Asianet Suvarna News Asianet Suvarna News

ಕೂಡಲೇ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿ, ಇಲ್ಲದಿದ್ದರೆ ಅಪಾಯ ಗ್ಯಾರಂಟಿ

* ಗೂಗಲ್ ಕ್ರೋಮ್‌ಗೆ ಹೈ ಥ್ರೆಟ್ಸ್ ಇದ್ದು ಕೂಡಲೇ ಬಳಕೆದಾರರು ಅಪ್‌ಡೇಟ್ ಮಾಡಿಕೊಳ್ಳಬೇಕು
* ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್- ಟೀಂ ಎಲ್ಲ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ
* ಕ್ರೋಮ್‌ನಲ್ಲಿ ದೋಷವಿರುವುದು ಒಪ್ಪಿಕೊಂಡಿರುವ ಟೆಕ್ನಾಲಜಿ ದೈತ್ಯ ಕ್ರೋಮ್

Need to update google chrome immediately, Says CERT In
Author
Bengaluru, First Published May 3, 2022, 3:07 PM IST

ನೀವು ಗೂಗಲ್ ಕ್ರೋಮ್ (Google Chrome) ಬಳಸುತ್ತಿದ್ದೀರಾ? ಅದನ್ನು ಬಹಳ ದಿನಗಳಿಂದ ಅಪ್‌ಡೇಟ್ ಮಾಡಿಲ್ಲವೇ? ಒಂದು ವೇಳೆ ಮಾಡಿಲ್ಲ ಎಂದಾದರೆ ಈ ಕೂಡಲೇ ಅಪ್‌ಡೇಟ್ ಮಾಡಿ. ಯಾಕೆಂದರೆ, ಗೂಗಲ್ ಕ್ರೋಮ್‌ಗೆ ಮೂಲಕ ಕನ್ನ ಹಾಕುವ ಬೆದರಿಕೆ ಇದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವುದು ಬೇಸ್ಟು. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ-ಸಿಇಆರ್‌ಟಿ-ಇನ್ (Indian Computer Emergency Response Team -CERT-In) ಎಲ್ಲ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಕೂಡಲೇ ಗೂಗಲ್ ‌ಕ್ರೋಮ್ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದೆ. ಗೂಗಲ್ ಕ್ರೋಮ್ ಹೆಚ್ಚು ಅಶಕ್ತವಾಗಿರುವುದರಿಂದ ಹೊರಗಿನ ದಾಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರದ ಈ ನಿಗಾ ವ್ಯವಸ್ಥೆಯು ಈ ಎಚ್ಚರಿಕೆಯನ್ನು ನೀಡಿದೆ. ಸೈಬರ್ ಕ್ರೈಮ್ ಮೇಲ್ವಿಚಾರಣೆ ಹೊಣೆ ಹೊತ್ತಿರುವ CERT-In ಹೊಸ ವರ್ಷನ್ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಹೇಳಿದೆ. ಗೂಗಲ್ ಕೂಡ ಕ್ರೋಮ್ ದಾಳಿಗೆ ತುತ್ತಾಗುವ ಸ್ಥಿತಿಯನ್ನು ಒಪ್ಪಿಕೊಂಡಿದ್ದು, ಅಗತ್ಯವಿರುವ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಹಾಗಾಗಿ, ಎಲ್ಲ ಬಳಕೆದಾರರು ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದೆ.

Motorola Edge 30 ಲಾಂಚ್; ಕ್ಯಾಮೆರಾ ಹೇಗಿದೆ? ಫೀಚರ್ಸ್ ಸೂಪರಾ? ಬೆಲೆ ಎಷ್ಟು?

ಬಗ್ ವಿವರಗಳು ಮತ್ತು ಲಿಂಕ್‌ಗಳ ಅಕ್ಸೆಸ್ ಅನ್ನು ಬಹುಪಾಲು ಬಳಕೆದಾರರು ಸರಿಪಡಿಸುವುದರೊಂದಿಗೆ ನವೀಕರಿಸುವವರೆಗೆ ನಿರ್ಬಂಧಿಸಬಹುದು. ಥರ್ಡ್ ಪಾರ್ಟಿ ಲೈಬ್ರರಿಯಲ್ಲಿ ದೋಷವು ಅಸ್ತಿತ್ವದಲ್ಲಿದ್ದರೆ ನಾವು ನಿರ್ಬಂಧಗಳನ್ನು ಉಳಿಸಿಕೊಳ್ಳುತ್ತೇವೆ, ಇತರ ಯೋಜನೆಗಳು ಅದೇ ರೀತಿ ಅವಲಂಬಿತವಾಗಿವೆ, ಆದರೆ ಇನ್ನೂ ಸರಿಪಡಿಸಲಾಗಿಲ್ಲ ಎಂದು ಗೂಗಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.

ಕೇಂದ್ರ ಸರಕಾರದ ಅಧೀನ ಸಂಸ್ಥೆಯಾಗಿರುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಪ್ರಕಾರ, 101.0.4951.41 ಹಿಂದಿನ Google Chrome ವರ್ಷನ್ ಸಾಫ್ಟ್‌ವೇರ್‌ನಲ್ಲಿ ಬಗ್ ಕಂಡು ಬಂದಿದೆ. ಈ ಬೆದರಿಕೆಯು ಡೆಸ್ಕ್‌ಟಾಪ್ ಬಳಕೆದಾರರಿಗೆ ಹೆಚ್ಚು ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. Google ದೋಷವನ್ನು ಒಪ್ಪಿಕೊಂಡಿದೆ ಮತ್ತು Chrome ಬ್ಲಾಗ್ ಪೋಸ್ಟ್‌ನಲ್ಲಿ 30 ದುರ್ಬಲತೆಗಳನ್ನು ಪಟ್ಟಿ ಮಾಡಿದೆ. ಸುಮಾರು ಏಳು ನ್ಯೂನತೆಗಳನ್ನು 'ಹೈ ಥ್ರೆಟ್ಸ್' ಎಂದು ವರ್ಗೀಕರಿಸಲಾಗಿದೆ.

ಈ ಅಪಾಯ ಮಟ್ಟದ ದುರ್ಬಲತೆಗಳನ್ನು ಬಳಸಿಕೊಂಡು, ದೂರದಿಂದಲೇ ನಿಯಂತ್ರಿಸುವವರಿಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಮತ್ತು ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ಪಡೆಯಲು ಅನುಮತಿಸುತ್ತದೆ ಎಂದು CERT-In ಎಂದು ಹೆಚ್ಚಿನ ಮಾಹಿತಿಯನ್ನು ನೀಡಿದೆ. ನ್ಯೂನತೆಯು ಹ್ಯಾಕರ್‌ಗಳಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಮತ್ತು ಉದ್ದೇಶಿತ ಸಿಸ್ಟಮ್‌ನಲ್ಲಿ ಬಫರ್ ಓವರ್‌ಫ್ಲೋಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ವಲ್ಕನ್(Vulkan), ಸ್ವಿಫ್ಟ್‌ಶೇಡರ್ (SwiftShader), ಆಂಗಲ್ (, ANGLE), ಡಿವೈಸ್ ಎಪಿಐ (Device API), ಶರಿನ್ ಸಿಸ್ಟಮ್ ಎಪಿಐ (Sharin System API), ಓಝೋನ್ (Ozone), ಬ್ರೌಸರ್ ಸ್ವಿಚರ್ (Browser Switcher), ಬುಕ್‌ಮಾರ್ಕ್‌ಗಳು, ಡೆವ್ ಟೂಲ್ಸ್ ಮತ್ತು ಫೈಲ್ ಮ್ಯಾನೇಜರ್‌ನಲ್ಲಿ ಬಳಸುವುದರಿಂದ ಈ ದೋಷಗಳು ಗೂಗಲ್ ಕ್ರೋಮ್‌ನಲ್ಲಿ ಅಸ್ತಿತ್ವದಲ್ಲಿವೆ ಎಂದು ಏಜೆನ್ಸಿ ಹೈಲೈಟ್ ಹೇಳಿದೆ.

ಪ್ರೀಮಿಯಂ Xiaomi 12 Pro 5G ಭಾರತದಲ್ಲಿ ಲಾಂಚ್: ಬೆಲೆ, ಫೀಚರ್ಸ್ ತಿಳಿಯಿರಿ

ಸಾಮಾನ್ಯವಾಗಿ ಈ ರೀತಿಯ ದೋಷಗಳು ಯಾವುದೇ ಸಾಫ್ಟ್‌ವೇರ್‌ನಲ್ಲಿ ಕಂಡು ಬರುತ್ತವೆ. ಆದರೆ, ಕೆಲವೊಮ್ಮೆ ಇವು ಅಪಾಯಕಾರಿ ಮಟ್ಟದಲ್ಲಿರುತ್ತವೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಅಪ್‌ಡೇಟ್ ಮಾಡಿಕೊಳ್ಳುವುದು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇದೀಗ ಗೂಗಲ್ ಕ್ರೋಮ್ (Google Chrome) ಅಪ್‌ಡೇಟ್ ಮಾಡಿಕೊಳ್ಳುವಂತೆ ಎಲ್ಲ ಬಳೆಕದಾರರಿಗೆ ಸೂಚಿಸಿದೆ. ಹೊಸ ವರ್ಷನ್ ಅಪ್‌ಡೇಟ್ (Update) ಮಾಡಿಕೊಳ್ಳುವುದರಿಂದ ಅದರ ಸುರಕ್ಥತೆಯ ಮಟ್ಟ ಹೆಚ್ಚಾಗುತ್ತದೆ. ಆಗ ಯಾವುದೇ ಬೆದರಿಕೆ ಬಂದರೂ ಎದುರಿಸಲು ಸಾಧ್ಯವಾಗುತ್ತದೆ. ಕೂಡಲೇ ನಿಮ್ಮ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿಕೊಳ್ಳಿ.

Follow Us:
Download App:
  • android
  • ios