Oneplus 9RT 5G Review: ನಂಬರ್ ಒಂಬತ್ತರಲ್ಲಿ ಇದೇ ಕೊನೆಯ ಸ್ಮಾರ್ಟ್‌ಫೋನ್!
ವನ್‌ಪ್ಲಸ್ 9ಆರ್ ಕೊಂಡುಕೊಂಡವರಿಗೆ ಇದರಲ್ಲಿ ಅಂಥ ಮಹಾನ್ ವಿಶೇಷವೇನೂ ಕಾಣಿಸದು. ರೇರ್‌ಕ್ಯಾಮರಾದ ಡಿಸೈನ್ ಚೆನ್ನಾಗಿದೆ. ಒಟ್ಟಾರೆ ಫೋನ್ ಮುದ್ದಾಗಿದೆ. ಬೆಲೆಯೂ ಹದವಾಗಿದೆ.
Tech Desk: ಇಷ್ಟರಲ್ಲಾಗಲೇ ವನ್‌ಪ್ಲಸ್ 10 (OnePlus 10) ಬಂದುಬಿಡಬೇಕಾಗಿತ್ತು. ಐಫೋನ್ ಈಗಾಗಲೇ 13ನೇ ವರ್ಷನ್ನು ಹೊರತಂದಿದೆ. ಆದರೆ ವನ್‌ಪ್ಲಸ್ 10 ಕ್ರಾಂತಿಕಾರಿ ಆಗಿರಬೇಕು ಅಂತೇನೋ ಅಂದುಕೊಂಡಂತಿದೆ. ಹೀಗಾಗಿ ಕಾಯುವ ಕಾಲಾವಧಿಯಲ್ಲಿ ವನ್‌ಪ್ಲಸ್ 9ಆರ್‌ಟಿ (OnePlus 9RT) ಎಂಬ ಫೋನನ್ನು ಮಾರುಕಟ್ಟೆಗೆ ಬಿಟ್ಟಿದೆ.ಆರ್‌ಟಿ ಎಂದರೇನು ಅಂತ ಗಾಬರಿಬೀಳಬೇಕಿಲ್ಲ. ವನ್‌ಪ್ಲಸ್ ಮೊದಲಿನಿಂದಲೂ ಪ್ರತಿಯೊಂದು ವರ್ಷನ್‌ಗೂ ಟಿ ಸೇರಿಸಿ ಹೊಸ ವರ್ಷನ್ ಬಿಡುಗಡೆ ಮಾಡುತ್ತಲೇ ಬಂದಿದೆ. ವನ್‌ಪ್ಲಸ್ 9ಆರ್ ಬಂದಿತ್ತು. ಈಗ ಆರ್‌ಟಿ.
ವನ್‌ಪ್ಲಸ್ 9ಆರ್ ಕೊಂಡುಕೊಂಡವರಿಗೆ ಇದರಲ್ಲಿ ಅಂಥ ಮಹಾನ್ ವಿಶೇಷವೇನೂ ಕಾಣಿಸದು. ರೇರ್‌ಕ್ಯಾಮರಾದ ಡಿಸೈನ್ ಚೆನ್ನಾಗಿದೆ. ಒಟ್ಟಾರೆ ಫೋನ್ ಮುದ್ದಾಗಿದೆ. ಬೆಲೆಯೂ ಹದವಾಗಿದೆ. ಈ ವರ್ಷನ್ನಿನಲ್ಲಿ 8ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜಿನ ಫೋನಿಗೆ .42,999. 12 ಜಿಬಿ ರಾರಯಮ್ ಮತ್ತು 256 ಜಿಬಿ ಸ್ಟೋರೇಜ್ ಬೇಕಿದ್ದರೆ ನಾಲ್ಕು ಸಾವಿರ ರುಪಾಯಿ ಜಾಸ್ತಿ ತೆರಬೇಕು.
12 ಜಿಬಿ ಆಕರ್ಷಣೆಗಿಂತ ನಾಲ್ಕು ಸಾವಿರ ಕೊಟ್ಟರೆ ಎರಡರಷ್ಟುಸ್ಟೋರೇಜ್ ಸ್ಪೇಸ್ ಸಿಗುತ್ತದಲ್ಲ, ಈ ಆಕರ್ಷಣೆಯನ್ನು ಮೀರುವುದು ಹೇಗೆ? ಬೆಳ್ಳಿ ಮತ್ತು ಕರಿಯ- ಎಂದು ಕರೆಯಬಹುದಾದ ಎರಡು ವರ್ಣಗಳಲ್ಲಿ ಈ ಫೋನ್ ಲಭ್ಯ. ನಮ್ಮ ಆಯ್ಕೆ ಕರಿಯ. ಅದಕ್ಕೊಂದು ಘನತೆಯಿದೆ. ಅಪ್ರತಿಮ ಪತ್ತೇದಾರನಂತೆ ಕಪ್ಪು ಫೋನ್ ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಇದನ್ನೂ ಓದಿ: Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ
Specifications: ವಿವರಗಳು ಬೇಕಿದ್ದವರಿಗೆ ಇಲ್ಲಿದೆ ಮಾಹಿತಿ. ಇದರ ಪ್ರೊಸೆಸರ್ ಕ್ವಾಲ್‌ಕೋಮ್ ಸ್ನಾಪ್‌ಡ್ರಾಗನ್ 888 ಆಕ್ಟಾಕೋರ್. ಆಂಡ್ರಾಯಿಡ್ 11 ವರ್ಷನ್. 158 ಗ್ರಾಮ್ ತೂಕ. 120 ಮೆಗಾಹರ್ಟ್‌್ಸ ರಿಫ್ರೆಶ್ ರೇಟ್, 6.62 ಇಂಚ್ ಸ್ಕ್ರೀನ್. ಮಿಕ್ಕಂತೆ 5ಜಿ ಕಂಪ್ಯಾಟಬಿಲಿಟಿ ಇದೆ. ಮೂರು ವೈಫೈ ಆಂಟೆನಾಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇನ್‌ಬಿಲ್ಟ್ ಕೂಲಿಂಗ್ ಸಿಸ್ಟಮ್ ಕೂಡ ಇದರಲ್ಲಿದೆ. ಈ ಫೋನಿನ ಜತೆಗೇ ಚಾರ್ಜರ್ ಕೂಡ ಬರುತ್ತದೆ.
ಇದರಲ್ಲಿ ಮಹತ್ವದ ಬದಲಾವಣೆ ಎಂದರೆ ಬ್ಯಾಟರಿ ಮತ್ತು ಕ್ಯಾಮರಾ. 4500 ಎಮ್‌ಎಎಚ್ ಬ್ಯಾಟರಿ ವಿಡಿಯೋ ಮೋಡ್‌ನಲ್ಲಿಯೇ ಸುಮಾರು 18 ಗಂಟೆಗಳ ಕಾಲ ಜೀವ ಹಿಡಕೊಂಡಿರಬಲ್ಲದು. ವೈಫೈ ಆಫ್ ಮಾಡಿಟ್ಟರೆ ಎರಡರಿಂದ ಮೂರು ದಿನ ಉಸಿರಾಡಬಹುದು.
ಇದನ್ನೂ ಓದಿ: OnePlus 10 Pro Features: ಒನ್‌ಪ್ಲಸ್‌ನ ಬಹುನೀರಿಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆ!
ರೇರ್ ಕ್ಯಾಮರಾ ಅಂತೂ ಅದ್ಭುತ. 50 ಮೆಗಾಪಿಕ್ಸೆಲ್‌ನ ಸೋನಿ ಐಎಂಎಕ್ಸ್ 481 ಸೆನ್ಸರ್ ಇರುವ ಅಲ್ಟಾ್ರವೈಡ್ ಕ್ಯಾಮರಾ ಹಾಗೂ ಮತ್ತೊಂದು 2 ಮೆಗಾಪಿಕ್ಸೆಲ್ ಹಾಗೂ 16 ಮೆಗಾಪಿಕ್ಸೆಲ್ ಕ್ಯಾಮರಾಗಳಿವೆ. ಫೋಟೋ ಮತ್ತು ವಿಜಿಯೋ ವಿಭಾಗದಲ್ಲಿ ಸಾಕಷ್ಟುಆಯ್ಕೆಗಳೂ ಸಿಗುತ್ತವೆ. ಪೋರ್ಟ್‌ರೈಟ್ ಫೋಟೋಗ್ರಫಿಗೆ ಇದು ಹೇಳಿ ಮಾಡಿಸಿದ ಕ್ಯಾಮರಾ.ಇದರ ಬೆಲೆ ಹೆಚ್ಚಾಯಿತು ಅಂತ ಮೋಲ್ನೋಟಕ್ಕೆ ಅನ್ನಿಸಬಹುದು. ಆದರೆ ಫೋನ್ ಕೈಗೆ ಬಂದಾಗ ಕೊಟ್ಟಬೆಲೆಗೆ ತಕ್ಕ ಕಾಯಕ ಮಾಡುವುದು ಕಂಡು ಸಂತೋಷವಾಗಬಹುದು.
ಒನ್‌ಪ್ಲಸ್ 10 ಪ್ರೊ ಬೆನ್ನಲ್ಲೇ ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್?: ಒನ್‌ಪ್ಲಸ್ 10 ಅಲ್ಟ್ರಾ (OnePlus 10 Ultra) ಸ್ಮಾರ್ಟ್‌ಫೋನ್ ಬಗ್ಗೆ ಆನ್‌ಲೈನ್‌ನಲ್ಲಿ ಕೆಲವು ಮಾಹಿತಿಗಳು ಸೋರಿಕೆಯಾಗುತ್ತಿರುವುದರಿಂದ ಬಳಕೆದಾರರಲ್ಲೂ ಹೆಚ್ಚಿನ ಕುತೂಹಲ ಮೂಡಲು ಕಾರಣವಾಗಿದೆ. ಟಿಪಸ್ಟರ್ ಯೋಗೇಶ್ ಬ್ರಾರ್ ಅವರ ಪ್ರಕಾರ, ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ಅಲ್ಟ್ರಾ ಫ್ಲ್ಯಾಗ್‌ಶಿಫ್‌ಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಕಾರ್ಯನಿರತವಾಗಿದೆ. ಸದ್ಯ ಈ ಫೋನು ಎಂಜಿನಿಯರಿಂಗ್ ವೆರಿಫಿಕೇಷನ್ ಟೆಸ್ಟಿಂಗ್ (Engineering Verification Testing-EVT) ಹಂತದಲ್ಲಿದೆ. ಸಾಮಾನ್ಯವಾಗಿ EVT ಎಂಬುದು, ಯಾವುದೇ ಸ್ಮಾರ್ಟ್‌ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಮೊದಲನೆಯ ಹಂತವಾಗಿರುತ್ತದೆ.
ಈ ಟೆಸ್ಟಿಂಗ್ ಮುಗಿದ ಬಳಕವಷ್ಟೇ ಡಿಸೈನ್ ವೆರಿಫಿಕೇಷನ್ ಟೆಸ್ಟಿಂಗ್ (DVT) ಹಂತಕ್ಕೆ ಸ್ಮಾರ್ಟ್‌ಫೋನ್ ಹೋಗುತ್ತದೆ. ಆ ಬಳಿಕವೇ ಪ್ರಾಡಕ್ಟ್ ವೆರಿಫಿಕೇಷನ್ ಟೆಸ್ಟಿಂಗ್ (PVT) ನಡೆಯುತ್ತದೆ. ಒಂದು ಸ್ಮಾರ್ಟ್‌ಫೋನ್ ಈ ಮೂರು ಮಾದರಿಯ ಟೆಸ್ಟಿಂಗ್ ಹಂತಗಳನ್ನು ಪೂರೈಸಲೇಬೇಕಾಗುತ್ತದೆ. ಈಗ ಒನ್‌ಪ್ಲಸ್ 10 ಅಲ್ಟ್ರಾ ಈ ಹಂತಗಳನ್ನು ಪೂರೈಸಬೇಕಿದೆ.