Asianet Suvarna News Asianet Suvarna News

ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟಂಟ್ ಕ್ಯಾಮೆರಾ ಬಿಡುಗಡೆ, ಬೆಲೆ ಕೇವಲ 8,499 ರೂ.!

ಕ್ಯಾಮೆರಾ ಸಂಬಂಧಿ ಉತ್ಪನ್ನಗಳಿಗೆ ಹೆಸುವಾಸಿಯಾಗಿರುವ ಜಪಾನ್ ಮೂಲದ ಫ್ಯುಜಿಫಿಲ್ಮ್ ಕಂಪನಿ ಭಾರತೀಯ ಮಾರುಕಟ್ಟೆಗೆ ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟಂಟ್ ಕ್ಯಾಮೆರಾವನ್ನು ಪರಿಚಯಿಸಿದೆ. ಈ ಕ್ಯಾಮೆರಾ ಬೆಲೆ ತೀರಾ ಕಡಿಮೆಯಾಗಿದ್ದು, ಅದ್ಭುತ ಫೀಚರ್‌ಗಳನ್ನು ಒಳಗೊಂಡಿದೆ. ತಕ್ಷಣಕ್ಕೆ ಫೋಟೋ ನೋಡಲಿಚ್ಛಿಸುವವರಿಗೆ ಈ ಕ್ಯಾಮೆರಾ ಆಯ್ಕೆಯು ಹೆಚ್ಚು ಸೂಕ್ತವಾಗುತ್ತದೆ ಎನ್ನಬಹುದು.

Instax Mini 40 instant camera launched in India
Author
Bengaluru, First Published Apr 22, 2021, 4:04 PM IST

ಅತ್ಯಂತ ಹಳೆಯ ಹಾಗೂ ಜಪಾನ್ ಮೂಲದ ಫುಜಿಫಿಲ್ಮ್ ಕಂಪನಿಯು ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟಂಟ್‌ ಕ್ಯಾಮೆರಾವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದೊಂದು ಹೊಸ ರೀತಿಯ ಕ್ಯಾಮೆರಾ ಆಗಿದ್ದು, ಫುಜಿಫಿಲ್ಮ್ ಕಂಪನಿಯ ಇನ್ಸ್‌ಟಾಕ್ಸ್ ಸೀರೀಸ್ ಕ್ಯಾಮೆರಾಗಳ ಸಾಲಿಗೆ ಈ ಇನ್ಸ್‌ಟಾಕ್ಸ್ 40 ಮಿನಿ ಇನ್ಸ್‌ಟಂಟ್ ಮಿನಿ ಕ್ಯಾಮೆರಾ ಕೂಡ ಸೇರ್ಪಡೆಯಾಗಿದೆ.

ಜೆಬ್ರಾನಿಕ್ಸ್‌ನಿಂದ ಹೊಸ ಫಿಟ್ನೆಸ್ ಬ್ಯಾಂಡ್ ಬಿಡುಗಡೆ, ಸಖತ್ ಫೀಚರ್ಸ್

ಫುಜಿಫಿಲ್ಮ್ ಕಂಪನಿಯ ಈ ಇನ್ಸ್‌ಟಾಕ್ಸ್ ಮಿನಿ 40 ಕ್ಯಾಮೆರಾ  ತುಂಬಾ ತುಟ್ಟಿ ಇಲ್ಲ. ಕೈಗೆಟುಕುವ ದರವನ್ನು ಹೊಂದಿದೆ. ಅಂದರೆ, ಈ ಹೊಸ ಕ್ಯಾಮೆರಾ ಬೆಲೆ ಕೇವಲ 8,499 ರೂಪಾಯಿ ಮಾತ್ರ. ನೋಡಿದ ಸನ್ನಿವೇಶವನ್ನು ಕ್ಲಿಕ್ ಮಾಡಿದ ಕೂಡಲೇ ನೀವು ತ್ವರಿತವಾಗಿ ಫೋಟೋವನ್ನು ಪಡೆದುಕೊಳ್ಳಬಹುದು. ಅದೇ  ಈ ಕ್ಯಾಮೆರಾದ ವಿಶೇಷತೆ. ತೀರಾ ಅಗ್ಗದ ದರದಲ್ಲಿ ಸಿಗುವ ಈ ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟೆಂಟ್ ಕ್ಯಾಮೆರಾ ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 21ರಿಂದಲೇ ಮಾರಾಟಕ್ಕೆ ಲಭ್ಯವಾಗುತ್ತಿದೆ.

ಫುಜಿಫಿಲ್ಮ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಇನ್ಸ್‌ಟಾಕ್ಸ್ ಮಿನಿ 40 ಇನ್ಸಟಂಟ್ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಈ ಕ್ಯಾಮೆರಾ ಬಾಡಿ ಪೂರ್ತಿ ಕಪ್ಪುಬಣ್ಣದಿಂದ ಕೂಡಿದೆ. ಜೊತೆಗೆ ವಿನ್ಯಾಸದ ಆಕರ್ಷವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ಯಾಮೆರಾ ಬಾಡಿ ಫ್ರೇಮ್‌ಗಳು ಸಿಲ್ವರ್ ಕಲರ್‌ನಲ್ಲಿದ್ದು ಲುಕ್ ಹೆಚ್ಚಿಸಿದೆ. ಸಿಂಥೆಟಿಕ್ ಲೆದರ್ ಮೂಲಕ ಮಾಡಲ್ಪಟ್ಟಿರುವ ಮೂಲಕ ಹೂಲಿಗೆ ಮೂಲಕ ಬಂಧಿಸಲಾಗಿರುವ ಕೇಸ್‌ನೊಂದಿಗೆ ಈ ಹೊಸ ಕ್ಯಾಮೆರಾ ನಿಮಗೆ ಸಿಗುತ್ತದೆ. ಜೊತೆಗೆ ಶೌಲ್ಡರ್ ಸ್ಟ್ಯಾಪ್ ಕೂಡ ಇದೆ. ಇದು ನಿಮ್ಮ ಕ್ಯಾಮೆರಾದ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು.

ಜಪಾನ್ ಮೂಲದ ಇನ್ಸ್‌ಟಾಕ್ಸ್ ಮಿನಿ 40 ಕ್ಯಾಮೆರಾ ಆಟೋಮೆಟಿಕ್ ಎಕ್ಸ್‌ಫೋಸರ್ ಫೀಚರ್‌ನೊಂದಿಗೆ ಬರುತ್ತದೆ. ಕಳದೆ ವರ್ಷದ ಬಿಡುಗಡೆಯಾಗಿದ್ದ ಇನ್ಸ್‌ಟಾಕ್ಸ್ ಮಿನಿ 11 ಇನ್ಸ್‌ಟಂಟ್ ಕ್ಯಾಮೆರಾದಲ್ಲಿ ಈ ಫೀಚರ್ ಅನ್ನು ಕಂಪನಿ ಬಳಕೆ ಮಾಡಿತ್ತು. ಅದೇ ಫೀಚರ್ ಅನ್ನು ಈ ಹೊಸ ಕ್ಯಾಮೆರಾದಲ್ಲಿ ಕಂಪನಿ ಬಳಸಿಕೊಳ್ಳುತ್ತಿದೆ.

ಅನ್‌ಲಿಮಿಟೆಡ್ ಡೇಟಾ, ಕಾಲ್‌ ಸೇವೆ ಒದಗಿಸುವ STV ಪ್ಲ್ಯಾನ್ ವಿಸ್ತರಿಸಿದ BSNL

ಈ ಫೀಚರ್ ನೆರವಿನಿಂದ ಕ್ಯಾಮೆರಾ ಆಟೋಮೆಟಿಕ್ ಆಗಿ ಶಟರ್ ಸ್ಪೀಡ್ ಅನ್ನು ಆಪ್ಟಿಮೈಸ್ ಮಾಡಲು ಸಾಧ್ಯವಾಗುತ್ತದೆ. ಶೂಟಿಂಗ್ ಕಂಡಿಷನ್‌ಗೆ ಅನುಗುಣವಾಗಿ ಈ ಫೀಚರ್ ಮೂಲಕವೇ ನೀವು ಶಟರ್ ಸ್ಪೀಡ್, ಫ್ಲ್ಯಾಶ್ ಔಟ್‌ಪುಟ್ ಮತ್ತು ಇತರ ಸೆಟ್ಟಿಂಗ್ಸ್‌ಗಳನ್ನು ಆಟೋಮ್ಯಾಟಿಕ್ ಆಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ, ಯಾವುದೇ ಪರಿಸ್ಥಿತಿಯಲ್ಲೂ ಬಳಕೆದಾರರು ಆರಾಮಾಗಿ ತಮಗೆ ಕ್ಲಿಕ್ ಮಾಡಿಬೇಕೆನಿಸಿರುವ ಸಂಗತಿಯನ್ನು ಸೆರೆ ಹಿಡಿಯಬಹುದು.

ಈ ಕ್ಯಾಮೆರಾ ಇನ್ನೊಂದು ವಿಶೇಷತೆ ಏನೆಂದರೆ, ಸೆಲ್ಫಿ ಮೇಡ್. ಹೌದು ಈ ಕ್ಯಾಮೆರಾದಲ್ಲಿ ಸೆಲ್ಫಿ ಮೋಡ್ ಇದ್ದು ಬಳಕೆದಾರರು  ಕ್ಯಾಮೆರಾದ ಮೂಲಕವೇ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದಾಗಿದೆ. ಬಳಕೆದಾರರು, ಕ್ಯಾಮೆರಾದ ಫ್ರಂಟ್ ಎಡ್ಡ್ ಅನ್ನು ಎಳೆಯುವುದರ ಮೂಲಕ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಬಹುದಾಗಿದೆ. ಈ ಇನ್ಸ್‌ಟಾಕ್ಸ್ ಮಿನಿ 40 ಕ್ಯಾಮೆರಾ ವಿನ್ಯಾಸ ಸರಳ ಮತ್ತು ಆಕರ್ಷಕವಾಗಿದೆ ಎಂದು ಹೇಳಬಹುದು.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಇನ್ಸ್‌ಟಾಕ್ಸ್ ಮಿನಿ 40 ಕ್ಯಾಮೆರಾ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕ್ಯಾಮೆರಾ ಆರೇಂಜ್ ಬಣ್ಣವನ್ನು ಹೊಂದಿರುವ ಕಾಂಟ್ಯಾಕ್ಟ್ ಶೀಟ್‌ನೊಂದಿಗೆ ಬರುತ್ತದೆ. ಇದು ಕಪ್ಪು ಚೌಕಟ್ಟಿಗೆ ಶಾಸ್ತ್ರೀಯ ಸ್ಪರ್ಶವನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ವಿನ್ಯಾಸವು ಕಾಂಟ್ಯಾಕ್ಟ್ ಶೀಟ್ ಅನ್ನು ಅನುಕರಿಸುತ್ತದೆ ಎಂದು ಫ್ಯೂಜಿಫಿಲ್ಮ್ ಹೇಳುತ್ತದೆ, ವೈಯಕ್ತಿಕ ಚಿತ್ರಗಳನ್ನು ಪರಿಶೀಲಿಸಲು ಚಲನಚಿತ್ರಗಳಲ್ಲಿ ತೆಗೆದ ಫೋಟೋಗಳೊಂದಿಗೆ ಮುದ್ರಿಸಲಾದ ಬ್ರೋಮೈಡ್ ಶೀಟ್ ಗಮನ ಸೆಳೆಯುತ್ತದೆ. ತೀರಾ ಕಡಿಮೆ ಬೆಲೆಯಲ್ಲಿ ಇಷ್ಟೊಂದು ಫೀಚರ್‌ಗಳನ್ನು ಒಳಗೊಂಡಿರುವ ಈ ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟಂಟ್ ಕ್ಯಾಮೆರಾ ಅತ್ಯುತ್ತಮ ಆಯ್ಕೆಯಾಗುವ ಎಲ್ಲ ಅರ್ಹತೆಗಳಿವೆ.

6000 mAh ಬ್ಯಾಟರಿಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ ಫೋನ್ ಬಿಡುಗಡೆ

Follow Us:
Download App:
  • android
  • ios