Asianet Suvarna News Asianet Suvarna News

ಜಗತ್ತಿನಾದ್ಯಂತ WhatsApp Down, ಗ್ರೂಪ್‌ ಚಾಟ್‌, ಪರ್ಸನಲ್‌ ಚಾಟ್‌ ಕೆಲಸ ಮಾಡದಿರಲು ಇಲ್ಲಿದೆ ಕಾರಣ

Whatsapp Down: ಜಗತ್ತಿನಲ್ಲಿ ಅತಿಹೆಚ್ಚು ಮಂದಿ ಸಂವಹನಕ್ಕೆ ಬಳಸುವುದು ವಾಟ್ಸ್‌ಆಪ್‌. ವಾಟ್ಸ್‌ಆಪ್‌ ಒಂದು ನಿಮಿಷ ಇಲ್ಲವೆಂದರೆ ತಲೆ ಸಿಡಿದು ಹೋಗುತ್ತದೆ. ಇಂದು ಮಧ್ಯಾಹ್ನ 12 ಗಂಟೆಯ ನಂತರ ವಾಟ್ಸ್‌ಆಪ್‌ ಕೆಲಸ ನಿಲ್ಲಿಸಿದೆ. ಜಗತ್ತಿನಾದ್ಯಂತ ವಾಟ್ಸ್‌ಆಪ್‌ ಡೌನ್‌ ಆಗಿದೆ.

whatsapp group chat personal chat down globally here is the reason
Author
First Published Oct 25, 2022, 1:13 PM IST

ಬೆಂಗಳೂರು: ಜಗತ್ತಿನಾದ್ಯಂತ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ WhatsApp ಕೆಲಸ ಮಾಡುತ್ತಿಲ್ಲ. ಎಲ್ಲರೂ ಮೊದಲಿಗೆ ತಮ್ಮ ಮೊಬೈಲ್‌ ಇಂಟರ್‌ನೆಟ್‌ ಸಮಸ್ಯೆ ಇರಬಹುದು ಎಂದು ಐದಾರು ಬಾರಿ ಫ್ಲೈಟ್‌ ಮೋಡ್‌ಗೆ ಹಾಕಿ, ಸ್ವಿಚ್‌ ಆಫ್‌ ಸ್ವಿಚ್‌ ಆನ್‌ ಮಾಡಿ ಪ್ರಯತ್ನಿಸಿರುತ್ತೀರಿ. ನಂತರ ಬೇರೆ ಆಪ್‌ಗಳನ್ನು ತೆಗೆದು ಪರಿಶೀಲಿಸಿರುತ್ತೀರಿ. ಆಮೇಲೆ ಅಯ್ಯೋ WhatsApp ಏನೋ ಸಮಸ್ಯೆಯಿದೆ ಎಂದು ಗೂಗಲ್‌, ಫೇಸ್‌ಬುಕ್‌ ಅಥವಾ ಟ್ವಿಟ್ಟರ್‌ ಮೊರೆ ಹೋಗಿರುತ್ತೀರಿ ಅಲ್ಲವೇ. ಸಾಮಾನ್ಯವಾಗಿ ಎಲ್ಲರೂ ಮಾಡಿದ್ದು ಇದನ್ನೇ. ವಾಟ್ಸ್‌ಆಪ್‌ ಕೆಲಸ ನಿಲ್ಲಿಸಿ ನಿಮಿಷದೊಳಗೆ ಸಾವಿರಾರು ಜನ ಟ್ವಿಟ್ಟರ್‌ ಮೊರೆ ಹೋಗಿದ್ದಾರೆ. ವಾಟ್ಸ್‌ಆಪ್‌ ವರ್ಕ್‌ ಆಗುತ್ತಿಲ್ಲ ಯಾಕೆ ಎಂದು ವಾಟ್ಸ್‌ಆಪ್‌ ಟ್ವಿಟ್ಟರ್‌ ಖಾತೆಯನ್ನು ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ. ಇದು ಕೇವಲ ಭಾರತದಲ್ಲಿನ ಸಮಸ್ಯೆಯಲ್ಲ. ವಾಟ್ಸ್‌ಆಪ್‌ ಜಾಗತಿಕವಾಗಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿದೆ. 

ಟ್ವಿಟ್ಟರ್‌ನಲ್ಲಿ ಶುರುವಾಗಿದೆ ಮೀಮ್ಸ್‌:

 

 

ಸೂರ್ಯ ಗ್ರಹಣವಲ್ಲ ಕಾರಣ:

ಸಾಮಾಜಿಕ ಜಾಲತಾಣದಲ್ಲಿ ಹಲವರು ಗ್ರಹಣದಿಂದ ವಾಟ್ಸ್‌ಆಪ್‌ ಕಾರ್ಯ ಸ್ಥಗಿತಗೊಂಡಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ಧಾರೆ. ಆದರೆ ಸೂರ್ಯ ಗ್ರಹಣ ಇನ್ನೂ ಆರಂಭವೇ ಆಗಿಲ್ಲ. ರಷ್ಯಾ, ಉಜ್ಬೇಕಿಸ್ತಾನ, ಖಜಕ್‌ಸ್ತಾನದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಸಂಜೆ ಐದರ ನಂತರವಷ್ಟೇ ಗ್ರಹಣವಾಗಲಿದೆ. ಗ್ರಹಣಕ್ಕೂ ವಾಟ್ಸ್‌ಆಪ್‌ ಡೌನ್‌ ಆಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೊಂದು ವೇಳೆ ಗ್ರಹಣದಿಂದ ವಾಟ್ಸ್‌ಆಪ್‌ ನಿಲ್ಲುವುದಾದರೆ, ಫೇಸ್‌ಬುಕ್‌, ಟ್ವಿಟ್ಟರ್‌ ಅಷ್ಟೇ ಏಕೆ ಮೊಬೈಲ್‌ ಅಂತರ್ಜಾಲ ಮತ್ತು ನೆಟ್‌ವರ್ಕ್‌ ಕೂಡ ಕಾರ್ಯ ನಿಲ್ಲಿಸಬೇಕು. ಟ್ವೀಟಿಗರ ಗ್ರಹಣದ ಕತೆಯಲ್ಲಿ ಯಾವುದೇ ಲಾಜಿಕ್‌ ಇಲ್ಲ. 

 

ಇದನ್ನೂ ಓದಿ: Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

ವಾಟ್ಸ್‌ಆಪ್‌ ಸರ್ವರ್‌ ಸಮಸ್ಯೆ:

ಸಾಮಾನ್ಯವಾಗಿ ವಾಟ್ಸ್‌ಆಪ್‌ ಅಥವಾ ಯಾವುದೇ ಒಂದು ಆಪ್‌ ವರ್ಕ್‌ ಆಗದಿದ್ದರೆ ಅದರ ಹಿಂದೆ ತಾಂತ್ರಿಕ ದೋಷವಿರುತ್ತದೆ. ಸರ್ವರ್‌ ಡೌನ್‌ ಆದರೆ ಅದನ್ನು ಮತ್ತೆ ಸರಿ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ಹಿಂದೆಯೂ ಒಮ್ಮೆ ವಾಟ್ಸ್‌ಆಪ್‌ ಕೆಲ ಕಾಲ ಕಾರ್ಯ ನಿಲ್ಲಿಸಿತ್ತು. ಆಗಲೂ ಇದೇ ರೀತಿಯ ತಾಂತ್ರಿಕ ದೋಷ ಸಮಸ್ಯೆಗೆ ಕಾರಣವಾಗಿತ್ತು. ಈ ಬಾರಿಯೂ ಇದೇ ರೀತಿಯ ಸರ್ವರ್‌ ಸಂಬಂಧಿತ ಸಮಸ್ಯೆ ಆಗಿರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ವಾಟ್ಸ್‌ಆಪ್‌ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. 

whatsapp group chat personal chat down globally here is the reason

Follow Us:
Download App:
  • android
  • ios