ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನಿಯಾಗಿರುವ ಚೀನಾ ಮೂಲದ ಶಿಯೋಮಿ ಮತ್ತೊಮ್ಮೆ ಅತ್ಯಾಧುನಿಕ ಫೋನ್‌ಗಳ ಮೂಲಕ ಗ್ರಾಹಕರ ಮುಂದೆ ಬರಲಿದೆ. ಡಿಸೆಂಬರ್ 28ರಂದು ಕಂಪನಿ ಚೀನಾದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಎಂಐ 11 ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಆದರೆ, ಬೆಲೆ ಎಷ್ಟಿರಲಿದೆ ಎಂಬ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.
ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಎಂಐ 11 ಸೀರಿಸ್ ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ದಿನಾಂಕ ಅಧಿಕೃತವಾಗಿಯೇ ಪ್ರಕಟಿಸಲಾಗಿದೆ. ಇದೇ ಡಿಸೆಂಬರ್ 28ರಂದು ಚೀನಾದಲ್ಲಿ ಎಂಐ 11 ಸೀರಿಸ್ ಸ್ಮಾರ್ಟ್‌ಫೋನ್‌ಗಳು ಚೀನಾ ಮಾರುಕಟ್ಟೆಗೆ ಅನಾವರಣಗೊಳ್ಳಲಿವೆ.
ಈ ತಿಂಗಳ ಆರಂಭದಲ್ಲಿ ಕ್ವಾಲಕಾಂ ಘೋಷಣೆ ಮಾಡಿ, ಸ್ನ್ಯಾಪ್‌ಡ್ರಾಗನ್ 888 5ಜಿ ಪ್ರೊಸೆಸರ್ 2021ರ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಾಗಲಿದೆ ಎಂದು ಹೇಳಿತ್ತು. ಆ ಬಳಿಕ ಶಿಯೋಮಿ ಮಾಹಿತಿ ನೀಡಿ, ಸ್ನ್ಯಾಪ್‌ಡ್ರಾಗನ್ 888 5ಜಿ ಆಧರಿತ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಕಂಪನಿಯ ಮೊದಲ ಸ್ನ್ಯಾಪ್‌ಡ್ರಾಗನ್ 888 ಆಧರಿತ ಎಂಐ 11 ಸ್ಮಾರ್ಟ್‌ಫೋನ್ ಅನ್ನು ಶಿಯೋಮಿ ಬಿಡುಗಡೆ ಮಾಡುತ್ತಿದೆ.
ನಾಲ್ಕು ಹೊಸ ಮಾಡೆಲ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ಶಿಯೋಮಿ ಎಂಐ 11 ಸೀರಿಸ್ ಫೋನ್‌ಗಳು ಡಿಸೆಂಬರ್ 28ರಂದು ಸಂಜೆ 7.30ಕ್ಕೆ ಅನಾವರಣಗೊಳ್ಳಲಿವೆ. ಆದರೆ, ಎಂಐ 11 ಸೀರಿಸ್ ಫೋನ್‌ಗಳಲ್ಲಿರುವ ವೆರಿಯೆಂಟ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಈ ವರೆಗೂ ಬಿಟ್ಟುಕೊಟ್ಟಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಫೋನ್ ಹೊಂದಿರುವ ಫೀಚರ್‌ಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದು ಎನ್ನುತ್ತದೆ ಗಿಜ್ಮೋಚೀನಾ ಜಾಲತಾಣದ ವರದಿ.
ಸಿಎಂಐಐಟಿ, 3ಸಿ ಮತ್ತು ಗೀಕ್‌ಬೆಂಚ್‌ಗಳಲ್ಲಿ ಈ ಹಿಂದೆ ಕಾಣಿಸಿಕೊಂಡ ಶಿಯೋಮಿ ಎಂ2011ಕೆಟುಸಿ ಫೋನ್ ಶಿಯೋಮಿ ಎಂಐ 11 ಸೀರಿಸ್ ಫೋನ್‌ಗಳಾಗಿರಬಹುದು ಎಂದು ನಂಬಲಾಗುತ್ತಿದೆ. ಎಂಐ 10 ಸೀರಿಸ್ ರೀತಿಯಲ್ಲೇ ಎಂಐ 11 ಲೈನ್‌ಅಪ್ ಕೂಡ ಎರಡು ಮಾದರಿಯ ಫೋನ್‌ಗಳನ್ನು ಹೊಂದಿರಬಹುದು. ಶಿಯೋಮಿ ಎಂಐ 11 ಮತ್ತು ಎಂಐ 11 ಪ್ರೋ. ಎಂ2011ಕೆ2ಸಿ ಮಾಡೆಲ್ ನಂಬರ್ ವೆನಿಲ್ಲಾ ಮಾಡೆಲ್‌ಗೆ ಸಂಬಂಧಿಸಿದ್ದಾಗಿರಬಹುದು ಎಂದು ಭಾವಿಸಲಾಗುತ್ತಿದೆ.
ಶಿಯೋಮಿ ಎಂಐ 11 ಬೆಲೆಯ ಎಷ್ಟು ಎಂಬುದನ್ನು ಮುಂದಿನ ವಾರದ ಫೋನ್ ಬಿಡುಗಡೆಯ ಸಂದರ್ಭದಲ್ಲೇ ಘೋಷಿಸುವ ಸಾಧ್ಯತೆಯೂ ಇದೆ. ಹೀಗಿದ್ದಾಗ್ಯೂ, ಮಾಧ್ಯಮಗಳ ವರದಿಯ ಪ್ರಕಾರ, ಎಂಐ 11 ಸೀರಿಸ್ ಫೋನ್‌ಗಳ ಬೆಲೆಯುವ 45,100 ರೂಪಾಯಿಯಿಂದ 50,700 ರೂಪಾಯಿವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗೆಯೇ ಎಂಐ 11 ಪ್ರೋ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 60 ಸಾವಿರ ರೂಪಾಯಿಯಿಂದ 62 ಸಾವಿರ ರೂಪಾಯಿಯವರೆಗೂ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಕಂಪನಿ ಈ ವರೆಗೂ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಫೋನ್ ಬಿಡುಗಡೆ ದಿನಾಂಕವನ್ನು ಮಾತ್ರ ಈಗ ಕಂಪನಿ ಖಚಿತಪಡಿಸಿದೆ.
ಜಿಯೋಗೆ ಸೆಡ್ಡು: ಕಡಿಮೆ ದರದಲ್ಲಿ ಎಕ್ಸ್‌ಕ್ಲೂಸಿವ್ ಪ್ಲ್ಯಾನ್ ಆರಂಭಿಸಿದ Vi
ವಿಶೇಷತೆಗಳೇನಿರಬಹುದು?
ಈ ತಿಂಗಳ ಆದಿಯಲ್ಲಿ ನಡೆದ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ ಟೆಕ್ ಶೃಂಗದಲ್ಲಿ ಸಿಇಒ ಲೀ ಜುನ್ ಅವರು ಘೋಷಣೆ ಮಾಡಿ, ಶಿಯೋಮಿ ಎಂಐ 11 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 888 ಎಸ್ಒಸಿ ಪ್ರೊಸೆಸರ್ ಒಳಗೊಂಡ ಕಂಪನಿಯ ಮೊದಲ ಫೋನ್ ಆಗಿರಲಿದೆ ಎಂದು ಹೇಳಿದ್ದರು. ಈ ಮಾಹಿತಿಯೊಂದನ್ನು ಹೊರತುಪಡಿಸಿ ಎಂಐ 11 ಸೀರಿಸ್ ಫೋನ್‌ಗಳ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪನಿ ಈವರೆಗೆ ಬಿಟ್ಟುಕೊಟ್ಟಿಲ್ಲ. ಹಾಗಿದ್ದಾಗ್ಯೂ, ಈ ಸ್ಮಾರ್ಟ್ ಫೋನ್, 120ಎಚ್‌ಜೆಡ್ ರೀಫ್ರೆಶ್ ರೇಟ್‌ನೊಂದಿಗೆ ಕ್ಯುಎಚ್‌ಡಿ ಮತ್ತು ಎಎಂಎಲ್ಇಡಿ ಇರುವ 6 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗುತ್ತಿದೆ. ಜೊತೆಗೆ, 108 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ, 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಕ್ಯಾಮರಾಗಳ ಸೆಟ್‌ಅಪ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಇರಲಿದೆ ಎಂದೂ ಹೇಳಲಾಗುತ್ತಿದೆ.
ಈ ಫೋನ್ ಆಂಡ್ರಾಯ್ಡ್ 11 ಒಎಸ್ ಹೊಂದಿದ್ದು 12 ಜಿಬಿ ರ್ಯಾಮ್ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆಯಾದರೂ ಶಿಯೊಮಿ ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಫೋನ್ ಬಿಡುಗಡೆಗೆ ಇನ್ನು ವಾರವಷ್ಟೇ ಉಳಿದಿರುವುದರಿಂದ ಮಾಹಿತಿಗಳು ಗೊತ್ತಾಗಬಹುದು ಎಂದು ಹೇಳಲಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 22, 2020, 2:03 PM IST