ಸ್ಯಾಮ್ಸಂಗ್ ತಯಾರಿಸ್ತಿದೆ 600 ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾ!
ಸ್ಯಾಮ್ಸಂಗ್ ತಯಾರಿಸ್ತಿದೆ 600| ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾ| ಕಣ್ಣಿಗಿಂತ ಹೆಚ್ಚಿನ ಗ್ರಹಣ ಶಕ್ತಿ ಈ ಕ್ಯಾಮೆರಾಕ್ಕೆ
ಮುಂಬೈ(ಡಿ.07): : ನಮ್ಮ ಕಣ್ಣು ಗ್ರಹಿಸುವುದಕ್ಕಿಂತ ಹೆಚ್ಚು ನಿಖರವಾಗಿ ಎದುರಿನ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿರುವ 600 ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾವನ್ನು ಪ್ರಸಿದ್ಧ ಮೊಬೈಲ್ ಉತ್ಪಾದಕ ಕಂಪನಿ ಸ್ಯಾಮ್ಸಂಗ್ ಸಿದ್ಧಪಡಿಸುತ್ತಿದೆ. ಕಂಪನಿಯ ಆಂತರಿಕ ಮಾಹಿತಿಗೆಂದು ಸಿದ್ಧಪಡಿಸಿದ ದಾಖಲೆಯೊಂದು ಸೋರಿಕೆಯಾಗಿದ್ದು, ಅದರಲ್ಲಿ ಈ ಅಂಶವಿದೆ.
ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರ ಸಂಖ್ಯೆ 350 ದಶಲಕ್ಷ!
ಸದ್ಯ ಮೊಬೈಲ್‌ಗಳಲ್ಲಿ 48, 64 ಹಾಗೂ 108 ಮೆಗಾಪಿಕ್ಸೆಲ್‌ವರೆಗಿನ ಕ್ಯಾಮೆರಾಗಳು ಬರುತ್ತಿವೆ. ಸ್ಯಾಮ್ಸಂಗ್ ಕಂಪನಿ ಇನ್ನಷ್ಟುಹೆಜ್ಜೆ ಮುಂದೆ ಹೋಗಿ 600 ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾ ಸೆನ್ಸರ್ ಸಿದ್ಧಪಡಿಸುತ್ತಿದೆ. ನಮ್ಮ ಕಣ್ಣು ಸಾಮಾನ್ಯವಾಗಿ 500 ಮೆಗಾಪಿಕ್ಸೆಲ್ ಕ್ಯಾಮೆರಾದಷ್ಟುನಿಖರವಾಗಿ ಎದುರಿನ ದೃಶ್ಯಗಳನ್ನು ಗ್ರಹಿಸುತ್ತದೆ. ಹೀಗಾಗಿ ಸ್ಯಾಮ್ಸಂಗ್ ತಯಾರಿಸುತ್ತಿರುವ ಕ್ಯಾಮೆರಾ ನಮ್ಮ ಕಣ್ಣಿಗಿಂತ ಹೆಚ್ಚು ವಿವರಗಳನ್ನು ಗ್ರಹಿಸಲಿದೆ.
13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ
ಇಷ್ಟು ಅಗಾಧ ಪ್ರಮಾಣದ ಮೆಗಾಪಿಕ್ಸೆಲ್‌ನ ಕ್ಯಾಮೆರಾ ಸೆನ್ಸರ್ ತಯಾರಿಸಿದರೆ ಅದನ್ನು ಮೊಬೈಲ್ ಫೋನ್‌ನಲ್ಲಿ ಅಳವಡಿಸುವುದು ಕಷ್ಟ. ಕ್ಯಾಮೆರಾವೇ ಮೊಬೈಲ್ ಫೋನ್‌ನ ಇಡೀ ದೇಹವನ್ನು ಆವರಿಸುತ್ತದೆ. ಹೀಗಾಗಿ ಅದರ ಗಾತ್ರ ಕಡಿಮೆ ಮಾಡಿ ಸಣ್ಣದಾದ 600 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ತಯಾರಿಕೆಯಲ್ಲಿ ಸ್ಯಾಮ್ಸಂಗ್ ಕಂಪನಿಯ ವಿಜ್ಞಾನಿಗಳು ತೊಡಗಿದ್ದಾರೆಂದು ತಿಳಿದುಬಂದಿದೆ. ಕ್ಯಾಮೆರಾದಲ್ಲಿ ಮೆಗಾಪಿಕ್ಸೆಲ್ ಹೆಚ್ಚಾದಷ್ಟೂಚಿತ್ರದ ಗುಣಮಟ್ಟ ಹೆಚ್ಚುತ್ತದೆ.