ಏ.29ಕ್ಕೆ ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಲಾಂಚ್, 44 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!
ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿರುವ ವಿವೋ, ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 29ರಂದು ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 44 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಇನ್ನು ಅನೇಕ ಅತ್ಯಾಧುನಿಕ ಮತ್ತು ವಿಶಿಷ್ಟ ಫೀಚರ್‌ಗಳನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.
ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಸ್ವಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿರುವ ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದೆ.
ಇದೇ ತಿಂಗಳು 29ರಂದು ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಸಾಕಷ್ಟು ವರದಿಗಳಾಗಿದ್ದವು. ವಿವೋ ಕಂಪನಿ ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಹೇಳಿತ್ತು. ಆದರೆ, ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂಬುದನ್ನು ಸ್ಪಷ್ಪಡಿಸಿರಲಿಲ್ಲ. ಇದೀಗ ಕಂಪನಿ ವಿವೋ ವಿ21 5ಜಿ ಸ್ಮಾರ್ಟ್‌ಫೋನನ್ನು ಏಪ್ರಿಲ್ 29ರಂದು ಬಿಡುಗಡೆ ಮಾಡುತ್ತಿದೆ.
ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟಂಟ್ ಕ್ಯಾಮೆರಾ ಬಿಡುಗಡೆ, ಬೆಲೆ ಕೇವಲ 8,499 ರೂ.!
ಇದೇ ವೇಳೆ, ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕಾಗಿಯೇ ಒಂದು ಪುಟವನ್ನು ನಿರ್ಮಿಸುವ ಮೂಲಕ ವಿವೋ ವಿ21 5ಜಿ ಬಿಡುಗಡೆಯನ್ನು ಖಚಿತಪಡಿಸಿದೆ. ಈ ಪುಟದಲ್ಲಿ ವಿವೋ ವಿ21 5ಜಿ ಸ್ಮಾರ್ಟ್‌ಫೋನ್‌ನ ಕೆಲವು ವಿಶೇಷತೆಗಳ ಬಗ್ಗೆಯೂ ತಿಳಿಸಲಾಗಿದೆ. ಈ ಸ್ಮಾರ್ಟ್‌ಫೋನ್ 44 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು ವಾಟರ್ ಡ್ರಾಪ್ ಸ್ಟೈಲ್ ನಾಚ್ ಡಿಸ್ಪ್ಲೇಯನ್ನು ಹೊಂದಿದೆ ಎಂದು ಹೇಳಬಹುದು. ಈ ಸ್ಮಾರ್ಟ್‌ಫೋನ್ ಬಗ್ಗೆ ಇತರೆ ಮಾಹಿತಿಯನ್ನು ಈ ಪುಟದಲ್ಲಿ ಬಿಟ್ಟುಕೊಟ್ಟಿಲ್ಲ.
ಫ್ಲಿಪ್‌ಕಾರ್ಟ್‌ನಲ್ಲಿ ಡೆಡಿಕೆಟ್ ಮಾಡಲಾಗಿರುವ ಪುಟದಲ್ಲಿರುವ ಮಾಹಿತಿ ಪ್ರಕಾರ ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 29 ಮಧ್ಯಾಹ್ನ 12 ಗಂಟೆಗೆ ಲಾಂಚ್ ಆಗಲಿದೆ. ಅಲ್ಲದೇ ಈ ತಾಣದಲ್ಲಿ ಮಾರಾಟಕ್ಕೂ ಸಿಗಲಿದೆ. ಈ ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಮತ್ತು ಒಂದಿಷ್ಟು ವಿಶೇಷತೆಗಳನ್ನು ಬಿಟ್ಟುಕೊಟ್ಟಿದ್ದರೂ ಈ ಫೋನ್‌ನ ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ವಿವೋ ಕಂಪನಿಯ ಇದೇ ಮಾದರಿಯ ಸ್ಮಾರ್ಟ್‌ಫೋನ್ 22,990 ರೂಪಾಯಿ ಸಾಲಿನಲ್ಲಿ ಮಾರಾಟವಾಗುತ್ತಿದೆ. ಅಂದರೆ, ವಿವೋ 20 2021 ಸದ್ಯ ಭಾರತದಲ್ಲಿ 22,990 ರೂ.ದರದಲ್ಲಿ ಮಾರಾಟವಾಗುತ್ತಿದೆ. ಹಾಗಾಗಿ, ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಬೆಲೆ ಒಂಚೂರು ಜಾಸ್ತಿ ಇರಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಆದರೆ, ಸ್ಮಾರ್ಟ್‌ಫೋನ್ ಬೆಲೆ ತಿಳಿಯಲು ನಾವು ಏಪ್ರಿಲ್ 29ರವರೆಗೆ ಕಾಯಬೇಕು.
ಜೆಬ್ರಾನಿಕ್ಸ್‌ನಿಂದ ಹೊಸ ಫಿಟ್ನೆಸ್ ಬ್ಯಾಂಡ್ ಬಿಡುಗಡೆ, ಸಖತ್ ಫೀಚರ್ಸ್
ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ವಿವೋ ವಿ21 5ಜಿ ಅನೇಕ ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೆಸರೇ ಹೇಳುವಂತೆ ಈ ಫೋನ್, 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿದೆ. ಇನ್ನು ಫ್ಲಿಪ್‌ಕಾರ್ಟ್‌ನ ಪುಟದಲ್ಲಿರುವ ಮಾಹಿತಿಯ ಪ್ರಕಾರ, ಈ ಫೋನ್‌ನಲ್ಲಿ ಐಒಎಸ್‌ನೊಂದಿಗೆ 44 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇರಲಿದೆ. ಲೋ ಲೈಟ್ ಸೆಲ್ಫಿಗೂ ನೆರವಾಗಲು ಕಂಪನಿ ಡುಯಲ್ ಫ್ಲ್ಯಾಶ್ ಸ್ಪಾಟ್‌ಲೈಟ್ ಗಳನ್ನು ಒದಗಿಸಿದೆ. ಮೇಲ್ನೋಟಕ್ಕೆ ಅಥವಾ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಅದ್ಭುತ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಫೋಟೋಗಳನ್ನು ಇಷ್ಟಪಡೋರಿಗೆ ಈ ಫೋನ್ ಹೆಚ್ಚು ಸೂಕ್ತವಾಗಲಿದೆ.
ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ವಾಟರ್ ಡ್ರಾಪ್ ಸ್ಟೈಲ್ ನಾಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ರೆಕ್ಚಾಂಗಲ್‌ನಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಒಳಗೊಂಡಿದೆ.
ವಿವೋ ವಿ21 5ಜಿ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಅರ್ಕಾಟಿಕ್ ವೈಟ್, ಡಸ್ಕ್ ಬ್ಲ್ಯೂ, ಸನ್ಸೆಟ್ ಡ್ಯಾಚಲ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಇನ್ನೊಂದು ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ವಿಸ್ತರಿತ ರ್ಯಾಮ್ ಫೀಚರ್ ಒಳಗೊಂಡಿರಲಿದೆ. ಈ ಮೂಲಕ ಗ್ರಾಹಕರು ಹೆಚ್ಚುವರಿಯಾಗಿ 3ಜಿಬಿ ಮೆಮೋರಿಯನ್ನು ರ್ಯಾಮ್‌ನಲ್ಲಿ ಪಡೆದುಕೊಳ್ಳಬಹುದು. ಇಷ್ಟು ಮಾಹಿತಿ ಮಾತ್ರ ಈ ಫೋನ್ ಬಗ್ಗೆ ಗೊತ್ತಿರುವುದು. ಏಪ್ರಿಲ್ 29ರಂದು ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ ಈ ಸ್ಮಾರ್ಟ್‌ಫೋನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ.
6000 mAh ಬ್ಯಾಟರಿಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್ ಫೋನ್ ಬಿಡುಗಡೆ