ಮುಂಬೈ: ನೌಕರರ ವೇತನದ ಮೇಲೆ ಅತಿಯಾದ ವೆಚ್ಚ, ರೈತರ ಸಾಲ ಮನ್ನಾ ಹಾಗೂ ಜಿಎಸ್‌ಟಿ ಜಾರಿಯಿಂದ ಆದಾಯ ಕೊರತೆಯ ಪ್ರತಿಫಲವಾಗಿ ರಾಜ್ಯಗಳ ಹಣಕಾಸು ಗುರಿ 2017​-18ನೇ ಸಾಲಿನಲ್ಲಿ ಶೇ.031ರಷ್ಟುಕುಸಿದು ಶೇ.3.1ಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. 

ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುತ್ತಿದ್ದರೂ ಒಟ್ಟು ಹಣಕಾಸು ಕೊರತೆಯನ್ನು ನೀಗಿಸುವಲ್ಲಿ ರಾಜ್ಯ ಸರ್ಕಾರಗಳು ಸತತ ಮೂರನೇ ವರ್ಷವೂ ವಿಫಲವಾಗಿವೆ.

ದೇಶದೆಲ್ಲೆಡೆ ಸಾಲ ಮನ್ನಾವೊಂದೇ ಹಣಕಾಸು ಕೊರತೆಯ ಮೂರನೇ ಒಂದರಷ್ಟು ಪಾಲು ಪಡೆದಿದೆ. ಆದಾಯ ವೆಚ್ಚದ ಶೇ.0.13 ರಷ್ಟು ಹಣವನ್ನು ರೈತರ ಸಾಲ ಮನ್ನಾಕ್ಕೆ ವ್ಯಯಿಸಲಾಗಿದೆ. ರೈತರ ಸಾಲ ಮನ್ನಾ ಮಾಡಿದ ಮಾತ್ರಕ್ಕೆ ಉತ್ಪಾದನೆ ಹೆಚ್ಚಾಗಿದ್ದು ಕಂಡುಬಂದಿಲ್ಲ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ.