'ಐಫೋನ್ 15 ಸುಲಭವಾಗಿ ಬ್ರೇಕ್ ಆಗುತ್ತದೆ' ಆಪಲ್ ಹೊಸ ಫೋನ್ ಬಗ್ಗೆ ಹೆಚ್ಚಾಯ್ತು ಕಳವಳ!
ಆಪಲ್‌ನ ಹೊಚ್ಚ ಹೊಸ ಆವೃತ್ತಿಯ ಐಫೋನ್15 ಸರಣಿಯ ಪೋನ್‌ಗಳ ಬಾಳಿಕೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಹೆಚ್ಚಿನ ಇನ್‌ಫ್ಲುಯೆನ್ಸರ್‌ಗಳು ಈ ಫೋನ್‌ಗಳು ಬಹಳ ಬೇಗ ಬ್ರೇಕ್ ಆಗುತ್ತವೆ ಎಂದು ಎಚ್ಚರಿಸಿದ್ದಾರೆ.
ನವದೆಹಲಿ (ಸೆ.25): ಈ ತಿಂಗಳ ಆರಂಭದಲ್ಲಿ ಆಪಲ್ ಕಂಪನಿ ತನ್ನ ಐಫೋನ್ ಸರಣಿಯಲ್ಲಿ ಐಫೋನ್-15ನ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಿತ್ತು. ಕಳೆದ ವಾರದಿಂದ ಈ ಫೋನ್‌ಗಳ ಮಾರಾಟ ಪ್ರಕ್ರಿಯೆಯೂ ಆರಂಭವಾಗಿದೆ. ಇದರ ಬೆನ್ನಲ್ಲಿಯೇ ಫೋನ್‌ನ ಬಗ್ಗೆ ವಿಮರ್ಶೆಗಳು ಬರಲು ಆರಂಭಿಸಿದೆ. ಹೆಚ್ಚಿನ ಇನ್‌ಫ್ಲುಯೆನ್ಸರ್‌ಗಳು ಹಾಗೂ ಗ್ರಾಹಕರು, ಹೊಸ ಐಫೋನ್ ಹಿಂದಿನ ಫೋನ್‌ಗಳ ರೀತಿ ಇಲ್ಲ. ಬಹಳ ಸುಲಭವಾಗಿ ಇದು ಬ್ರೇಕ್ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಫೋನ್‌ನ ಬ್ಯಾಕ್ ಕವರ್ ಬಹಳ ಸುಲಭವಾಗಿ ಮುರಿದುಹೋಗುತ್ತಿದೆ. ಅದರೊಂದಿಗೆ ಕೆಲವು ಪ್ರಖ್ಯಾತ ಇನ್‌ಫ್ಲುಯೆನ್ಸರ್‌ಗಳು ನಡೆಸಿರುವ ಡ್ಯುರೆಬಲಿಟಿ ಟೆಸ್ಟ್ ಅಂದರೆ ಫೋನ್‌ನ ಬಾಳಿಕೆ ಪರೀಕ್ಷೆಯಲ್ಲೂ ಹೊಸ ಐಫೋನ್ ವಿಫಲವಾಗಿದೆ ಎನ್ನುವ ವರದಿಗಳು ಬಂದಿವೆ. ಐಫೋನ್‌ಗಳ ವಿಚಾರದಲ್ಲಿ ಇಂಥ ಪರೀಕ್ಷೆ ನಡೆಸುವುದರಲ್ಲಿಯೇ ಎಕ್ಸ್‌ಪರ್ಟ್ ಆಗಿ ಜನಮೆಚ್ಚುಗೆ ಗಳಿಸಿರುವ ಪ್ರಖ್ಯಾತ ಇನ್‌ಫ್ಲುಯೆನ್ಸರ್ ಜೆರ್ರಿ ರಿಗ್ ಎವರಿಥಿಂಗ್ ತಮ್ಮ ಯೂಟ್ಯೂಬ್ ಪೇಜ್‌ನಲ್ಲಿ ಐಫೋನ್ ಪರೀಕ್ಷೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೊಸ ಆಪಲ್ ಉತ್ಪನ್ನದಲ್ಲಿ ಬಳಸಲಾದ ಟೈಟಾನಿಯಂ ಅದರ ಉದ್ದೇಶವನ್ನು ಪೂರೈಸಲು ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
"ಆಪಲ್ ತಮ್ಮ ಹೊಸ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಗ್ರೇಡ್ 5 ಟೈಟಾನಿಯಂನೊಂದಿಗೆ ತಯಾರಿಸಲಾಗುವುದು ಎಂದು ಹೇಳಿದಾಗ ನಾನು ಗಾಬರಿಗೊಂಡಿದ್ದೆ. ಆದರೆ, ಟೈಟಾನಿಯಂ ಐಫೋನ್ 15 ಪ್ರೊ ಮ್ಯಾಕ್ಸ್‌ನ ಬ್ಯಾಕ್ ಗ್ಲಾಸ್ ಪ್ರೈಮ್ ಟೈಮ್‌ಗೆ ಸಿದ್ಧವಾಗಿಲ್ಲ ಎಂದು ಗೊತ್ತಾಗುತ್ತಿದೆ. ಆಪಲ್‌ನ ಹೊಸ ಐಫೋನ್ 15 ಪ್ರೋ ಮ್ಯಾಕ್ಸ್‌ನಲ್ಲಿ ನಲ್ಲಿ ಏನೋ ತಪ್ಪಾಗಿದೆ" ಎಂದು ಅವರು ವೀಡಿಯೊ ವಿವರಣೆಯಲ್ಲಿ ಬರೆದಿದ್ದಾರೆ. ಹಲವಾರು ಇತರ ಐಫೋನ್ ಬಳಕೆದಾರರು ಹೊಸ ಸರಣಿಯ ಐಫೋನ್ ಬಗ್ಗೆ ಎಕ್ಸ್ ಪೇಜ್‌ಗಳು ದೂರಿದ್ದಾರೆ.
"ಐಫೋನ್ 15 ಪ್ರೊನಲ್ಲಿ ಬಾಳಿಕೆ ಪರೀಕ್ಷೆಯನ್ನು ಈಗ ತಾನೆ ನಡೆಸಿದೆ. ಐಫೋನ್ 14 ಗೆ ಹೋಲಿಸಿದರೆ ಈ ಸಾಧನವು ಬಹಳ ಬೇಗ ಮುರಿದುಹೋಗುವ ಸಾಧ್ಯತೆ ಹೆಚ್ಚು ಎಂದು ಫಲಿತಾಂಶಗಳು ತೋರಿಸಿವೆ, ಆಕಸ್ಮಿಕ ಹಾನಿಗಳಿಂದ ರಕ್ಷಿಸಲು ರಕ್ಷಣಾತ್ಮಕ ಪ್ರಕರಣಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ತಕ್ಷಣಕ್ಕೆ ನಾನು ಐಫೋನ್ 15ಗೆ ಅಪ್‌ಗ್ರೇಡ್ ಆಗದೇ ಇರಲು ನಿರ್ಧಾರ ಮಾಡಿದ್ದು ಒಳ್ಳೆಯದೇ ಆಯಿತು. ಹೊಸ ಐಫೋನ್ ಅತಿಯಾಗಿ ಬಿಸಿಯಾಗುತ್ತದೆ. ಸ್ಕ್ರ್ಯಾಚ್ ಬಹಳ ಬೇಗನೆ ಆಗುತ್ತದೆ. ಅದಲ್ಲದೆ, ಅದರ ಬ್ಯಾಕ್ ಕವರ್ ಬಹಳ ಬೇಗ ಬ್ರೇಕ್ ಆಗುತ್ತದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಭಾರತಕ್ಕಿಂತ ಈ ದೇಶಗಳಲ್ಲೇ ಕಡಿಮೆ ಬೆಲೆಗೆ ಸಿಗುತ್ತೆ ಐಫೋನ್ 15: ಮೇಡ್ ಇನ್ ಇಂಡಿಯಾ ಆದ್ರೂ ಯಾಕಿಷ್ಟು ವ್ಯತ್ಯಾಸ ನೋಡಿ..
'ನಾನು ನೋಡುವ ಪ್ರತಿಯೊಂದು ವೀಡಿಯೊದಲ್ಲಿ ಐಫೋನ್ 15 ನ ಬ್ಯಾಕ್ ಕವರ್ ಏಕೆ ಒಡೆಯುತ್ತಿದೆ" ಎಂದು ಮತ್ತೊಬ್ಬ ಬಳಕೆದಾರರು ಎಕ್ಸ್ ನಲ್ಲಿ ಬರೆದಿದ್ದಾರೆ. ಐಫೋನ್ 15 ಸರಣಿಯು ಫೋನ್‌ಗಳಿ ಸೆಪ್ಟೆಂಬರ್ 22 ರಿಂದ ಮಾರಾಟ ಆರಂಭಿಸಿದ್ದು, ಇದು ಮೇಡ್ ಇನ್ ಇಂಡಿಯಾ ಫೋನ್ ಎನಿಸಿದೆ.
ಹೊಸ ಐಫೋನ್‌ನಲ್ಲಿ ಇಸ್ರೋ ನಾವಿಕ್ ವ್ಯವಸ್ಥೆ, ಸಾಕಾರಗೊಂಡ ವಾಜಪೇಯಿ ದೇಶೀಯ ಜಿಪಿಎಸ್ ಕನಸು!