ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಬರ್ದಸ್ತ್ ಹಿಡಿತವನ್ನು ಸಾಧಿಸುತ್ತಿರುವ ವಿವೋ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ನೊಂದಿಗೆ ಲಗ್ಗೆ ಹಾಕಿದೆ. ಹೌದು, ವಿವೋ ಕಂಪನಿ ವಿ20 ಪ್ರೋ 5ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ವಿವೋ ಬಿಡುಗಡೆ ಮಾಡಿರುವ ವಿವೋ ವಿ20, ವಿವೋ ವಿ20 ಎಸ್ಇ ಸರಣಿಯ ಫೋನ್‌ಗಳ ಸಾಲಿನಲ್ಲೇ ಈ ಫೋನ್ ಇದೆ. ವಿಶೇಷ ಎಂದರೆ ವಿವೋ ವಿ20 ಪ್ರೋ ಫೋನ್ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತದೆ ಎಂಬುದನ್ನು ನೀವು ಗಮನಿಸಬೇಕಾದ ಸಂಗತಿಯಾಗಿದೆ.

ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?

ವಿವೋ ವಿ20 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 765ಜಿ ಎಸ್ಒಸಿ ಪ್ರೊಸೆಸರ್ ಇದ್ದು, ಮೂರು  ಕ್ಯಾಮರಾಗಳ ಸೆಟ್ ಅಪ್ ಇದೆ. ಈ ಪೈಕಿ 64 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮರಾ ಇದ್ದರೆ, ಫೋನ್‌ನ ಮುಂಭಾಗದಲ್ಲಿ ಎರಡು ಕ್ಯಾಮರಾಗಳನ್ನು ಸೆಲ್ಫಿಗಾಗಿ ನೀಡಲಾಗಿದೆ. ಈ ಪೈಕಿ ಒಂದು 44 ಮೆಗಾಪಿಕ್ಸೆಲ್ ಕ್ಯಾಮರಾ ಇರಲಿದೆ. ವಿಶೇಷ ಎಂದರೆ, ಈಗ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ವಿವೋ ವಿ20 ಪ್ರೋ 5ಜಿ ಸ್ಮಾರ್ಟ್‌ಫೋನ್ ಥಾಯ್ಲೆಂಡ್‌ನಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.

29,990 ರೂಪಾಯಿ ಬೆಲೆ

ತುಸು ಅಗ್ಗದ ಬೆಲೆಗೆ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ವಿವೋ, ಈ ವಿ20 ಪ್ರೋ 5ಜಿ 8ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬೆಲೆಯನ್ನು 29,990 ರೂಪಾಯಿಗೆ ನಿಗದಿ ಮಾಡಿದೆ.

ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ?

ಈ 5ಜಿ ಬೆಂಬಲಿತ ಫೋನ್ ಮಾರಾಟಕ್ಕೆ ನಿಮಗೆ ಅಮೆಜಾನ್, ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಸ್ಟೋರ್, ಪೇಟಿಮ್ ಮಾಲ್, ಟಾಟಾ ಕ್ಲಿಗ ಮತ್ತು ಬಜಾಬ್ ಫಿನ್ಸರಿ ಇಎಂಐ ಸ್ಟೋರ್‌ಗಳಲ್ಲಿ ದೊರೆಯಲಿದೆ. ಐಸಿಐಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡನಿಂದ ಖರೀದಿಸಿದರೆ ಗ್ರಾಹಕರಿಗೆ 200 ಆಫರ್ ಕೂಡ ದೊರೆಯಲಿದೆ. ಫೋನ್ ಎಕ್ಸೆಂಜ್ ಮೇಲೂ ನಿಮಗೆ 2500 ರೂ. ಆಫರ್ ದೊರೆಯಲಿದೆ. 

ಇಷ್ಟು ಮಾತ್ರವಲ್ಲದೇ ವಿ ಶೀಲ್ಡ್ ಮೊಬೈಲ್ ಡ್ಯಾಮೇಜ್ ರಕ್ಷಣೆ, ನೋ ಕಾಸ್ಟ್ ಇಎಂಐ ಸೌಲಭ್ಯ ಕೂಡ ದೊರೆಯಲಿದೆ. ಮಿಡ್‌ನೈಟ್ ಜಾಜ್ ಮತ್ತು ಸನ್‌ಸೆಟ್ ಮೇಲೋಡಿ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಸಿಗಲಿದೆ. 

8T ಬೆನ್ನಲ್ಲೇ ಒನ್‌ಪ್ಲಸ್‌ನಿಂದ ಹೊಸ ವರ್ಷದಲ್ಲಿ 9 ಪ್ರೋ ಫೋನ್?

ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಫೋನ್ ಮಾರಾಟಕ್ಕಿದೆ. ಕ್ರೋಮಾ, ರಿಲಯನ್ಸ್ ಡಿಜಿಟಲ್, ಜಿಯೋ ಎಕ್ಸ್‌ಕ್ಲೂಸಿವ್ ಸ್ಟೋರ್ಸ್, ಸಂಗೀತಾ, ವಿಜಯ ಸೇಲ್ಸ್, ಪೂರ್ವಿಕಾ, ಬಿಗ್ ಸಿ ಮಳಿಗೆಗಳಲ್ಲಿ ಈ ಫೋನ್ ದೊರೆಯಲಿದೆ. ಆಫ್‌ಲೈನ್ ಸ್ಟೋರ್‌ಗಳಲ್ಲಿ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಜೆಸ್ಟ್ ಕಾರ್ಡ್ ‌ಬಳಸಿ ಖರೀದಿ ಮಾಡಿದರೆ, ಶೇ.10ರಷ್ಟು ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ.

ವಿವೋ ವಿ20 ಪ್ರೋಜಿ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 10 ಆಧಾರಿತ ಫನ್‌ಟಚ್ ಆಪರೇಟಿಂಗ್ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಈ ಫೋನ್, ಫುಲ್ ಎಚ್‌ಡಿ ಪ್ಲಸ್ ಎಎಂಒಎಲ್‌ಇಡಿ 6.44 ಇಂಚ್ ಡಿಸ್‌ಪ್ಲೇ ಹೊಂದಿದೆ.