Asianet Suvarna News Asianet Suvarna News

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದಿಸಿ ಜಾಗತಿಕ ರಫ್ತಿಗೆ ಚೀನಾ ಕಂಪನಿ Xiaomi, Oppo, Vivo ಚಿಂತನೆ!

ಭಾರತದಲ್ಲಿ ಸ್ಮಾರ್ಟ್‌ಫೋನ್ ತಯಾರಿಸಲು ಶಾಓಮಿ ಡಿಕ್ಸನ್‌ ಜತೆ  ಮಾತುಕತೆ ನಡೆಸುತ್ತಿದ್ದು, ಓಪ್ಪೋ ಮತ್ತು ವಿವೋ ಲಾವಾ ಜೊತೆಗೆ ಚರ್ಚೆಯನ್ನು ಪ್ರಾರಂಭಿಸಿವೆ ಎಂದು ವರದಿಗಳು ತಿಳಿಸಿವೆ

Xiaomi Oppo Vivo plan to make more phones in India and export them globally mnj
Author
Bengaluru, First Published Mar 12, 2022, 12:34 PM IST

Tech Desk: ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳಾದ ಶಾಓಮಿ, ಓಪ್ಪೋ ಮತ್ತು ವಿವೋ ಭಾರತದಲ್ಲಿ ಫೋನ್‌ಗಳನ್ನು ತಯಾರಿಸಲು ಮತ್ತು ಅವುಗಳನ್ನು ಇತರ ಮಾರುಕಟ್ಟೆಗಳಿಗೆ ರಫ್ತು ಮಾಡಲು ಭಾರತೀಯ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಲೈವ್‌ಮಿಂಟ್‌ನ ಹೊಸ ವರದಿಯ ಪ್ರಕಾರ,  ಶಾಓಮಿ, ಓಪ್ಪೋ ಮತ್ತು ವಿವೋ ಭಾರತದಲ್ಲಿ ಫೋನ್‌ಗಳನ್ನು ಜೋಡಿಸಲು ಮತ್ತು ಈ ವರ್ಷದ ಆರಂಭದಲ್ಲಿ ಅವುಗಳನ್ನು ರಫ್ತು ಮಾಡಲು ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್ ಮತ್ತು ಡಿಕ್ಸಾನ್‌ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್  ಜೊತೆಗೆ ಮಾತುಕತೆ ನಡೆಸುತ್ತಿವೆ.  ಈ ವಿಷಯದ ಕುರಿತು ಪ್ರಸ್ತುತ ಈ ಕಂಪನಿಗಳು ಯಾವುದೇ ಮಾಹಿತಿ ನೀಡಿಲ್ಲ. 

ಶಾಓಮಿ ಡಿಕ್ಸನ್‌ ಜತೆ  ಮಾತುಕತೆ ನಡೆಸುತ್ತಿದ್ದು, ಓಪ್ಪೋ ಮತ್ತು ವಿವೋ ಲಾವಾ ಜೊತೆಗೆ ಚರ್ಚೆಯನ್ನು ಪ್ರಾರಂಭಿಸಿವೆ ಎಂದು ವರದಿಗಳು ತಿಳಿಸಿವೆ.  ವಿವೋ ಈ ಹಿಂದೆ ಭಾರತದಲ್ಲಿ ತನ್ನ ವಾರ್ಷಿಕ ಉತ್ಪಾದನೆಯನ್ನು 60 ಮಿಲಿಯನ್ ಯೂನಿಟ್‌ಗಳಿಗೆ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿತ್ತು ಮತ್ತು 2022 ರ ಅಂತ್ಯದ ವೇಳೆಗೆ ರಫ್ತುಗಳನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು. 

PLI ಯೋಜನೆಯಿಂದ ಲಾಭ: ಎಲ್ಲಾ ಕಂಪನಿಗಳು ಉತ್ಪಾದನೆಯನ್ನು ಪ್ರಾರಂಭಿಸಲು ಸರ್ಕಾರದ ಪ್ರೋಡಕ್ಷನ್-ಲಿಂಕ್ಡ್ ಇನ್ಸೆಂಟಿವ್ ಅಥವಾ‌ ಪಿಎಲ್‌ಐ (PLI) ಯಿಂದ ಲಾಭ ಪಡೆಯಲು ಎದುರು ನೋಡುತ್ತಿವೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಕೇಂದ್ರವಾಗಿ ಭಾರತವನ್ನು ಅಭಿವೃದ್ಧಿಪಡಿಸಲು ಸರ್ಕಾರವು ಸ್ವಲ್ಪ ಸಮಯದವರೆಗೆ ಸ್ಮಾರ್ಟ್‌ಫೋನ್ ತಯಾರಕರನ್ನು ಸ್ವಾಗತಿಸುತ್ತಿದೆ. ಈ ಬೆನ್ನಲ್ಲೇ ಪಿಎಲ್‌ಐಅನ್ನು 2020 ರಲ್ಲಿ ಪರಿಚಯಿಸಲಾಯಿತು.

ಇದನ್ನೂ ಓದಿRedmi 10 ಮಾರ್ಚ್ 17 ಕ್ಕೆ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು? ಏನೆಲ್ಲಾ ವಿಶೇಷತೆಗಳಿವೆ?

ಚೀನಾದ ನಂತರ ಭಾರತ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದೆ. ಆದರೂ, ದೇಶವು ತನ್ನ ಎಲೆಕ್ಟ್ರಾನಿಕ್ಸ್ ಬಳಕೆಗಾಗಿ ಹೆಚ್ಚಾಗಿ ಇತರ ಪ್ರದೇಶಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ದೇಶದಲ್ಲಿ ತಮ್ಮ ಫೋನ್‌ಗಳನ್ನು ಜೋಡಿಸಲು ಪ್ರಾರಂಭಿಸಿದ್ದಾರೆ, ಆದರೆ ಇತ್ತೀಚಿನ ಹೆಜ್ಜೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತದೆ.

ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಸವಾಲು:   ಸ್ಮಾರ್ಟ್‌ಫೋನ್ ತಯಾರಕರು ಒಂದು ದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಉತ್ಸುಕರಾಗಿದ್ದಾರೆ. ಚಿಪ್ ಕೊರತೆ, ಕೊರೋನಾ ಸಾಂಕ್ರಾಮಿಕ ಮತ್ತು ಭೌಗೋಳಿಕ ರಾಜಕೀಯ ಸಂಚಲನ ಸೇರಿದಂತೆ ಹಲವು ವಿಷಯಗಳು ಕಳೆದ ಎರಡು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಸವಾಲಾಗಿವೆ. ಯುನೈಟೆಡ್ ಸ್ಟೇಟ್ಸ್‌ ಮತ್ತು ಚೀನಾ ನಡುವಿನ  ವ್ಯಾಪಾರ ಪೈಪೋಟಿಯಿಂದಾಗಿ ಸ್ಮಾರ್ಟ್‌ಫೋನ್ ತಯಾರಕರನ್ನು ತಮ್ಮ ಕಾರ್ಯತಂತ್ರವನ್ನು ಮರು ಆಲೋಚಿಸಲು ಒತ್ತಾಯಿಸಿದೆ ಎಂದು ವರದಿ ತಿಳಿಸಿದೆ. 

ಇದನ್ನೂ ಓದಿPM Modi Post-Budget Webinar: ಕೇವಲ ದೀಪಗಳನ್ನ ಖರೀದಿಸುವುದು 'ವೋಕಲ್‌ ಫಾರ್‌ ಲೋಕಲ್' ಅಲ್ಲ: ಪ್ರಧಾನಿ

ಮುಂಬರುವ ವರ್ಷಗಳಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಪ್ರಾರಂಭವಾಗಲಿದೆ.  ಡೇಲೋಯ್ಟನ್ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗಳು 2022 ರಿಂದ 2026 ರವರೆಗೆ 1.7 ಶತಕೋಟಿ ಯೂನಿಟ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಅಲ್ಲದೇ ಪ್ರಮುಖ ನೀತಿ ಸುಧಾರಣೆಗಳು ಮತ್ತು ಟೆಲಿಕಾಂ ಕಂಪನಿಗಳು ತಮ್ಮ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವ ಹಿನ್ನೆಲೆಯಲ್ಲಿ $250 ಶತಕೋಟಿ ಮಾರುಕಟ್ಟೆಯನ್ನು ಸೃಷ್ಟಿಸುತ್ತವೆ.

2026 ರ ವೇಳೆಗೆ ಭಾರತವು ಸುಮಾರು 1 ಶತಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಲಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಾಗಲಿದೆ ಎಂದು ಅದೇ ವರದಿ ಸೂಚಿಸಿದೆ. ಸರ್ಕಾರದ  ಪ್ರೋತ್ಸಾಹ ಕಾರ್ಯಕ್ರಮವು ಭಾರತದಲ್ಲಿ ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 2020 ರ ಮಧ್ಯದಲ್ಲಿ ಅನಾವರಣಗೊಂಡಾಗಿನಿಂದ ಹಲವಾರು  ಕಂಪನಿಗಳು ಸರ್ಕಾರಿ ಪ್ರೋತ್ಸಾಹ ಕಾರ್ಯಕ್ರಮಕ್ಕೆ ಸಹಿ ಹಾಕಿವೆ. ಐದರಿಂದ ಆರು ವರ್ಷಗಳಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ $150 ಬಿಲಿಯನ್ ಅನ್ನು ರಚಿಸುವ ಗುರಿಯನ್ನು ಪ್ರೋಗ್ರಾಂ ಹೊಂದಿದೆ.

Follow Us:
Download App:
  • android
  • ios