Asianet Suvarna News Asianet Suvarna News

ಬಂಪರ್ ಆಫರ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ ಬಿಡುಗಡೆ, ಹೊಸ ಬಣ್ಣದಲ್ಲಿ ಲಭ್ಯ!

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಹೊಚ್ಚ ಹೊಸ ಬಣ್ಣದಲ್ಲಿ ಲಭ್ಯವಿದೆ. ನಿಂಬೆ ಹಣ್ಣಿನ ಬಣ್ಣದ ಈ ಫೋನ್ ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಬಂಪರ್ ಕೊಡುಗೆ ಘೋಷಿಸಲಾಗಿದೆ. ಫೋನ್ ಬೆಲೆ, ಆಫರ್ ಕುರಿತ ಮಾಹಿತಿ ಇಲ್ಲಿದೆ.

Samsung launch Galaxy S23 Refreshing Lime Colour Goes on Sale  with Mega offers ckm
Author
First Published May 27, 2023, 6:34 PM IST

ನವದೆಹಲಿ(ಮೇ.27) ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಹೊಚ್ಚ ಹೊಸ ಭಾರಿ ಸಂಚಲನ ಸೃಷ್ಟಿಸಿದೆ. ನಿಂಬೆ ಬಣ್ಣದ ವೇರಿಯೆಂಟ್ ಈಗಾಗಲೇ ಮಾರುಕಟ್ಟೆಲ್ಲಿ ಲಭ್ಯವಿದೆ. ಇದರೊಂದಿಗೆ ಕಲರ್ಸ್‌ಗಳಲ್ಲಿ ಸ್ಯಾಮ್‌ಸಂಗ್ ಗ್ರಾಹಕರಿಗ ಗರಿಷ್ಠ ಆಯ್ಕೆ ನೀಡುತ್ತಿದೆ. ಗ್ಯಾಲಕ್ಸಿ S23 ಪ್ರಸ್ತುತ ಫ್ಯಾಂಟಮ್ ಬ್ಲಾಕ್, ಕ್ರೀಮ್, ಗ್ರೀನ್ ಮತ್ತು ಲ್ಯಾವೆಂಡರ್ ಹಾಗೂ ಇದೀಗ ನಿಂಬೆ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ S23 ಮಹತ್ತರವಾದ ಹಿಂಬದಿಯ ಕ್ಯಾಮರಾ 50MP  ಪ್ರೈಮರಿ ಕ್ಯಾಮರಾ, 12MP  ಅಲ್ಟ್ರಾ ವೈಡ್ ಕ್ಯಾಮರಾ ಹೊಂದಿದೆ. ಜೊತೆಗೆ 10MP ಟೆಲಿಫೋಟೋ ಕ್ಯಾಮರಾ ಫೀಚರ್ಸ್ ಹೊಂದಿದೆ. OIS ಹಾಗೂ 3X ಆಪ್ಟಿಕಲ್ ಝೂಮ್ ಒಳಗೊಂಡಿದೆ. ಗ್ಯಾಲಕ್ಸಿ S23, 12MP ಫ್ರಂಟ್ ಕ್ಯಾಮರಾ ಸೂಪರ್ ಎಚ್‌ಡಿಆರ್ ತಂತ್ರಜ್ಞಾನ ಹೊಂದಿದೆ  

ಗ್ಯಾಲಕ್ಸಿಗೆ ಸ್ನಾಪ್‌ಡ್ರಾಗನ್ 8 ಜೆನ್ 2 ಮೊಬೈಲ್ ಪ್ಲಾಟ್‌ಫಾರಂನಿಂದ ಪ್ರೀಮಿಯಂ ಅನುಭವಗಳನ್ನು ನೀಡುತ್ತಿದೆ. ಮಹತ್ತರವಾದ AI(ಆರ್ಟಿಫಿಶಯಲ್ ಇಂಟೆಲಿಜೆನ್ಸ್),  ಮೊಬೈಲ್ ಗೇಮಿಂಗ್  ಹಾಗೂ  ಮೊಬೈಲ್ ಗ್ರಾಫಿಕ್ಸ್ ನೀಡುತ್ತದೆ.  ಗ್ಯಾಲಕ್ಸಿ S23ಯ ಪ್ರೀಮಿಯಂ ಅನುಭವವನ್ನು ಹಲವು ವರ್ಷಗಳ ನಾಲ್ಕು ಜನರೇಷನ್‌ಗಳ OS ಅಪ್‌ಗ್ರೇಡ್‌ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳ ಮೂಲಕ ರೂಪಿಸಲಾಗಿದೆ.

 

ಸ್ಯಾಮ್‌ಸಂಗ್‌ನಿಂದ 10 ಲಕ್ಷ ರೂ ಬೆಲೆಯ ಟಿವಿ ಬಿಡುಗಡೆ, ಊಹೆಗೂ ನಿಲುಕದ ತಂತ್ರಜ್ಞಾನ!

ಗ್ಯಾಲಕ್ಸಿ ಎಸ್S23 ಸ್ಯಾಮ್‌ಸಂಗ್‌ನ ಸಮಗ್ರ ಸ್ಯಾಮ್‌ಸಂಗ್ ನಾಕ್ಸ್ ರಕ್ಷಣೆಯೊಂದಿಗೆ ಬಂದಿದ್ದು ಇದು ಮಾರುಕಟ್ಟೆಯಲ್ಲಿರುವ ಬೇರೆ ಯಾವುದೇ ಮೊಬೈಲ್ ಡಿವೈಸ್, ಪ್ಲಾಟ್‌ಫಾರಂ ಅಥವಾ ಪರಿಹಾರಕ್ಕಿಂತ ಹೆಚ್ಚು ಸರ್ಕಾರದ ಮತ್ತು ಉದ್ಯಮದ ಪ್ರಮಾಣೀಕರಣಗಳನ್ನು ಪಡೆದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿಯ ಸೆಕ್ಯುರಿಟಿ ಮತ್ತು ಪ್ರೆöÊವೆಸಿ ಡ್ಯಾಶ್‌ಬೋರ್ಡ್ ಬಳಕೆದಾರರಿಗೆ ಅವರ ದತ್ತಾಂಶದ ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಪೂರ್ಣ ವಿಸಿಬಿಲಿಟಿ ನೀಡುತ್ತದೆ. ಕೇವಲ ಒಂದು ನೋಟದಿಂದ ವೈಯಕ್ತಿಕ ದತ್ತಾಂಶ ರಿಸ್ಕ್ನಲ್ಲಿದೆಯೇ ಎಂದು ಸುಲಭವಾಗಿ ಕಾಣಬಹುದು ಮತ್ತು ಹೆಚ್ಚು ಸುರಕ್ಷಿತ ಅನುಭವಕ್ಕೆ ಸರಳ ಸೆಟ್ಟಿಂಗ್‌ಗಳನ್ನು ಪಡೆಯಬಹುದು. ಬಳಕೆದಾರರು ಈಗ ಯಾವ ಅಪ್ಲಿಕೇಷನ್‌ಗಳು ಮತ್ತು ಪ್ರೋಗ್ರಾಮ್‌ಗಳು ಅವರ ದತ್ತಾಂಶವನ್ನು ಬಳಸುತ್ತಿವೆ ಮತ್ತು ಹೇಗೆ ಬಳಕೆಯಾಗುತ್ತಿವೆ ಎಂದು ಕಂಡುಕೊಳ್ಳಬಹುದು.

ನೂತನ ಫೋನ್ ಬೆಲೆ
ಗ್ಯಾಲಕ್ಸಿ S23 ನಿಂಬೆಯ ಬಣ್ಣದಲ್ಲಿ ಎರಡು ಸ್ಟೋರೇಜ್ ಆಯ್ಕೆಗಳು- 8/128 GB ಹಾಗೂ 8/256 GB  ನೀಡುತ್ತಿದೆ ಮತ್ತು ಕ್ರಮವಾಗಿ INR 74999 and INR 79999, ಬೆಲೆ ಹೊಂದಿವೆ. ಸ್ಯಾಮ್‌ಸಂಗ್ ಅನ್ನು ಗ್ಯಾಲಕ್ಸಿ S23ರ ಹೊಸ ಬಣ್ಣದ ವೇರಿಯೆಂಟ್ ಕೊಳ್ಳಲು ಬಯಸುವ ಗ್ರಾಹಕರಿಗೆ ಅಸಾಧಾರಣ ಕೈಗೆಟುಕಬಲ್ಲತೆ ಆಯ್ಕೆಗಳು ಮತ್ತು ಕೊಡುಗೆಗಳಿಗೆ ವಿನ್ಯಾಸಗೊಳಿಸಲಾಗಿದೆ.

ಉನ್ನತೀಕರಿಸಿದ ಕೈಗೆಟುಕಬಲ್ಲತೆ ನಿರೀಕ್ಷಿಸುವವರಿಗೆ ಈ ಡಿವೈಸ್ ಅನ್ನು ಎಚ್‌ಡಿಎಫ್‌ಸಿ ಸಿಡಿ ಅಥವಾ ಬಜಾಜ್ ಫಿನ್‌ಸರ್ವ್ ಮೂಲಕ 24 ತಿಂಗಳ ನೋ-ಕಾಸ್ಟ್ EMI ಮೂಲಕ ಪ್ರತಿ ತಿಂಗಳಿಗೆ ರೂ 3,125 ಕ್ಕೆ ಪಡೆಯಬಹುದು. ಫ್ಲಾಗ್‌ಶಿಪ್ ಮಾಲೀಕರು ಕೈಗೆಟುಕಬಲ್ಲತೆಯನ್ನು ಅಪ್‌ಗ್ರೇಡ್ ಅನುಕೂಲದೊಂದಿಗೆ ಪಡೆಯಬಹುದು. ಗ್ರಾಹಕರು ರೂ 8000 ಅಪ್‌ಗ್ರೇಡ್ ಬೋನಸ್ ಅನ್ನು 24 ತಿಂಗಳ ಬಜಾಜ್ ಫಿನ್‌ಸರ್ವ್ ಇಎಂಐನೊಂದಿಗೆ ಅಥವಾ ಎಚ್‌ಡಿಎಫ್‌ಸಿ ಸಿಡಿ ಪೇಪರ್ ಫೈನಾನ್ಸ್ನೊಂದಿಗೆ ಸಂಯೋಜಿಸಬಹುದು.

ಸ್ಯಾಮ್‌ಸಂಗ್‌ನಿಂದ ಅತ್ಯಾಕರ್ಷಕ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಫೋನ್ ಬಿಡುಗಡೆ!

ಗ್ರಾಹಕರಿಗೆ ರೂ8000 ಅಪ್‌ಗ್ರೇಡ್ ಬೋನಸ್ ಅನ್ನು ಅವರ ಖರೀದಿಗೆ ರೂ5000 ದೊಂದಿಗೆ ಸಂಯೋಜಿಸುವ ಅವಕಾಶವಿದ್ದು ಇದರಿಂದ ಗ್ಯಾಲಕ್ಸಿ S23 S23 8/128GB ಹಾಗೂ 8/256GB  ಪರಿಣಾಮಕಾರಿ ಬೆಲೆ ಕ್ರಮವಾಗಿ ರೂ 61999 ಹಾಗೂ INR 66999 ರೂಪಾಯಿ. ಗ್ರಾಹಕರು ಎಚ್‌ಡಿಎಫ್‌ಸಿಯಲ್ಲಿ 9 ತಿಂಗಳ ನೋ-ಕಾಸ್ಟ್ ಇಎಂಐ ಕೂಡಾ ಈ ಕೊಡುಗೆಯೊಂದಿಗೆ ಪಡೆಯಬಹುದು.

Latest Videos
Follow Us:
Download App:
  • android
  • ios