Asianet Suvarna News Asianet Suvarna News

ಜುಲೈನ‌ಲ್ಲಿ Xiaomi 12 Ultra ಲಾಂಚ್? ಈ ಫೋನ್ ಕ್ಯಾಮೆರಾದ ವಿಶೇಷತೆ ಏನು?

*ಚೀನಾ ಮೂಲದ ಶವೊಮಿ ಮತ್ತೊಂದು ಜಬರ್‌ದಸ್ತ್ ಫೋನ್ ಲಾಂಚ್ ಮಾಡಲಿದೆ
*ಶವೊಮಿ 12 ಅಲ್ಟ್ರಾ ಹೊಸ ಮಾರುಕಟ್ಟಗೆ ಲಾಂಚ್ ಆಗಲಿರುವ ಸ್ಮಾರ್ಟ್‌ಫೋನ್ ಆಗಿದೆ
*ಕ್ಯಾಮೆರಾ ಸೇರಿದಂತೆ ವಿಶಿಷ್ಟ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಸಾಧ್ಯತೆ

Xiaomi 12 Ultra may launch in July and check details about phone
Author
Bengaluru, First Published Jun 28, 2022, 9:25 AM IST

ಸ್ಮಾರ್ಟ್‌ಫೋನ್ ಉತ್ಪಾದಕ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಶವೊಮಿ (Xiaomi) ಬೃಹತ್ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿದೆ. ಭಾರತವು ಸೇರಿದಂತೆ ಜಗತ್ತಿನ ಎಲ್ಲ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಮೇಲೆ ಪ್ರಭುತ್ವವನ್ನ ಸಾಧಿಸುತ್ತಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಶವೊಮಿ ಈಗ ಮತ್ತೊಂದು ವಿಶಿಷ್ಟ ಫೋನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ಮುಂದಾಗಿದೆ. ಅಂದ ಹಾಗೆ,  ಶವೊಮಿ 12 ಅಲ್ಟ್ರಾ (Xiaomi 12 ultra) ಪ್ರಮುಖ ಸ್ಮಾರ್ಟ್‌ಫೋನ್ ಜುಲೈನಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ ವಿವಿಧ ಮಾಧ್ಯಮಗಳ ವರದಿಗಳು ಖಚಿತಪಡಿಸುತ್ತಿವೆ. ಈ ವರ್ಷ ಗ್ರಾಹಕರಿಗೆ Xiaomi 12S ಅಲ್ಟ್ರಾ ಎಂದು ಫೋನ್  ಆಗಿ ಜನಪ್ರಿಯವಾಗುವ ಸಾಧ್ಯತೆಗಳಿರುವುದನ್ನು ತಳ್ಳಿ ಹಾಕುವಂತಿಲ್ಲ. ಶವೊಮಿ (Xiaomi) ಕೆಲವು ತಿಂಗಳ ಹಿಂದೆ ತನ್ನ ಸ್ಮಾರ್ಟ್‌ಫೋನ್ ಕ್ಯಾಮೆರಾಗಳಿಗಾಗಿ ಲೈಕಾ (Leica) ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿತ್ತು ಮತ್ತು ಶವೊಮಿ 12ಎಸ್ ಅಲ್ಟ್ರಾ ( Xiaomi 12S Ultra) ಹೊಸ ತಂತ್ರಜ್ಞಾನವನ್ನು ತೋರಿಸುವ ಮೊದಲ ಸಾಧನವಾಗಿದೆ ಎಂದು ನಿರೀಕ್ಷಿಸಲಾಗಿದೆ. ಮೂಲಗಳು ಪ್ರಕಾರ, ಗ್ಯಾಜೆಟ್ ಮುಂಬರುವ Xiaomi 12S ಸರಣಿಯ ಭಾಗವಾಗಿರುತ್ತದೆ. ಈಗ ಬಿಡುಗಡೆಯಾಗಲಿರುವ  Xiaomi ಹೊಸ ಗ್ಯಾಜೆಟ್, ಕಳೆದ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಶವೊಮಿ ಎಂಐ 11 ಅಲ್ಟ್ರಾ (Xiaomi Mi 11 Ultra) ಸ್ಮಾರ್ಟ್‌ಫೋನ್‌ ಉತ್ತರಾಧಿಕಾರಾಗಿರಲಿದೆ.

ಶವೊಮಿ 12 ಅಲ್ಟ್ರಾ ಅಧಿಕೃತವಾಗಿ ಯಾವಾಗ ಬಿಡುಗಡೆ ಮಾಡಲಿದೆ ಎಂದು ಕಂಪನಿ ದಿನಾಂಕವನ್ನು ಖಚಿತಪಡಿಸಿಲ್ಲ. ಆದರೆ, ಸೋರಿಕೆಯಾಗಿರುವ ಕೆಲವು ಮಾಹಿತಿಗಳ ಪ್ರಕಾರ, ಈ ಫೋನ್ ಲಾಂಚ್‌ಗೆ ಸಂಬಂಧಿಸಿದಂತೆ ಮುಂದಿನ ವಾರ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. Xiaomi 12S Ultra ಬಹುಶಃ ಇತ್ತೀಚಿನ Snapdragon 8 Gen+ 1 CPU ಅನ್ನು ಬಳಸಿಕೊಳ್ಳುತ್ತಿರುವ ಫೋನ್‌ಗಳಲ್ಲಿ ಮೊದಲನೆಯ ಫೋನ್ ಆಗಿದೆ ಎಂದು ಹೇಳಲಾಗುತ್ತಿದೆ. 

Apple Watchನಲ್ಲಿ YouTube ವೀಡಿಯೊ ವೀಕ್ಷಿಸಲು ಹೀಗ್ ಮಾಡಿ

Xiaomi 12S ಅಲ್ಟ್ರಾವು 50- ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 48- ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸಿಸ್ಟಮ್ ಅನ್ನು ಒಳಗೊಂಡಿದೆ ಎಂದು ಎಂದದು ಹೇಳಲಾಗುತ್ತಿದೆ ಮತ್ತು ಇದಕ್ಕೆ ಮುಖ್ಯ ಕಾರಣ ಲೈಕಾ ಎಂದು ನಂಬಲಾಗಿದೆ. ಲೈಕಾ ತನ್ನ ಸ್ವಾಮ್ಯದ ಅಲ್ಗಾರಿದಮ್ ಬಳಸಿ ಛಾಯಾಚಿತ್ರಗಳನ್ನು ಸುಧಾರಿಸುತ್ತದೆ.

ಮೂಲಗಳ ಪ್ರಕಾರ, Xiaomi 12S ಅಲ್ಟ್ರಾವು 120Hz ನ ರಿಫ್ರೆಶ್ ದರದೊಂದಿಗೆ QHD+ AMOLED ಡಿಸ್ ಪ್ಲೇ ಮತ್ತು LTPO ಪ್ಯಾನೆಲ್ ಅನ್ನು ಒಳಗೊಂಡಿರುತ್ತದೆ. ಪ್ರೊಸೆಸರ್ 12 GB RAM ಮತ್ತು 512 GB ಸಂಗ್ರಹದೊಂದಿಗೆ ಬರುವ ನಿರೀಕ್ಷೆಯಿದೆ. ಈ ವರ್ಷದ ಪ್ರಮುಖ Xiaomi ಫೋನ್ 67 W ವೈರ್ಡ್ ಮತ್ತು 50 W ವೈರ್‌ಲೆಸ್ ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 4800 mAh ಅಂತರ್ನಿರ್ಮಿತ ಬ್ಯಾಟರಿಯನ್ನು ಒಳಗೊಂಡಿರಬಹುದು. 

Nothing Phone 1 ಖರೀದಿಸಬೇಕಾ? ಸ್ಪೇಷಲ್ ಆಮಂತ್ರಣ ಬೇಕು!

ಶವೊಮಿಯ ಈ ಹೊಸ ಫೋನ್, ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಒನ್‌ಪ್ಲಸ್ 10 ಪ್ರೋ (OnePlus 10 Pro), ಐಕ್ಯೂ 9 ಪ್ರೋ (iQoo 9 Pro), ವಿವೋ ಎಕ್ಸ್ ಪ್ರೋ ಸರಣಿ (Vivo X Pro) ಸ್ಮಾರ್ಟ್‌ಫೋನ್‌ಗಳ ಜತೆ ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಜತೆಗೆ ಇದು ಪ್ರೀಮಿಯಂ ಸೆಗ್ಮೆಂಟ್ನ ಸ್ಮಾರ್ಟ್ ಫೋನ್ ಆಗಿರಬಹುದು ಎಂದು ಹೇಳಲಾಗತ್ತಿದೆ.ಆದರೆ, ಈ ಫೋನ್ ಬೆಲೆ ಎಷ್ಟಿರಬಹುದು ಎಂಬ ಯಾವುದೇ ಸುಳಿವನ್ನು ಕಂಪನಿಯು ಇದುರೆಗೂ  ಬಿಟ್ಟುಕೊಟ್ಟಿಲ್ಲ. ಸ್ಮಾರ್ಟ್‌ಫೋನ್ ಲಾಂಚ್ ಆದ ಬಳಿಕ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ. ಅಲ್ಲಿಯವರೆಗೆ ಕಾಯಬೇಕಷ್ಟೇ. \

Follow Us:
Download App:
  • android
  • ios