ಭಾರತೀಯ ಮಾರುಕಟ್ಟೆಗೆ Vivo T1 Pro 5G, Vivo T1 44W ಫೋನ್ ಲಾಂಚ್
* ಭಾರತೀಯ ಮಾರುಕಟ್ಟೆಗೆ ತನ್ನ ಎರಡು ಹೊಸ ಫೋನ್ ಲಾಂಚ್ ಮಾಡಿದ ವಿವೋ
* ವಿವೋದ ಈ ಎರಡೂ ಹೊಸ ಫೋನ್‌ಗಳು ಫೀಚರ್ಸ್ ದೃಷ್ಟಿಯಿಂದ ವಿಶೇಷವಾಗಿವೆ
* Vivo T1 Pro 5G, Vivo T1 44W ಬೆಲೆ ಕೂಡ ತೀರಾ ತುಟ್ಟಿಯಾಗಿ ಏನಿಲ್ಲ
ವಿವೋ (Vivo) ತನ್ನ ಇತ್ತೀಚಿನ ವಿವೋ ಟಿ1 ಪ್ರೋ 5ಜಿ (Vivo T1 Pro 5G) ಮತ್ತು ವಿವೋ ಟಿ1 44 ಡಬ್ಲೂ (Vivo T1 44W) ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್‌ಗಳು ಇತ್ತೀಚೆಗೆ ಬಿಡುಗಡೆಯಾದ iQoo Z6 Pro ಮತ್ತು iQoo Z6 ಫೋನ್‌ಗಳನ್ನು ಹೋಲುತ್ತವೆ ಮತ್ತು ಅದೇ ರೀತಿಯ ಫೀಚರ್ಸ್ ಕೂಡ ಹೊಂದಿದೆ. Qualcomm Snapdragon 778G CPU ವಿವೋ ಟಿ 1 ಪ್ರೋ 5ಜಿ (Vivo T1 Pro 5G) ಸ್ಮಾರ್ಟ್‌ಫೋನ್‌ಗೆ ಪವರ್ ಒದಗಿಸಿದೆ. ಹಾಗೆಯೇ Snapdragon 680 ಚಿಪ್‌ಸೆಟ್ Vivo T1 44W ಸ್ಮಾರ್ಟ್‌ಫೋನ್‌ಗೆ ಬಲ ತಂದುಕೊಟ್ಟಿದೆ.
ಮೆಟಾದಿಂದ ಇನ್ನೆರಡು ವರ್ಷದಲ್ಲಿ ಹೈಎಂಡ್ VR ಹೆಡ್‌ಸೆಟ್
Vivo T1 Pro 5G ಬೆಲೆ, ಬಣ್ಣಗಳು ಮತ್ತು ಫೀಚರ್ಸ್
ವೈಶಿಷ್ಟ್ಯಗಳು: Vivo T1 Pro 5G 6.44- ಇಂಚಿನ ಪೂರ್ಣ- HD+ AMOLED ಪ್ರದರ್ಶಕವನ್ನು 90Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಫೋನ್ ಆಕ್ಟಾ-ಕೋರ್ Qualcomm Snapdragon 778G ಪ್ರೊಸೆಸರ್‌ನಿಂದ ಚಾಲಿತವಾಗಿದೆ, ಇದು 8 GB ಯ RAM ಮತ್ತು 128 GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಫೋನ್ 4,700 mAh ಬ್ಯಾಟರಿಯಿಂದ ಚಾಲಿತವಾಗಿದ್ದು ಅದು 66 ವ್ಯಾಟ್ ಕ್ಷಿಪ್ರ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುತ್ತದೆ.
Vivo T1 Pro 5G 64- ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ನೊಂದಿಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಕ್ಯಾಮೆರಾ ಬಳಕೆದಾರರಿಗೆ ಸೆಲ್ಫಿ ಹಾಗೂ ವಿಡಿಯೋ ಕಾಲಿಂಗ್‌ಗೆ ನೆರವು ಒದಗಿಸುತ್ತದೆ.
ಬೆಲೆ: ಭಾರತದಲ್ಲಿ Vivo T1 Pro 5G 6 GB RAM + 128 GB ಸ್ಟೋರೇಜ್ ವೆರಿಯೆಂಟ್ ಬೆಲೆ 23,999 ರೂಪಾಯಿಗೆ ಮಾರಾಟಕ್ಕೆಲಭ್ಯವಿದೆ. 8 GB RAM + 128 GB ಸಂಗ್ರಹಣೆಯ ಆಯ್ಕೆಯು ಭಾರತದಲ್ಲಿ 24,999 ರೂ.ಗೆ ದೊರೆಯಲಿದೆ.
Vivo T1 44W ವೈಶಿಷ್ಟ್ಯಗಳು, ವಿವರಣೆ ಮತ್ತು ಬಣ್ಣಗಳು
ವೈಶಿಷ್ಟ್ಯಗಳು: Vivo T1 44W ಸ್ಮಾರ್ಟ್‌ಫೋನ್ 6.44-ಇಂಚಿನ ಪೂರ್ಣ-HD+ ಪ್ರದರ್ಶಕವನ್ನು ಹೊಂದಿದೆ. ನೋಡಲು ಅತ್ಯಾಕರ್ಷಕವಾಗಿದೆ. ಇದು Qualcomm Snapdragon 680 CPU, 8 GB RAM ಮತ್ತು 128 GB ವರೆಗಿನ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. Vivo T1 44W 5,000 mAh ಬ್ಯಾಟರಿಯನ್ನು ಹೊಂದಿದ್ದು ಅದು 44 ವ್ಯಾಟ್ ಕ್ಷಿಪ್ರ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. Vivo T1 44W ಟ್ರಿಪಲ್ ಬ್ಯಾಕ್ ಕ್ಯಾಮೆರಾವನ್ನು 50-ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್, 2-ಮೆಗಾಪಿಕ್ಸೆಲ್ ಮಾರ್ಕೊ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಪೋಟ್ರೇಟ್ ಲೆನ್ಸ್‌ನೊಂದಿಗೆ ಹೊಂದಿದೆ.
ಕೂಡಲೇ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿ, ಇಲ್ಲದಿದ್ದರೆ ಅಪಾಯ ಗ್ಯಾರಂಟಿ
ಬೆಲೆ: Vivo T1 44W ಫೋನ್‌ನ 4GB RAM + 128 GB ಸ್ಟೋರೇಜ್ ವೆರಿಯೆಂಟ್ ಬೆಲೆ 14,499 ರೂಪಾಯಿಯಾಗಿದೆ. ಹಾಗೆಯೇ, 6 GB RAM + 128 GB ಸ್ಟೋರೇಜ್ ವೆರಿಯೆಂಟ್ ಸ್ಮಾರ್ಟ್‌ಫೋನ್ ಬೆಲೆ 15,999 ರೂ.ವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ, ಟಾಪ್-ಸ್ಪೆಕ್ 8GB RAM + 128GB ಸ್ಟೋರೇಜ್ ಮಾಡೆಲ್ ಬೆಲೆ 17,999 ರೂ. ಇರಲಿದೆ. Vivo T1 44W ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ: ಐಸ್ ಡಾನ್, ಮಿಡ್ನೈಟ್ ಗ್ಯಾಲಕ್ಸಿ ಮತ್ತು ಸ್ಟಾರಿ ಸ್ಕೈ. ಈ ಎರಡೂ ಬಣ್ಣಗಳ ಆಯ್ಕೆಯಲ್ಲಿ ಫೋನ್ ಅತ್ಯಾಕರ್ಷಕವಾಗಿದೆ.