Asianet Suvarna News Asianet Suvarna News

ನೋ ಶೇಕ್ ಕ್ಯಾಮೆರಾ, ಸುದೀರ್ಘ ಬಾಳಿಕೆ ಬ್ಯಾಟರಿ; ಸ್ಯಾಮ್‌ಸಂಗ್ Galaxy F54 5G ಫೋನ್ ಬಿಡುಗಡೆ!

108ಎಂಪಿ ನೋ ಶೇಕ್ ಕ್ಯಾಮರಾ, ರಾತ್ರಿ ವೇಳೆಯೂ ಅಷ್ಟೇ ಕ್ಲಾರಿಟಿ ಪಿಕ್ಟರ್, ಸುದೀರ್ಘ ಬ್ಯಾಟರಿ ಬಾಳಿಕೆ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಸ್ಯಾಮ್‌ಸಂಗ್ Galaxy F54 ಪ್ರೀಮಿಯಂ 5ಜಿ ಫೋನ್ ಬಿಡುಗಡೆಯಾಗಿದೆ.

Samsung unveils Galaxy F54 5G smartphone with 108MP No Shake Camera 6000 mAh Battery ckm
Author
First Published Jun 8, 2023, 5:54 PM IST

ದೆಹಲಿ(ಜೂ.08): ಭಾರತದಲ್ಲಿ ಸ್ಯಾಮ್ಸಂಗ್ ಹೊಸ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಕೆ ಹತ್ತು ಹಲವು ಆಯ್ಕೆ ನೀಡುತ್ತಿದೆ. ಇದೀಗ ಸ್ಯಾಮ್‌ಸಂಗ್ ಅತ್ಯಂತ ಪ್ರೀಮಿಯಂ Galaxy F ಸೀರೀಸ್ ನ ಸ್ಮಾರ್ಟ್ ಫೋನ್ Galaxy F54 5G ಬಿಡುಗಡೆ ಮಾಡಿದೆ. Galaxy F54 5Gಯ ತೆಳುವಾದ ಮತ್ತು ಗ್ಯಾಲಕ್ಸಿ ಸಿಗ್ನೇಚರ್ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದೆ. Galaxy F54 5G ಈ ವರ್ಗದ ಮುಂಚೂಣಿಯ ವಿಶೇಷತೆಗಳಾದ 108ಎಂಪಿ ನೋ ಶೇಕ್ ಕ್ಯಾಮರಾ, ಆಸ್ಟ್ರೊಲ್ಯಾಪ್ಸ್ ಮತ್ತು ನೈಟೊಗ್ರಫಿ,  6,000ಎಂಎಎಚ್ ಬ್ಯಾಟರಿ ,  ಸೂಪರ್ ಅಮೋಲ್ಡ್+ 120ಹರ್ಟ್ಸ್ ಡಿಸ್‌ಪ್ಲೇ ಮೂಲಕ ಫೋನ್ ಫೋನ್ ಬಿಡುಗಡೆಯಾಗಿದೆ.

Galaxy F54 5G ಶಕ್ತಿಯುತ 108ಎಂಪಿ(ಒಐಎಸ್) ನೋ ಶೇಕ್ ಕ್ಯಾಮರಾದೊಂದಿಗೆ 8 MP ಅಲ್ಟ್ರಾ-ವೈಡ್ ಲೆನ್ಸ್, 2 MP ಮ್ಯಾಕ್ರೊ ಲೆನ್ಸ್ ಮತ್ತು 32 MP ಸೆಲ್ಫೀ ಕ್ಯಾಮರಾ ಹೊಂದಿದೆ.  ಈ ಫ್ಲಾಗ್ ಶಿಪ್ ಸೀರೀಸ್ ನಿಂದ ಅತ್ಯಂತ ಪ್ರೀತಿಪಾತ್ರ ನೈಟೊಗ್ರಫಿ ವಿಶೇಷತೆಯು Galaxy F54 5Gನೊಂದಿಗೆ ಹೆಚ್ಚು ಲಭ್ಯವಿರುವಂತೆ ಮಾಡಲಾಗಿದೆ. ಇದರಿಂದ ರಾತ್ರಿ ವೇಳೆಯ ಛಾಯಾಚಿತ್ರಗಳನ್ನು ಸೆರೆ ಹಿಡಿಯಬಹುದು. Galaxy F54 5G ದೊಡ್ಡ ಪಿಕ್ಸೆಲ್ ಗಳೊಂದಿಗೆ ಬಂದಿದ್ದು ಅದಕ್ಕೆ ನೋನಾ-ಬಿನ್ನಿಂಗ್ ತಂತ್ರಜ್ಞಾನ ಕಾರಣವಾಗಿದ್ದು ಅದು ಹೆಚ್ಚು ಬೆಳಕನ್ನು ಪಡೆಯುತ್ತದೆ. Galaxy F54 5G ವಿಶೇಷವಾದ ನೈಟ್ ಮೋಡ್ ಅಲ್ಲದೆ ಆಟೊ ನೈಟ್ ಮೋಡ್ ಹೊಂದಿದೆ ಮತ್ತು ಎಐ ಆಧರಿತ ಮಲ್ಟಿ-ಫ್ರೇಮ್ ಪ್ರೊಸೆಸಿಂಗ್ ಮೂಲಕ ನೀವು 12 ಫ್ರೇಮ್ ಗಳವರೆಗೆ ಒಂದು ಮಹತ್ತರ ಫೋಟೋ ತೆಗೆಯಬಹುದು.

 

ಬಂಪರ್ ಆಫರ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ ಬಿಡುಗಡೆ, ಹೊಸ ಬಣ್ಣದಲ್ಲಿ ಲಭ್ಯ!

ಸ್ಪಷ್ಟ ಹಾಗೂ ಸ್ಥಿರ ನೈಟ್ ವಿಡಿಯೋ ನೀಡಲು Galaxy F54 5G ಸೂಕ್ಷ್ಮ, ಡ್ಯುಯಲ್-ಟ್ರ್ಯಾಕ್ ಇಮೇಜ್ ಸ್ಟೆಬಿಲೈಸೇಷನ್ ಪರಿಹಾರವನ್ನು ಒಐಎಸ್ ಮತ್ತು ವಿಡಿಐಎಸ್ ನೊಂದಿಗೆ ಹೊಂದಿದೆ. ಒಐಎಸ್ ಕ್ಯಾಮರಾ ಅಲುಗಾಡುವುದನ್ನು ಭೌತಿಕವಾಗಿ ಲೆನ್ಸ್ ಅನ್ನು ಚಲನೆಯ ವಿರುದ್ಧ ದಿಕ್ಕಿಗೆಚಲಿಸುವ ಮೂಲಕ ಸರಿಪಡಿಸುತ್ತದೆ. Galaxy F54 5G ಯ ಒಐಎಸ್ ಹಾರ್ಡ್ ವೇರ್ 1.5 ಡಿಗ್ರಿ ಕರೆಕ್ಟಿವ್ ಕೋನ ಹೊಂದಿದ್ದು ಅದು ಕ್ಯಾಮರಾವನ್ನು ಹೆಚ್ಚು ಅಲುಗಾಡುವಿಕೆಯಿಂದ ತಟಸ್ಥಗೊಳಿಸಿ ಮೃದುವಾದ ರೆಕಾರ್ಡಿಂಗ್ ನೀಡುತ್ತದೆ. ವಿಡಿಐಎಸ್ ಕ್ಯಾಮರಾ ಚಲನೆಗಳಿಗೆ ಬದಲಿಗೆ ಸಾಫ್ಟ್ ವೇರ್ ಬಳಸುತ್ತದೆ ಮತ್ತು 1 ಕಿಲೋಹರ್ಟ್ಸ್ ಮೋಷನ್ ಸ್ಯಾಂಪ್ಲಿಂಗ್ ಫ್ರೀಕ್ವೆನ್ಸಿ ನೀಡುವ ಮೂಲಕ ವೇಗದ ಮತ್ತು ನಿಖರವಾದ ಮ್ಯಾಗ್ನಿಟ್ಯೂಡ್ ಮತ್ತು ಡೈರೆಕ್ಷನಲ್ ಅನಾಲಿಸಿಸ್ ನೀಡುತ್ತದೆ.

ಸ್ಯಾಮ್‌ಸಂಗ್‌ನಿಂದ 10 ಲಕ್ಷ ರೂ ಬೆಲೆಯ ಟಿವಿ ಬಿಡುಗಡೆ, ಊಹೆಗೂ ನಿಲುಕದ ತಂತ್ರಜ್ಞಾನ!

Galaxy F54 5G ಬೃಹತ್ತಾದ 6.7” ಎಸ್ ಅಮೋಲ್ಡ್ 120+ ಗಿಗಾಹರ್ಟ್ಸ್ ಡಿಸ್ಪ್ಲೇಯನ್ನು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವಕ್ಕೆ ಹೊಂದಿದೆ. ದೊಡ್ಡ ಸ್ಕ್ರೀನ್ 120 ಹರ್ಟ್ಸ್ ರಿಫ್ರೆಶ್ ರೇಟ್ ನೊಂದಿಗೆ ಸಾಮಾಜಿಕ ಮಾಧ್ಯಮದ ಫೀಡ್ ಸ್ಕ್ರೋಲಿಂಗ್ ಅನ್ನು ತಂತ್ರಜ್ಞಾನದ ಆಸಕ್ತ ಜೆನ್ ಝಡ್ ಮತ್ತು ಮಿಲೆನಿಯಲ್ ಗ್ರಾಹಕರಿಗೆ ಸುಲಭಗೊಳಿಸುತ್ತದೆ. Galaxy F54 5G ಮೂಲಕ ಬಿಂಜ್ ವೀಕ್ಷಕರು ಪ್ರಯತ್ನರಹಿತವಾಗಿ ಅವರ ಅಚ್ಚುಮೆಚ್ಚಿನ ಮನರಂಜನಯೆನ್ನು ಚಲನೆಯಲ್ಲಿ ವೀಕ್ಷಿಸಬಹುದು. ಹೆಚ್ಚುವರಿಯಾಗಿ Galaxy F54 5G ವಿಷನ್ ಬೂಸ್ಟರ್ ನೊಂದಿಗೆ ಬಂದಿದ್ದು ಅದು ಸುತ್ತಮುತ್ತಲಿನ ಬೆಳಕಿನ ತೀವ್ರತೆಯನ್ನು ಮತ್ತು ಡಿಸ್‌ಪ್ಲೇ ಮೇಲೆ ಅದರ ಪರಿಣಾಮವನ್ನು ಪರಿಗಣಿಸಿ ಡಿಸ್‌ಪ್ಲೇ ವಿಸಿಬಿಲಿಟಿ ಸುಧಾರಿಸುತ್ತದೆ.

Galaxy F54 5Gಯ ದೀರ್ಘಕಾಲ ಬಾಳಿಕೆ ಬರುವ 6000 ಎಂಎಎಚ್ ಬ್ಯಾಟರಿಯ ಮೂಲಕ ನೀವು ಎಂದಿಗೂ ವಿದ್ಯುಚ್ಛಕ್ತಿ ಖಾಲಿಯಾಗುವುದಿಲ್ಲ. ಹೆಚ್ಚುವರಿಯಾಗಿ 25ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ನಿಮ್ಮ ಡಿವೈಸ್ ತ್ವರಿತವಾಗಿ ಶಕ್ತಿ ಪಡೆಯಲು ಅವಕಾಶ ಮಾಡಿಕೊಟ್ಟು ನಿಮ್ಮನ್ನು ಇಡೀ ದಿನ ಸಂಪರ್ಕಿತ ಮತ್ತು ಉತ್ಪಾದಕವಾಗಿರಿಸುತ್ತದೆ.

ಎರಡು ಅತ್ಯಾಧುನಿಕ ಬಣ್ಣಗಳು-ಮೀಟಿಯೊರ್ ಬ್ಲೂ ಮತ್ತು ಸ್ಟಾರ್ ಡಸ್ಟ್ ಸಿಲ್ವರ್ ಗಳಲ್ಲಿ ಲಭ್ಯವಿರುವ Galaxy F54 5G 8+256 ಜಿಬಿ ಸ್ಟೋರೇಜ್ ವೇರಿಯೆಂಟ್ ನಲ್ಲಿ ಲಭ್ಯ. ಇದು ಫ್ಲಿಪ್ ಕಾರ್ಟ್, ಸ್ಯಾಮ್ಸಂಗ್.ಕಾಂ ಮತ್ತು ಆಯ್ದ ರೀಟೇಲ್ ಮಳಿಗೆಗಳಲ್ಲಿ ಲಭ್ಯ. ಪ್ರಾರಂಭಿಕ ಕೊಡುಗೆಯಾಗಿ ಆಯ್ದ ಬ್ಯಾಂಕ್ ಕಾರ್ಡ್ ಗಳೊಂದಿಗೆ Galaxy F54 5G ಎಲ್ಲವನ್ನೂ ಒಳಗೊಂಡ ಬೆಲೆ ರೂ.27999ಕ್ಕೆ ದೊರೆಯುತ್ತದೆ. ಗ್ರಾಹಕರು Galaxy F54 5G ಖರೀದಿಸಿದರೆ ನೋ ಕಾಸ್ಟ್ ಇಎಂಐ ಕೂಡಾ ಪಡೆಯಬಹುದು.

Follow Us:
Download App:
  • android
  • ios