಸತ್ಯ ಹೆಗ್ಡೆ ಅವರ ಸಿನಿಮಾಟೋಗ್ರಫಿ ಸುಂದರ. ಭಾವನಾ ಮುದ್ದಾಗಿ ಕಾಣುವ ಜೊತೆಗೆ ಆ್ಯಕ್ಟಿಂಗ್‌ನಲ್ಲೂ ಗಮನ ಸೆಳೆಯುತ್ತಾರೆ. ಸಪ್ಲೈಯರ್ ಆಗಿ ಕೃಷ್ಣ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ದತ್ತಣ್ಣ, ಚಂದನ್ ಕುಮಾರ್ ಅವರೂ ಪಾತ್ರಕ್ಕೆ ಜೀವ ತುಂಬುತ್ತಾರೆ. ಆದರೆ ಕತೆ ಔಟ್ ಆಫ್ ಫೋಕಸ್ ಆದಂತೆ ಭಾಸವಾಗುತ್ತದೆ. ಹೀಗಾಗಿ ಸನ್ನಿವೇಶಗಳು ಗಾಢವಾಗಿ ಮನಸ್ಸನ್ನು ಸ್ಪರ್ಶಿಸುವುದಿಲ್ಲ. ಹೆಚ್ಚಿನ ಕಡೆ ಪಾತ್ರದ ದನಿಗೂ ತುಟಿ ಚಲನೆಗೂ ಸಿಂಕ್ ಆಗಲ್ಲ. ವೃತ್ತಿಪರರೇ ಇರುವ ಚಿತ್ರದಲ್ಲಿ ಇಂಥಾ ದೊಡ್ಡ ತಾಂತ್ರಿಕ ಸಮಸ್ಯೆ ಕಾಣಿಸಬಾರದಿತ್ತು. ಸಿನಿಮಾ ರಿಯಲ್ ಲೈಫ್‌ಗೆ ಕನೆಕ್ಟ್ ಆಗಬೇಕು ಅಂತ ಬಯಸೋದು ತಪ್ಪಾದರೂ, ಸನ್ನಿವೇಶಕ್ಕೆ ಜಸ್ಟಿಫಿಕೇಶನ್ ಇರಬೇಕು, ಇಲ್ಲವಾದರೆ ಅವು ಮನಸ್ಸಿಗೆ ನಾಟೋದಿಲ್ಲ ಅನ್ನೋದು ಸತ್ಯ. ಬಹುಶಃ ಹೊಸ ನಿರ್ದೇಶಕರ ಚಿತ್ರವಾದರೆ, ಓಕೆ ಅನ್ನಬಹುದಿತ್ತೇನೋ. ಆದರೆ ‘ಮೈನಾ’ದಂಥಾ ಸಿನಿಮಾ ಕೊಟ್ಟನಾಗಶೇಖರ್ ಅವರ ನಿರ್ದೇಶನ ಅಂದಾಗ ನಿರೀಕ್ಷೆಗಳು ಹೆಚ್ಚಿರುತ್ತವೆ. ಅದಕ್ಕೋಸ್ಕರವಾದರೂ ಅವರು ಈ ಚಿತ್ರಕ್ಕೆ ಇನ್ನಷ್ಟುಶ್ರಮ ಹಾಕಬೇಕಿತ್ತು.