ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರ ಸಂಖ್ಯೆ 350 ದಶಲಕ್ಷ!
ಭಾರತದಲ್ಲಿ 350 ದಶಲಕ್ಷಕ್ಕೂ ಅಧಿಕ ಫೀಚರ್ ಫೋನ್ ಬಳಕೆದಾರರಿದ್ದಾರೆ. ಇದೀಗ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲು ಜಿಯೋನಿ ಸೂಪರ್ ಸ್ಮಾರ್ಟ್‍ಫೋನ್ F8 ನಿಯೋ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಕೇವಲ 5499 ರೂಪಾಯಿ.
ಬೆಂಗಳೂರು(ನ.14) ಕೌಂಟರ್ ಪಾಯಿಂಟ್ ಮಾರ್ಕೆಟ್ ಮಾನಿಟರ್ ಸೇವೆ ಸಂಸ್ಥೆ ಇತ್ತೀಚೆಗೆ ನಡೆಸಿ ಅಧ್ಯಯನದ ಪ್ರಕಾರ ಭಾರತದಲ್ಲಿ 350 ದಶಲಕ್ಷಕ್ಕೂ ಅಧಿಕ ಫೀಚರ್ ಫೋನ್ ಬಳಕೆದಾರರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 2020 ರ 2 ನೇ ತ್ರೈಮಾಸಿಕದಲ್ಲಿ ದೇಶದ ಫೀಚರ್ ಫೋನ್ ಮಾರುಕಟ್ಟೆ ಶೇ.68 ರಷ್ಟು ಇಳಿಕೆ ಕಂಡಿದೆ. ಸ್ಮಾರ್ಟ್ ಭಾರತ್ನ ಬಲವಾದ ಆಸೆಯನ್ನು ಈ ಸಂಖ್ಯೆಗಳು ಪ್ರಾಮಾಣಿಕವಾಗಿ ಬೆಲೆಯ ಸ್ಮಾರ್ಟ್‍ಫೋನ್ ಅಪ್‍ಗ್ರೇಡ್ ಮಾಡುವ ಆಸೆಯನ್ನು ಎತ್ತಿ ತೋರಿಸುತ್ತವೆ. ಇದನ್ನು ಗಮನಿಸಿದರೆ ಕೈಗೆಟುಕುವ ಸಾಮಥ್ರ್ಯ ಮತ್ತು ವೈವಿಧ್ಯಮಯ ಆಯ್ಕೆಗಳಿಂದಾಗಿ ಅತ್ಯಂತ ಭರವಸೆಯ ಪ್ರವೇಶ ಮಟ್ಟದ ಸ್ಮಾರ್ಟ್‍ಫೋನ್ ವಿಭಾಗದಲ್ಲಿ ಇನ್ನೂ ಅವಕಾಶಗಳನ್ನು ಮುಕ್ತಗೊಳಿಸಿದೆ. ಭಾರತ್ನ ಡಿಜಿಟಲ್ ಡಿವೈಡ್‍ಗೆ ಸೇತುವೆಯಾಗಿ ಜನಸಾಮಾನ್ಯರಿಗೆ ಬಳಕೆದಾರರ ಅನುಭವವನ್ನು ಹೆಚ್ಚಿಸುವುದು ಮತ್ತು ಪ್ರವೇಶ ಮಟ್ಟದ ಸ್ಮಾರ್ಟ್‍ಫೋನ್ ವಿಭಾಗವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಜಿಯೋನಿ ಉಡಾನ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
ಉಡಾನ್‍ನಲ್ಲಿ ಜಿಯೋನಿ ಎಫ್8 ನಿಯೋವನ್ನು ವಿಶೇಷವಾಗಿ ಬಿಡುಗಡೆ ಮಾಡುವ ಮೂಲಕ ಕೈಗೆಟುಕುವ ದರದಲ್ಲಿ ಸೂಪರ್ ಸ್ಮಾರ್ಟ್‍ಫೋನ್‌ಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ. ಅಕ್ಟೋಬರ್ 18 ರಂದು ಉಡಾನ್‍ನಲ್ಲಿ ಬಿಡುಗಡೆ ಮಾಡಿದ ಕೇವಲ ಒಂದು ಗಂಟೆಯಲ್ಲಿ ಎಫ್8 ನಿಯೋಗೆ ಅತ್ಯದ್ಭುತವಾದ ಪ್ರತಿಕ್ರಿಯೆ ದೊರೆತಿದೆ. ಉಡಾನ್‍ನಲ್ಲಿ ಮುಂದಿನ ಸುತ್ತಿನ ಮಾರಾಟ ಸದ್ಯದಲ್ಲೇ ಲೈವ್ ಆಗಲಿದೆ. ಜಿಯೋನಿ ಉಡಾನ್ 1.5 ರಿಂದ 2.0 ಲಕ್ಷ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳ ಪ್ರಬಲ ವಿತರಣಾ ಜಾಲವನ್ನು ಹೊಂದಿದೆ. ಈ ಸೂಪರ್ ಸ್ಮಾರ್ಟ್ ಸಾಧನಗಳು ದೇಶದ ಮೂಲೆ ಮೂಲೆಗೂ ತಲುಪುವಂತೆ ಮಾಡುತ್ತಿದೆ. 2ಜಿಬಿ ರ್ಯಾಂ+32ಜಿಬಿ ಆರ್‍ಒಎಂ ಸಾಮಥ್ರ್ಯವನ್ನು ಹೊಂದಿದ ಸೂಪರ್ ಸ್ಮಾರ್ಟ್‍ಫೋನ್ ಎಫ್8 ನಿಯೋ ಕೇವಲ 5499 ರೂಪಾಯಿಗಳಿಗೆ ಲಭ್ಯವಿದೆ.
ಈ ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ ಬಗ್ಗೆ ಮಾತನಾಡಿದ ಭಾರತದಲ್ಲಿ ಜಿಯೋನಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜೈನ್ ಅವರು, ``ಪ್ರಾಮಾಣಿಕ ದರ ಮತ್ತು ಅತ್ಯುತ್ಕøಷ್ಠವಾದ ಸಾಮಥ್ರ್ಯದ ಸ್ಮಾರ್ಟ್‍ಫೋನ್‍ಗಳು ಪ್ರವೇಶ ಹಂತದಲ್ಲಿ ಇಲ್ಲದ ಕಾರಣ ಭಾರತ್ ಪ್ರವರ್ಧಮಾನಕ್ಕೆ ಹೋಗುವುದಕ್ಕೆ ಅಡ್ಡಿ ಉಂಟಾಗಿತ್ತು. ಉಡಾನ್‍ನೊಂದಿಗಿನ ನಮ್ಮ ಪಾಲುದಾರಿಕೆಯು ಕೈಗೆಟುಕುವ ಬೆಲೆ ಸೂಪರ್ ಸ್ಮಾರ್ಟ್‍ಫೋನ್ ಎಫ್8 ನಿಯೋವನ್ನು ಪರಿಚಯಿಸುವ ಮೂಲಕ ಭಾರತದ ಜಿಂದಗಿಯನ್ನು ಈ ಹಿಂದಿಗಿಂತಲೂ ಸ್ಮಾರ್ಟರ್ ಅನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದೆ. ಈ ಸಾಧನವು ಸೂಪರ್ ಗುಣಮಟ್ಟದ ಸ್ಮಾರ್ಟ್‍ಫೋನ್‍ಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವುದನ್ನು ಬಯಸುತ್ತಿದ್ದ ನಮ್ಮ ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ನಂಬಿಕೆ ನಮ್ಮದಾಗಿದೆ’’ ಎಂದು ತಿಳಿಸಿದರು.
ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಉಡಾನ್ನ ಸಹ-ಸಂಸ್ಥಾಪಕ ವೈಭವ್ ಗುಪ್ತಾ ಅವರು, ``ನಮ್ಮ ಉಡಾನ್ ಪ್ಲಾಟ್‍ಫಾರ್ಮ್‍ನಲ್ಲಿ ಸೂಪರ್ ಸ್ಮಾರ್ಟ್‍ಫೋನ್ ಎಫ್8 ನಿಯೋವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜಿಯೋನಿಯ ಜತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಉಡಾನ್ ಪ್ಲಾಟ್‍ಫಾರ್ಮ್ ಬ್ರ್ಯಾಂಡ್ಗಳ ಜತೆಗೆ ನಿಕಟ ಸಂಪರ್ಕವನ್ನು ಹೊಂದಿದೆ. ಈ ಮೂಲಕ ಹೊಸ ಮತ್ತು ಅತ್ಯುತ್ತಮ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಸೇವೆಗಳನ್ನು ರೀಟೇಲರ್‍ಗಳಿಗೆ ಒದಗಿಸಲು ಬದ್ಧವಾಗಿದೆ’’ ಎಂದು ತಿಳಿಸಿದರು.