Film Review: ವರದ

ವಿನೋದ್ ಪ್ರಭಾಕರ್ ಮತ್ತು ಅಮಿತಾ ರಂಗನಾಥ್ ನಟಿಸಿರುವ ವರದ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹೇಗಿದೆ?

Actor Vinod Prabhakar Kannada Varadha film review vcs

ರಾಜ್

ಬೇಸರಿಸಿಕೊಳ್ಳಲು ತಂದೆ ಸೆಂಟಿಮೆಂಟು, ರೊಚ್ಚಿಗೇಳಲು ಫೈಟುಗಳು, ಸುಧಾರಿಸಿಕೊಳ್ಳಲು ಹಾಡುಗಳು, ಒಳ್ಳೆಯ ಹುಡುಗಿ ಜೊತೆ ಪ್ರೇಮ, ಅಕಾಲಿಕ ಬ್ರೇಕಪ್ ಫೀಲಿಂಗು, ಸಮಾಜಕ್ಕೆ ಮಾರಕವಾದ ವಿಲನ್ನುಗಳು, ಮಹತ್ವಾಕಾಂಕ್ಷೆಯ ಆ್ಯಂಗ್ರಿ ಯಂಗ್‌ಮ್ಯಾನ್, ಸಾಧಿಸಬೇಕಾದ ಗುರಿ, ಇರಲೇಬೇಕಾದ ಗುರು ಎಲ್ಲವೂ ಇರುವ ಸರಳ, ನೇರ ಮಾಸ್ ಕಮರ್ಷಿಯಲ್ ಸಿನಿಮಾ ವರದ.

ನಾಯಕನಿಗೊಂದು ಪ್ರಶ್ನೆ ಇರುತ್ತದೆ. ಆ ಪ್ರಶ್ನೆಯ ಬೆನ್ನು ಹಿಡಿದು ಹೋದವನಿಗೆ ಉತ್ತರ ಸಿಕ್ಕಾಗ ಇಂಟರ್ವಲ್ ಬಂದಿರುತ್ತದೆ. ಅಲ್ಲಿಂದ ಮುಂದೆ ಉಂಟಾದ ಸಮಸ್ಯೆಗೆ ಅಂತ್ಯ ಹಾಡುವ ಕಾರ್ಯಕ್ರಮ. ಈ ಕಾರ್ಯಕ್ರಮ ಮುಗಿಯುವ ವೇಳೆಗೆ ನಾಲ್ಕೈದು ತಳ್ಳು ಗಾಡಿಗಳು ಹಾರಾಡಿ, ನೂರು ಎಂಎಲ್ ಕಣ್ಣೀರು ಹರಿದು, ಧಗಧಗ ಕೋಪ ಉಕ್ಕಿ, ಪ್ರೇಮದಿಂದ ಸಮಾಧಾನ ಉಂಟಾಗಿ ನಿರಾಳ ಭಾವ ಆವರಿಸುತ್ತದೆ.

Vinod Prabhakar ವರದ ಚಿತ್ರಕ್ಕೆ ಸಾಥ್ ಕೊಟ್ಟ Ganesh!

ತಾರಾಗಣ: ವಿನೋದ್ ಪ್ರಭಾಕರ್, ಚರಣ್‌ರಾಜ್, ಅಮಿತಾ ರಂಗನಾಥ್, ಅನಿಲ್ ಸಿದ್ದು, ಎಂ.ಕೆ. ಮಠ, ಅಶ್ವಿನಿ ಗೌಡ
ನಿರ್ದೇಶನ: ಉದಯಪ್ರಕಾಶ್
ರೇಟಿಂಗ್: ***

ನಿರ್ದೇಶಕ ಉದಯಪ್ರಕಾಶ್ ತಮಗೆ ಏನು ಹೇಳಬೇಕೋ ಅದನ್ನು ಸುತ್ತಿಬಳಸದೆ ಹೇಳದೆ ನೇರವಾಗಿ ಹೇಳಿದ್ದಾರೆ. ಮಾಸ್ ಸಿನಿಮಾದಲ್ಲಿ ಎಲ್ಲೆಲ್ಲಿ ಏನೇನಿರಬೇಕೋ ಅದನ್ನೆಲ್ಲಾ ಇಟ್ಟಿದ್ದಾರೆ. ಅದರಾಚೆಗೆ ಏನಾದರೂ ಹುಡುಕಿದರೆ ಅದು ಅವರವರ ಹೊಣೆಗಾರಿಕೆ. ಇಡೀ ಸಿನಿಮಾದಲ್ಲಿ ಎದ್ದು ಕಾಣುವುದು ಚರಣ್‌ರಾಜ್ ಮತ್ತು ವಿನೋದ್ ಪ್ರಭಾಕರ್. ಚರಣ್‌ರಾಜ್ ಹಸನ್ಮುಖ ಮತ್ತು ಲವಲವಿಕೆಯ ನಟನೆ ಈ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಅದಕ್ಕೆ ಸಮನಾಗಿ ವಿನೋದ್ ಪ್ರಭಾಕರ್ ಆಕೊ್ರೀಶ, ಒಳ್ಳೆಯತನ ಪ್ರಕಟಗೊಳ್ಳುವ ರೀತಿ ಅಚ್ಚರಿ ಹುಟ್ಟಿಸುತ್ತದೆ.

ವಿಲನ್ ಪಾತ್ರಧಾರಿ ಅನಿಲ್ ಸಿದ್ದು ತನ್ನಅಭಿನಯದಿಂದ ಗಮನ ಸೆಳೆಯುವುದು ಈ ಸಿನಿಮಾದ ವಿಶೇಷತೆ. ಜಾಸ್ತಿ ಯೋಚನೆ ಮಾಡದೆ ಸಿನಿಮಾ ನೋಡಿ ಮರುಳಾಗಿ ಆಸ್ವಾದಿಸಿ ಎದ್ದು ಬರುವವರಿಗೆ ವರದ ಸ್ನೇಹಮಯಿ. ತರ್ಕ, ಚಿಂತನೆ, ಘನಗಂಭೀರ ಸಂದೇಶಗಳನ್ನೆಲ್ಲಾ ಬಯಸುವವರು ವರದನಿಂದ ದೂರವಿರಿ.

Latest Videos
Follow Us:
Download App:
  • android
  • ios