CES 2022: 6 ಟ್ಯಾಬ್, ಒಂದು ಲ್ಯಾಪ್‌ಟ್ಯಾಪ್, ವಿಆರ್ ಗ್ಲಾಸೆಸ್ ಲಾಂಚ್ ಮಾಡಿದ ಟಿಸಿಎಲ್

*ಚೀನಾ ಮೂಲದ ಟಿಸಿಎಲ್ ಕಂಪನಿಯಿಂದ ಒಟ್ಟಿಗೆ ಹಲವು ಸಾಧನಗಳು ಅನಾವರಣ
*ಈ ಎಲ್ಲ ಸಾಧನಗಳು ಬಜೆಟ್ ಸಾಧನಗಳಾಗಿದ್ದು, ಹೊಸ ಹೊಸ ಫೀಚರ್‌ ಪಡೆದಿವೆ
*ಈಗ ಬಿಡುಗಡೆಯಾಗಿರುವ ಸಾಧನಗಳು ಬಳಕೆದಾರರಿಗ ಹೊಸ ಅನುಭವ ನೀಡಲಿವೆ

TCL launches 6 tabs one laptop and nxtWear Air smart glasses check details

Tech Desk: ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಚೀನಾ ಮೂಲದ ಕಂಪನಿಗಳು ತಮ್ಮದೇ ಛಾಪು ಹೊಂದಿವೆ. ಜಗತ್ತಿನ ಎಲ್ಲ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪಾಲು ಪಡೆದುಕೊಂಡಿವೆ. ಈ ಸಾಲಿಗೆ ಚೀನಾ ಟಿಸಿಎಲ್ (TCL) ಕೂಡ ಸೇರುತ್ತದೆ. ಈ ಟಿಸಿಎಲ್ ಕಂಪನಿಯು ಕಂನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ(CES) 2022ರ ಇವೆಂಟ್‌ನಲ್ಲಿ 6 ಹೊಸ ಟ್ಯಾಬ್ಲೆಟ್ಸ್, ವಿಂಡೋಸ್ ಲ್ಯಾಪ್‌ಟಾಪ್, ವರ್ಚುವಲ್ ರಿಯಾಲ್ಟಿ ಗ್ಲಾಸಸ್‌ಗಳನ್ನು ಜಗತ್ತಿಗೆ ಪರಿಚಯಿಸಿದೆ. ಈಗ ಬಿಡುಗಡೆಯಾಗಿರುವ ಟ್ಯಾಬ್ಲೆಟ್ ಮತ್ತು ವಿಂಡೋಸ್ ಲ್ಯಾಪ್‌ಟಾಪ್‌ಗಳು ಎಲ್ಲ ವರ್ಗದವರು ಶೈಕ್ಷಣಿಕ ಅನುಭವವನ್ನು ನೀಡುವಂಥವಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ವಿಆರ್ (VR) ಗ್ಲಾಸ್‌ಗಳು ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. ಈ ಹೊಸ ಸಾಧನಗಳ ಮೂಲಕ ಚೀನಾ ಮೂಲದ  ಟಿಸಿಎಲ್ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಬಹುದು. ಏಕಕಾಲಕ್ಕೆ ಕಂಪನಿಯು ಆರು ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ಯಾವ ರೀತಿಯಲ್ಲಿ ಸ್ಪಂದಿಸಲಿದ್ದಾರೆಂದು ಎಂಬುದನ್ನು ನೋಡಬೇಕಿದೆ. 

ಟಿಸಿಎಲ್ ಬಿಡುಗಡೆ ಮಾಡಿರುವ ಆರೂ ಟ್ಯಾಬ್ಲೆಟ್‌ಗಳು ಹೀಗಿವೆ- ಟಿಸಿಎಲ್ ನೆಕ್ಸ್ಟ್‌ಪೇಪರ್ (TCL NxtPaper 10s), ಟ್ಯಾಬ್ 10ಎಲ್ (Tab 10L), ಟ್ಯಾಬ್ 8 4ಜಿ (Tab 8 4G), ಕೀ ಮಿನಿ (Tkee Mini), ಕಿ ಮಿಡ್ (Tkee Mid) ಮತ್ತು ಕಿ ಮ್ಯಾಕ್ಸ್ ಪ್ರೈಸ್ (Tkee Max price) ಹಾಗೂ ಬುಕ್ 14 ಗೋ (Book 14 Go) ಲ್ಯಾಪ್‌ಟಾಪ್. ಈ ಫೋನುಗಳು ಚೀನಾ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ತಿಂಗಳಾಂತ್ಯದಲ್ಲಿ ದೊರೆಯಲಿವೆ. ಈ ಎಲ್ಲ ಟ್ಯಾಬ್ಲೆಟ್‌ಗಳು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 6,600 ರೂ.ನಿಂದ 26,000 ರೂ.ವರೆಗೂ ದೊರೆಯಲಿವೆ. ವಿಶೇಷ ಏನೆಂದರೆ, TCL Tkee Mini, TCL Tkee Mid, TCL Tkee Max ಟ್ಯಾಬ್ಲೆಟ್‌ಗಳನ್ನು ಕಂಪನಿಯು 2021ರ ಜನವರಿಯಲ್ಲೇ ಅಲ್ಕಾಟೆಲ್ ಬ್ರ್ಯಾಂಡ್‌ನಡಿ ಬಿಡುಗಡೆಯಾಗಿವೆ.

Whatsapp Accounts Ban ಒಂದೇ ತಿಂಗಳಲ್ಲಿ 17.5 ಲಕ್ಷ ವಾಟ್ಸಾಪ್ ಖಾತೆ ನಿಷೇಧ!    

ಟಿಸಿಎಲ್ ಪ್ರಮುಖ ಟ್ಯಾಬ್ಲೆಟ್ ಎನಿಸಿಕೊಂಡಿರುವ ಟಿಸಿಎಲ್ ನೆಕ್ಸ್ಟ್‌ಪೇಪರ್ 10 (TCL NxtPaper 10s) ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಈ ಟ್ಯಾಬ್ 10.1 ಇಂಚ್ ಡಿಸ್‌ಪ್ಲೇ ಹೊಂದಿದೆ. ಈ ಟ್ಯಾಬ್ ಬ್ಲೂ ಲೈಟ್ ಹೊರಸೂಸುವುದನ್ನು ಶೇ.50ರಷ್ಟು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಮಡಿದೆ. ಟಿ ಪೆನ್ (T pen), ಫೋಲಿಯೋ ಕೀಬೋರ್ಡ್, ರೈಟಿಂಗ್ ಬೋರ್ಡ್ ಸಾಧನಗಳಿಗೂ  ಸಪೋರ್ಟ್ ಮಾಡುತ್ತದೆ.

ಕಂಪನಿಯು ಈ ಟ್ಯಾಬ್‌ನಲ್ಲಿ ಮೀಡಿಯಾ ಟೆಕ್ ಹೆಲಿಯೋ ಪಿ23 (MediaTek Helio P23 SoC) ಪ್ರೊಸೆಸರ್ ಅನ್ನು ಅಳವಡಿಸಿದೆ. ಇದಕ್ಕೆ 4ಜಿಬಿ ರ್ಯಾಮ್ ಸಂಯೋಜಿಸಲಾಗಿದೆ ಮತ್ತು 64 ಜಿಬಿ ಇನ್ ಬಿಲ್ಟ್ ಸ್ಟೋರೇಜ್ ದೊರೆಯಲಿದೆ. ಟ್ಯಾಬ್ ಹಿಂಬದಿಯಲ್ಲಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ ಮತ್ತು ಮುಂಬದಿಯಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಅದೇ ರೀತಿ 8000 ಎಂಎಂಎಚ್ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಬ್ಯಾಟರಿ ವಿಷಯದಲ್ಲಿ ಈ ಟ್ಯಾಬ್ ಗರಿಷ್ಠ ಪ್ರದರ್ಶನ ನೀಡಲಿದೆ ಎಂದು ಹೇಳಬಹುದು.

ಇದೇ ರೀತಿಯಲ್ಲಿ ಉಳಿದ ಟ್ಯಾಬ್‌ಗಳೂ ಸಾಕಷ್ಟು ಹೊಸ ಫೀಚರ್‌ಗಳು ಮತ್ತು ಅತ್ಯುತ್ತಮ ಪ್ರದರ್ಶನ ತೋರುವ ಪ್ರೊಸೆಸರ್, ಬ್ಯಾಟರಿಗಳನ್ನು ಒಳಗೊಂಡಿವೆ.  ಈ ಪೈಕಿ ಟಿಸಿಎಲ್ ಟ್ಯಾಬ್ 10 ಎಲ್, ಟ್ಯಾಬ್ 8 4ಜಿ ಟ್ಯಾಬ್‌ಗಳು ಸಾಕಷ್ಟು ಗಮನ ಸೆಳೆಯುತ್ತವೆ. ಈ ಟ್ಯಾಬ್‌ಗಳು 10.1 ಇಂಚ್ ಎಚ್‌ಡಿ ಡಿಸ್‌ಪ್ಲೇ ಒಳಗೊಂಡಿದ್ದರೆ 2 ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿವೆ.  ಅದೇ ರೀತಿ, ಟ್ಯಾಬ್‌ ಹಿಂದೆ ಮತ್ತು ಫ್ರಂಟ್‌ನಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆ ನೀಡಲಾಗಿದೆ. 4,080 ಎಂಎಎಚ್ ಸಾಮರ್ಥ್ಯ ಬ್ಯಾಟರಿ ನೀಡಲಾಗಿದೆ.

Lava Agni 5G: ಹೊಸ ಆಫರ್! Realmeಯ ನಿರ್ದಿಷ್ಟ ಫೋನ್ ಕೊಟ್ಟರೆ ಲಾವಾ ಅಗ್ನಿ 5G ಉಚಿತ!

Latest Videos
Follow Us:
Download App:
  • android
  • ios