Asianet Suvarna News Asianet Suvarna News

ಹೊಸ ವರ್ಷಕ್ಕೆ ಹೊಸ ಫೋನ್! ಮಾರುಕಟ್ಟೆಗೆ ಬಜೆಟ್ ಸ್ಮಾರ್ಟ್‌ಫೋನ್: ಬೆಲೆ, ಫೀಚರ್ಸ್

ಈಗ ಬಜೆಟ್ ಸ್ಮಾರ್ಟ್‌ಫೋನ್‌ಗಳದ್ದೇ ಹವಾ. ಒಂದಿಷ್ಟು ಸಮಯ ಬಳಸಿ, ಹಳೆ ಫೋನನ್ನು ಬದಲಾಯಿಸಿ ಹೊಸ ಫೋನ್‌ಗಳನ್ನು ಕೊಳ್ಳುವ ಖಯಾಲಿ ಯುವಪೀಳಿಗೆಯದ್ದು. ಮಾರುಕಟ್ಟೆಗೆ ಎಂಟ್ರಿ ನೀಡಿರುವ ಹೊಸ ಫೋನ್ ಡೀಟೆಲ್ಸ್ ಇಲ್ಲಿದೆ.
 

Vivo Y11 Smartphone launched India Price Features
Author
Bengaluru, First Published Dec 27, 2019, 1:14 PM IST
  • Facebook
  • Twitter
  • Whatsapp

ಬೆಂಗಳೂರು (ಡಿ.27): ಹೊಸ ವರ್ಷಕ್ಕೆ ಹೊಸ ಮೊಬೈಲ್ ಕೊಳ್ಳುವವರಿಗೆ, ವಿವೋ ಇದೀಗ ಬಜೆಟ್ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಡ್ಯುಯೆಲ್ ಕ್ಯಾಮರಾ, 5000 ಎಂಎಎಚ್ ಬ್ಯಾಟರಿ ಹೊಂದಿರುವ ಬಜೆಟ್ ಸ್ಮಾರ್ಟ್‌ ಫೋನನ್ನು ತನ್ನ Y ಸೀರೀಸ್‌ನಲ್ಲಿ ವಿವೋ ಬಿಡುಗಡೆ ಮಾಡಿದೆ. ಆ ಫೋನ್ ಹೆಸರು ವಿವೋ Y11. 

ಇದನ್ನೂ ಓದಿ | ಹ್ಯಾಪಿ ನ್ಯೂ ಇಯರ್ ಕಣೋ! ಹೊಸ ವರ್ಷಕ್ಕೆ ಹೊಸ ಆಫರ್ ಪ್ರಕಟಿಸಿದ ಜಿಯೋ...

13 ಹಾಗೂ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಡ್ಯುಯೆಲ್ ಕ್ಯಾಮೆರಾ ಸ್ಮಾರ್ಟ್ ಆಗಿ ಚಿತ್ರಗಳನ್ನು ಸೆರೆ ಹಿಡಿಯಲಿದೆ ಎಂದು ಕಂಪೆನಿ ತಿಳಿಸಿದೆ. 
ಕಡಿಮೆ ದರದ ಮೊಬೈಲ್ ಆಗಿದ್ದರೂ 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರುವುದು ಮತ್ತೊಂದು ವಿಶೇಷ. 6.35 ಇಂಚಿನ ಸ್ಕ್ರೀನ್ ಇದೆ. 

3 GB RAM, 32GB ಸ್ಟೋರೇಜ್ ಇದೆ. ಸ್ನಾಪ್ ಡ್ರ್ಯಾಗನ್ 439 ಚಿಪ್‌ಸೆಟ್ ಇನ್ನೊಂದು ಪ್ಲಸ್ ಪಾಯಿಂಟ್. ಆ್ಯಂಡ್ರಾಯ್ಡ್ 9 ಮೂಲಕ ಕಾರ್ಯಾಚರಿಸಲಿದೆ.  ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ಈ ಫೋನ್‌ನಲ್ಲಿ ಲಭ್ಯ.

ಈ ಹೊಸ ಫೋನಿನ ಬೆಲೆ 8990 ರು. ಆಗಿದೆ.

ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ!... ಈ ವಿಡಿಯೋ ನೋಡಿ

"

Follow Us:
Download App:
  • android
  • ios