Expensive Smartphone Trending In India: ಜುಲೈ 2025 ರ ವೇಳೆಗೆ ಭಾರತದಲ್ಲಿ ಮಾರಾಟವಾಗುವ 5 ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನ ಒಳನೋಟಗಳನ್ನು ನೀಡುತ್ತದೆ. ಆ ಐದು ದುಬಾರಿ ಮೊಬೈಲ್ ನೀವು ಬಳಕೆ ಮಾಡುತ್ತಿದ್ದೀರಾ?
ನವದೆಹಲಿ: ಇಂದು ಸ್ಮಾರ್ಟ್‌ಫೋನ್‌ಗಳು ಜೀವನದ ಒಂದು ಭಾಗವಾಗಿವೆ. ಎಷ್ಟೋ ಜನರು ಇಂದು ತಮ್ಮ ಅರ್ಧ ಕೆಲಸಗಳನ್ನು ಮೊಬೈಲ್‌ನಿಂದಲೇ ಮಾಡಿ ಮುಗಿಸುತ್ತಾರೆ. ಒಂದು ದಶಕದ ಹಿಂದೆ 20 ರಿಂದ 30 ಸಾವಿರ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ದುಬಾರಿ ಎಂದು ಪರಿಗಣಿಸಲಾಗುತ್ತಿತ್ತು. ಆದ್ರೆ ಇಂದು ಜನರು ಮೊಬೈಲ್ ಖರೀದಿಸುವಾಗ ಬೆಲೆ ನೋಡುತ್ತಿಲ್ಲ. ಮಧ್ಯಮ ವರ್ಗದ ಜನತೆ 1 ರಿಂದ 1.5 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದಾರೆ.
ಕಂಪನಿಗಳು ಸಹ ಇಂದು 2 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ನಮ್ಮ ದೇಶದಲ್ಲಿ ಅತ್ಯಧಿಕವಾಗಿ ಮಾರಾಟವಾಗುವ 5 ಸ್ಮಾರ್ಟ್‌ಫೋನ್‌ಗಳಲ್ಲಿ ಭಾರತದ ಯಾವುದೇ ಬ್ರ್ಯಾಂಡ್ ಇಲ್ಲ ಅನ್ನೋದು ಬೇಸರದ ಸಂಗತಿಯಾಗಿದೆ. ಜುಲೈ 2025 ರ ವೇಳೆಗೆ ಭಾರತದಲ್ಲಿ ಮಾರಾಟವಾಗುವ 5 ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಬೆಲೆ ಮತ್ತು ವಿಶೇಷತೆ ಏನು ಎಂಬುದರ ಮಾಹಿತಿ ಇಲ್ಲಿದೆ.
1.Samsung Galaxy Z Fold 7
ಬೆಲೆ: 1,74,999 ರೂಪಾಯಯಿಂದ 2,16,999 ರೂಪಾಯಿವರೆಗೆ
ವೇರಿಯಂಟ್ಸ್:
12GB RAM + 256GB ಸ್ಟೋರೇಜ್: 1,74,999 ರೂಪಾಯಿ
12GB RAM + 512GB ಸ್ಟೋರೇಜ್: 1,86,999 ರೂಪಾಯಿ
16GB RAM + 1TB ಸ್ಟೋರೇಜ್: 2,16,999 ರೂಪಾಯಿ
ವಿಶೇಷತೆ: Samsung Galaxy Z Fold 7 ಇದುವರೆಗಿನ ದುಬಾರಿ ಮತ್ತು ಅಡ್ವಾನ್ಸಡ್ ಫ್ಲೋಡೇಬಲ್ ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಪ್ರಿ ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿಯೇ 2.10 ಲಕ್ಷ ಆರ್ಡರ್ ಮಾಡಲಾಗಿದೆ.
2.Google Pixel 9 Pro Fold
ಬೆಲೆ: 1,52,999 ರೂಪಾಯಿ
ವೇರಿಯಂಟ್: 16GB RAM + 256GB ಸ್ಟೋರೇಜ್
ವಿಶೇಷತೆ: ಗೂಗಲ್‌ನ ಈ ಧಮಾಕಾದಾರ್ ಫ್ಲೋಡೇಬಲ್ ಫೋನ್ ಆಗಿದೆ. ಗ್ರಾಹಕರು ಈ ಸ್ಮಾರ್ಟ್‌ಫೋನ್‌ನ್ನು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರಂನಲ್ಲಿ ಖರೀದಿಸಬಹುದಾಗಿದೆ.
3. Vivo X Fold 5 5G
ಬೆಲೆ: 1,49,999 ರೂಪಾಯಿ
ವೇರಿಯಂಟ್: 16GB RAM + 512GB ಸ್ಟೋರೇಜ್
ವಿಶೇಷತೆ: ಜುಲೈ 30ರಂದು ವಿವೋ ಕಂಪನಿಯ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಸ್ಮಾರ್ಟ್‌ಫೋನ್‌ನನ್ನು ಗ್ರಾಹಕರು Amazon, Flipkart ಮತ್ತು ವಿವೋ ವೆಬ್‌ಸೈಟ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ.
4. OnePlus Open
ಬೆಲೆ: 1,49,999 ರೂಪಾಯಿ
ವೇರಿಯಂಟ್: 16GB RAM + 1TB ಸ್ಟೋರೇಜ್
ವಿಶೇಷತೆ: ಇದು ಒನ್‌ಪ್ಲಸ್ ಕಂಪನಿಯ ಪ್ರೀಮಿಯಂ ಫ್ಲೋಡೇಬಲ್ ಔಟ್‌ಫುಟ್ ಆಗಿದೆ. ಇದು ಅತ್ಯಧಿಕ ಸ್ಟೋರೇಜ್ ಹೊಂದಿದ್ದು, ಪವರ್‌ಫುಲ್ ಫರ್ಮಾಮೆನ್ಸ್ ಹೊಂದಿದೆ.
5. Apple iPhone 16 Pro Max
ಬೆಲೆ: 1,35,900 ರೂಪಾಯಿಗಳಿಂದ 1,57,900 ರೂ.ವರೆಗೆ
ವೇರಿಯಂಟ್ಸ್: 256GB- 1,35,900 ರೂಪಾಯಿ, 512GB- 1,57,900 ರೂಪಾಯಿ
ವಿಶೇಷತೆ: ಇದು ಪ್ರೀಮಿಯಂ ಸೆಗ್ಮೆಂಟ್‌ನಲ್ಲಿಯ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿದೆ. Apple iPhoneನ್ನು ಗ್ರಾಹಕರು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು.
ಟ್ರೆಂಡ್ ಏನಿದೆ?
ಸದ್ಯ ದುಬಾರಿ ಸ್ಮಾರ್ಟ್‌ಫೋನ್ ಖರೀದಿಯ ಟ್ರೆಂಡ್ ಹೆಚ್ಚಾಗಿದೆ. ಹಾಗಾಗಿಯೇ ಕಂಪನಿಗಳು ಸಹ 1.5 ರಿಂದ 2 ಲಕ್ಷ ರೂ.ವರೆಗಿನ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇಂದು ದುಬಾರಿ ಬೆಲೆಯ ಮೊಬೈಲ್‌ಗಳು ಐಷಾರಾಮಿ ಜೀವನದ ಸಂಕೇತಗಳಾಗಿವೆ. ಇಂದು ಹಲವರು ಮೊಬೈಲ್‌ನಲ್ಲಿಯೇ ಡಿಜಿಟಲ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚು ಫೀಚರ್ಸ್ ಮತ್ತು ಗುಣಮಟ್ಟದ ಮೊಬೈಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
