ಹೊಸ ಐಫೋನ್‌ನಲ್ಲಿ ಇಸ್ರೋ ನಾವಿಕ್‌ ವ್ಯವಸ್ಥೆ, ಸಾಕಾರಗೊಂಡ ವಾಜಪೇಯಿ ದೇಶೀಯ ಜಿಪಿಎಸ್‌ ಕನಸು!

1999ರಲ್ಲಿ ಪಾಕ್‌ ವಿರುದ್ಧ ಯುದ್ಧದ ಸಮಯದಲ್ಲಿ ಕಾರ್ಗಿಲ್‌ ಪ್ರದೇಶದಲ್ಲಿ ಜಿಪಿಎನ್‌ ಡೇಟಾವನ್ನು ಬಳಸಿಕೊಳ್ಳಲು ಭಾರತ, ಅಮೆರಿಕದ ಮನವಿ ಕೇಳಿದ್ದಾಗ ಸ್ಪಷ್ಟವಾಗಿ ನಿರಾಕರಿಸಿತ್ತು. ಅಂದೇ ದೇಶಕ್ಕೆ ತನ್ನದೇ ಆದಂಥ ಜಿಪಿಎಸ್‌ ವ್ಯವಸ್ಥೆ ಬೇಕು ಎಂದು ತೀರ್ಮಾನ ಮಾಡಿ ಅದಕ್ಕೆ ಅನುಮತಿ ನೀಡಿದ್ದು ಅಟಲ್‌ ಬಿಹಾರಿ ವಾಜಪೇಯಿ.
 

Apple includes ISRO-made GPS for iPhone 15 series a dream of atal bihari vajpayee san

ನವದೆಹಲಿ (ಸೆ.14): ಟೆಕ್‌ ದೈತ್ಯ ಆಪಲ್‌ ಮಂಗಳವಾರ ಅಧಿಕೃತವಾಗಿ ಹೊಸ ಅವೃತ್ತಿಯ ಐಫೋನ್‌ಅನ್ನು ಅನಾವರಣ ಮಾಡಿದೆ. ಆಪಲ್‌ ಪ್ರಕಟಿಸಿರುವ ಐಫೋನ್‌ ಸಿರೀಸ್‌ನ ಐಫೋನ್‌ 15 ಪ್ರೋ ಮತ್ತು 15 ಪ್ರೋ ಮ್ಯಾಕ್ಸ್‌ ಸಿರೀಸ್‌ನ ಫೋನ್‌ಗಳಲ್ಲಿ ಇಡೀ ಭಾರತೀಯರು ಹೆಮ್ಮೆ ಪಡುವಂಥ ಅಂಶವನ್ನು ಕಂಪನಿ ಸೇರಿಸಿದೆ. ಆಪಲ್ ತನ್ನ ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್‌ ಸೇವೆಯಲ್ಲಿ (ಜಿಪಿಎಸ್‌, GLONASS, ಗೆಲಿಲಿಯೋ, QZSS, BeiDou ಮತ್ತು NavIC) ಭಾರತದ ನಾವಿಕ್‌ ವ್ಯವಸ್ಥೆಯನ್ನು ಸೇರಿಸಿದೆ. ನಾವಿಕ್‌ ಎನ್ನುವುದು ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದ ಜಿಪಿಎಸ್‌ ಸೇವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸೂಚನೆಯ ಮೇರೆಗೆ ಇಸ್ರೋ ಅಭಿವೃದ್ಧಿಪಡಿಸಿರುವ ನಾವಿಕ್‌ ವ್ಯವಸ್ಥೆಯನ್ನು ತನ್ನ ಫೋನ್‌ಗಳಿಗೆ ಆಪಲ್‌ ಸೇರಿಸಿದೆ. ಸದ್ಯಕ್ಕೆ ಆಪಲ್‌ನ 15 ಪ್ರೋ ಹಾಗೂ ಐಫೋನ್‌ 15 ಪ್ರೋ ಮ್ಯಾಕ್ಸ್‌ ಆವೃತ್ತಿಯ ಫೋನ್‌ಗಳಲ್ಲಿ ಮಾತ್ರವೇ ಇದು ಲಭ್ಯವಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ ಹಾಗೂ ಇತರ ಐಫೋನ್‌ಗಳಲ್ಲೂ ಇದು ಲಭ್ಯವಾಗುವ ಸಾಧ್ಯತೆ ಇದೆ.

ಅದು 1999ರ ಕಾರ್ಗಿಲ್‌ ಯುದ್ಧದ ಸಮಯ.  ಕಾರ್ಗಿಲ್‌ನ ಗುಡ್ಡಗಾಡು ಪ್ರದೇಶದಲ್ಲಿ ಅವಿತು ಕುಳಿತಿರುವ ಭಯೋತ್ಪಾದಕರು ಹಾಗೂ ಪಾಕಿ ಸೈನಿಕರನ್ನು ಹುಡುಕಲು ಜಿಪಿಎಸ್‌ ಕೋಆರ್ಡಿನೇಟ್ಸ್‌ಗಳನ್ನು ನೀಡುವಂತೆ ಅಮೆರಿಕಕ್ಕೆ ಮನವಿ ಮಾಡಿತ್ತು. ಅಮೆರಿಕ ಮಾತ್ರ ಯಾವುದೇ ಕಾರಣಕ್ಕೂ ಜಿಪಿಎಸ್‌ ವ್ಯವಸ್ಥೆ ನೀಡಲು ಸಾಧ್ಯವಿಲ್ಲ ಎಂದಾಗ, ಭಾರತದ ಪರಾಕ್ರಮಿ ಸೈನಿಕರು ತಮ್ಮ ಸಾಮರ್ಥ್ಯದಿಂದಲೇ ಇಡೀ ಪಾಕಿಸ್ತಾನಿ ಸೈನಿಕರ ಹುಟ್ಟಡಗಿಸಿದ್ದರು. ಅಂದೇ ಭಾರತದ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಭಾರತಕ್ಕೆ ತನ್ನದೇ ಆದ ಸ್ವಂತ ಜಿಪಿಎಸ್‌ ಹೊಂದಬೇಕು ಎನ್ನುವ ಕನಸನ್ನು ಕಂಡಿದ್ದರು. ಈ ಕುರಿತಾಗಿ ಇಸ್ರೋಗೆ ಸೂಚನೆಯನ್ನೂ ನೀಡಿದ್ದರು.  2006ರಲ್ಲಿ ಭಾರತ ಸರ್ಕಾರದ ಈ ಯೋಜನೆಗೆ ಅನುಮೋದನೆಯನ್ನೂ ನೀಡಿತ್ತು. ಆದರೆ, ನಂತರ ಬಂದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸ್ವದೇಶಿ ಜಿಪಿಎಸ್‌ ಬಗ್ಗೆ ಅಷ್ಟೇನೂ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ.

ಪ್ರಾಜೆಕ್ಟ್‌ಗೆ ಅನುಮೋದನೆ ಸಿಕ್ಕಿ ಏಳು ವರ್ಷಗಳ ಬಳಿಕ ಅಂದರೆ, 2013ರ ಜುಲೈ 1 ರಂದು ಸ್ವದೇಶಿ ಜಿಪಿಎಸ್‌ ಸೇವೆಗಾಗಿ ಇಸ್ರೋ ತನ್ನ ಮೊದಲ ಸ್ಯಾಟಲೈಟ್‌ಅನ್ನು (IRNSS-1A) ನಭಕ್ಕೆ ಉಡಾಯಿಸಿತ್ತು. ಆದರೆ, ಇದರ ಆಟೋಮಿಕ್‌ ಕ್ಲಾಕ್‌ಗಳು ಫೇಲ್‌ ಆಗಿದ್ದರಿಂದ ಅರ್ಧ ವೈಫಲ್ಯ ಕಂಡಿತು. ಅದಾದ ಬಳಿಕ 2014ರ ಏಪ್ರಿಲ್‌ 2 ರಂದು 2ನೇ ಸ್ಯಾಟಲೈಟ್‌ (IRNSS-1B) ನಭಕ್ಕೆ ಸೇರಿಸಲಾಯಿತು. ಇದು ಇಂದಿಗೂ ಕಾರ್ಯನಿರ್ವಹಣೆಯಲ್ಲಿದೆ. ಸ್ವದೇಶಿ ಜಿಪಿಎಸ್‌ ನಾವಿಕ್‌ಗಾಗಿ ಇಸ್ರೋ ಇಲ್ಲಿಯವರೆಗೂ 9 ಉಪಗ್ರಹಗಳನ್ನು ನಭಕ್ಕೆ ಕಳಿಸಿದೆ. ಇದರಲ್ಲಿ ಮೂರು ಅರ್ಧವೈಫಲ್ಯ ಕಂಡಿದ್ದರೆ, ಐದು ಉಪಗ್ರಹಗಳು ಕಾರ್ಯನಿರ್ವಹಣೆ ಮಾಡುತ್ತಿದೆ. ಒಮ್ಮೆ ಉಡಾವಣೆ ಮಾಡುವಾಗಲೇ ವೈಫಲ್ಯ ಎದುರಾಗಿತ್ತು.

ಇನ್ನು 2ನೇ ಯುಗದ ಎನ್‌ವಿಎಸ್‌ ಸಿರೀಸ್‌ ಸ್ಯಾಟಲೈಟ್‌ಗಳ ಪೈಕಿ 1 ಸ್ಯಾಟಲೈಟ್‌ಅನ್ನು ಈಗಾಗಲೇ ಹಾರಿಸಲಾಗಿದ್ದು, ಇನ್ನೂ ನಾಲ್ಕು ಉಪಗ್ರಹಗಳ ಉಡಾವಣೆಗೆ ಇಸ್ರೋ ಯೋಜನೆ ಹೊಂದಿದೆ. 2023ರ ಮೇ ವೇಳೆಗೆ ನಾಲ್ಕು ಸ್ಯಾಟಲೈಟ್‌ಗಳು ನ್ಯಾವಿಗೇಶನ್‌ ಮಾಹಿತಿಯನ್ನು ನೀಡುತ್ತಿವೆ. ನ್ಯಾವಿಗೇಶನ್‌ ಮಾಹಿತಿಯನ್ನು ನೀಡಲು ಕನಿಷ್ಠ 4 ಉಪಗ್ರಹಗಳು ಕಾರ್ಯನಿವರ್ಹಣೆ ಮಾಡುವುದು ಅನಿವಾರ್ಯವಾಗಿದೆ.

ISRO Agreement With Oppo: ನ್ಯಾವಿಗೇಷನ್ ಸೇವೆಗಾಗಿ ಚೀನಾ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದ!

ಏನಿದು ನಾವಿಕ್‌?:  ರಾಷ್ಟ್ರದ ಸ್ಥಾನೀಕರಣ, ನ್ಯಾವಿಗೇಶನ್ ಮತ್ತು ಸಮಯದ ಅವಶ್ಯಕತೆಗಳನ್ನು ಪೂರೈಸಲು, ಇಸ್ರೋ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯನ್ನು ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಎಂದು ಸ್ಥಾಪಿಸಿದೆ. ನಾವಿಕ್‌ ಅನ್ನು ಹಿಂದೆ ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಎಂದು ಕರೆಯಲಾಗುತ್ತಿತ್ತು. ನಾವಿಕ್‌ ಅನ್ನು 7 ಉಪಗ್ರಹಗಳ ಸಮೂಹದೊಂದಿಗೆ ಮತ್ತು ದಿನದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಭೂಕೇಂದ್ರಗಳ ಜಾಲದೊಂದಿಗೆ ವಿನ್ಯಾಸಗೊಳಿಸಲಾಗಿದೆ. 

Public Transport: ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್‌ ಕಡ್ಡಾಯ: ನಿಗಾವಹಿಸಲು ಏಜೆನ್ಸಿಗೆ ಆಹ್ವಾನ

Latest Videos
Follow Us:
Download App:
  • android
  • ios