ಸೈಡ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್, ಇನ್ನಷ್ಟು ಹೊಸ ಫೀಚರ್‌ನೊಂದಿಗೆ ವಿವೋ ವೈ51 ಫೋನ್
ಸರಣಿ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಿವೋ ತನ್ನ ಬಳಕೆದಾರರಿಗೆ ಹೊಸ ಹೊಸ ಅಚ್ಚರಿಗಳನ್ನು ನೀಡುತ್ತಲೇ ಇದೆ. ಕಂಪನಿ ಇದೀಗ 17,990 ರೂಪಾಯಿ ಬೆಲೆಯ ವೈ 51 ಫೋನ್ ಬಿಡುಗಡೆ ಮಾಡಿದ್ದು, ಇದು ಅನೇಕ ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿದೆ.
ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುವ ವಿವೋ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಮೂಲಕ ಲಗ್ಗೆ ಹಾಕಿದೆ. ಈ ಹೊಸ ಫೋನ್ 1080ಪಿ ಡಿಸ್‌ಪ್ಲೇ, ಟ್ರಿಪಲ್ ಕ್ಯಾಮರಾ ಮತ್ತು ಆಕರ್ಷಕ ವಿನ್ಯಾಸ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಹೊಂದಿದೆ. ರಿಯಲ್‌ಮೀ 6ಐ, ರೆಡ್‌ಮೀ ನೋಟ್ 9, ಒಪ್ಪೋ ಎ52 ಎದುರಾಳಿ ಬ್ರಾಂಡ್‌ಗಳಿಗೆ ಈ ವಿವೋ ವೈ 51 ಫೋನ್ ಪೈಪೋಟಿ ನೀಡಲಿದೆ.
ವಿವೋ ವೈ51 ಮಧ್ಯಮ ವ್ಯಾಪ್ತಿಯ ಸ್ಮಾರ್ಟ್ ಫೋನ್ ಆಗಿದ್ದು, ಆಂಡ್ರಾಯ್ಡ್ 10 ಸಾಫ್ಟ್‌ವೇರ್ ಹಾಗೂ ಫನ್‌ಟಚ್ ಒಎಸ್‌ನೊಂದಿಗೆ ಬರುತ್ತದೆ. 6.47 ಇಂಚ್ ಡಿಸ್‌ಪ್ಲೇ ಇದ್ದು, ಅಕ್ಟಾಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 600 ಸೀರಿಸ್ ಪ್ರೊಸೆಸರ್‌ಗಳನ್ನು ಅಳವಡಿಸಲಾಗಿದೆ. ಆದರೆ, ಸ್ನ್ಯಾಪ್‌ಡ್ರಾಗನ್ 660 ಅಥವಾ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಇರಲಿದೆಯೇ ಎಂದು ಕಂಪನಿ ಖಚಿತಪಡಿಸಿಲ್ಲ. ಮಧ್ಯಮ ವ್ಯಾಪ್ತಿಯ ಫೋನ್‌ಗಳಲ್ಲಿ ಈ ಎರಡರ ಪೈಕಿ ಯಾವುದಾದರೂ ಒಂದು ಪ್ರೊಸೆಸರ್ ಅನ್ನು ವಿವೋ ಹೆಚ್ಚಾಗಿ ಬಳಸುತ್ತಿದೆ ಎಂದು ಹೇಳಬಹುದು.
ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?
ಈ ವಿವೋ ವೈ51 ಸ್ಮಾರ್ಟ್‌ಫೋನ್‌ನಲ್ಲಿ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಿಗಲಿದೆ. ಜೊತೆಗೆ ಮೈಕ್ರೋ ಎಸ್‌ಬಿ ಕಾರ್ಡ್ ಬಳಸಿಕೊಂಡು 1 ಟಿಬಿವರೆಗೂ ಮೆಮೋರಿಯನ್ನು ವಿಸ್ತರಿಸಿಕೊಳ್ಳಬಹುದು. ಸಾಮಾನ್ಯವಾಗಿ ಫಿಂಗರ್ ಪ್ರಿಂಟ್ ಸೆನ್ಸರ್ ಫೋನಿನ ಹಿಂಭಾಗದಲ್ಲಿದ್ದರೆ ಈ ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಫೋನಿನ ಸೈಡಿನಲ್ಲಿಡಲಾಗಿದ್ದು, ಬಳಕೆಗೆ ತುಂಬ ಸಹಕಾರಿಯಾಗಿದೆ.
ನೋಕಿಯಾ ಲ್ಯಾಪ್‌ಟ್ಯಾಪ್! ಸ್ಮಾರ್ಟ್‌ಫೋನಲ್ಲಿ ಹೋದ ಮಾನ ಲ್ಯಾಪ್‌ಟಾಪಲ್ಲಿ ಸಿಗುತ್ತಾ
ಈ ಫೋನ್‌ನಲ್ಲಿ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಇದೆ. ಈ ಪೈಕಿ 48 ಮೆಗಾ ಪಿಕ್ಸೆಲ್ ಕ್ಯಾಮರಾ ಇದ್ದರೆ ಫೋನಿನ ಮುಂಭಾಗದಲ್ಲಿ ಸೆಲ್ಫಿಗಾಗಿ ಕಂಪನಿ 16 ಮೆಗಾಪಿಕ್ಸೆಲ್ ಕ್ಯಾಮಾ ನೀಡಲಾಗಿದೆ. ವೈ 51 ಫೋನ್ ಅನ್ನು ಮತ್ತಷ್ಟು ಶಕ್ತಿಗೊಳಿಸಿದ್ದು ಅದರ ಬ್ಯಾಟರಿ. ಕಂಪನಿ 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದ್ದು, 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಈ ಬ್ಯಾಟರಿ 14 ಗಂಟೆಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ವಿವೋ ವಿ20 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ, ಸಖತ್ ಆಫರ್ ಉಂಟು!
ನಮ್ಮ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸಮಗ್ರ ಶ್ರೇಣಿಯ ಉತ್ಪನ್ನಗಳನ್ನು ನೀಡಲು ವಿವೋ ವೈ ಶ್ರೇಣಿಯ ಫೋನ್‌ಗಳು ಹೆಸರುವಾಸಿಯಾಗಿವೆ. ವಿವೊ ವೈ 51 ನೊಂದಿಗೆ, 18W ಫಾಸ್ಟ್ ಚಾರ್ಜ್‌ನಿಂದ 5000 ಎಂಎಎಚ್ ದೀರ್ಘಕಾಲೀನ ಬ್ಯಾಟರಿ ಮತ್ತು 48 ಎಂಪಿ ಎಐ ಟ್ರಿಪಲ್ ರಿಯರ್ ಕ್ಯಾಮೆರಾ ಮೂಲಕ ನಮ್ಮ ಗ್ರಾಹಕ-ಕೇಂದ್ರಿತ ವಿಧಾನದಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ ಎಂದು ವಿವೋ ಇಂಡಿಯಾ ಬ್ರಾಂಡ್ ಸ್ಟ್ರಾಟರ್ಜಿ ಡೈರೆಕ್ಟರ್ ನಿಪುನ್ ಮರಿಯಾ ತಿಳಿಸಿದ್ದಾರೆ.
8 ಜಿಬಿ ರ್ಯಾಮ್ ಮತ್ತು 128 ಸ್ಟೋರೇಜ್ ಸಾಮರ್ಥ್ಯದ ವಿವೋ ವೈ51 ಫೋನ್ ಬೆಲೆ ಭಾರತದಲ್ಲಿ 17,990 ರೂಪಾಯಿ ನಿಗದಿ ಮಾಡಲಾಗಿದೆ. ಎರಡು ಬಣ್ಣಗಳಲ್ಲಿ ಈ ಫೋನ್ ಭಾರತದಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್, ಅಮೆಜಾನ್, ವಿವೋ ಇಂಡಿಯಾ ಇ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ.