Asianet Suvarna News Asianet Suvarna News

ಸ್ಯಾಮ್‌ಸಂಗ್‌ನಿಂದ ಅತ್ಯಾಕರ್ಷಕ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಫೋನ್ ಬಿಡುಗಡೆ!

ಭಾರತದಲ್ಲಿ ಸ್ಯಾಮ್‌ಸಂಗ್ 5ಜಿ ಫೀಚರ್ಸ್ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. Galaxy A54 5G ಮತ್ತು Galaxy A34 5G  ಫೋನ್ ವಿಶೇಷತೆ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ. 

Samsung launches Galaxy A54 5G A34 5G with Stunning Design and More features smartphone in India ckm
Author
First Published Mar 29, 2023, 9:51 PM IST

ಬೆಂಗಳೂರು(ಮಾ.29): ಭಾರತದಲ್ಲಿ ಸ್ಮಾರ್ಟ್‌ಪೋನ್ ಬೇಡಿಕೆ ಹೆಚ್ಚು. ಹೀಗಾಗಿ ಹಲವು ಕಂಪನಿಗಳು ಅತ್ಯಾಧುನಿಕ ಹಾಗೂ ಅತ್ಯಾಕರ್ಷಕ ಪೋನ್ ಬಿಡುಗಡೆ ಮಾಡುತ್ತಲೇ ಇದೆ. ಇದೀಗ ಸ್ಯಾಮ್‌ಸಂಗ್ ಹೊಚ್ಚ ಹೊಸ Galaxy A54 5G ಮತ್ತು Galaxy A34 5G ಬಿಡುಗಡೆ ಮಾಡಿದೆ. ದೀರ್ಘಬಾಳಿಕೆಯ ಬ್ಯಾಟರಿ ಲೈಫ್, ಫುಲ್ ಟೈಂ ಮನರಂಜನೆ ಫೀಚರ್ಸ್‌ನೊದಿಗೆ ನೂತನ ಪೋನ್ ಮಾರುಕಟ್ಟೆ ಪ್ರವೇಶಿಸಿದೆ.  Galaxy A54(8GB+128GB) ಬೆಲೆ  38,999 ರೂಪಾಯಿ. 8GB+256 GB ವೇರಿಯೆಂಟ್ ಫೋನ್ ಬೆಲೆ 40,999 ರೂಪಾಯಿ. Galaxy A34(8GB+128GB) ವೇರಿಯೆಂಟ್ ಬೆಲೆ 30,999 ರೂಪಾಯಿ ಹಾಗೂ 8GB+256 GB ವೇರಿಯೆಂಟ್ ಬೆಲೆ 32,999 ರೂಪಾಯಿ.

ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಗ್ಯಾಲಕ್ಸಿ ಎ ಸೀರೀಸ್ ಕಳೆದ ವರ್ಷ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ವೇಗವಾಗಿ ವೃದ್ಧಿಸುತ್ತಿರುವ(10 ಮಿಲಿಯನ್ ಯೂನಿಟ್‌ ಗೂ ಮೇಲ್ಪಟ್ಟು) ಸ್ಮಾರ್ಟ್ಫೋನ್ ಸೀರಿಸ್ ಫೋನ್ ಆಗಿದೆ.  ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಸ್ಯಾಮ್‌ಸಂಗ್ ಭಾರತದಲ್ಲಿ 2023ರಲ್ಲಿ(ಪ್ರಮಾಣದ ದೃಷ್ಟಿಯಿಂದ) ನಂಬರ್ ಒನ್ 5Gಸ್ಮಾರ್ಟ್ಫೋನ್ ಉತ್ಪಾದಕನಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸಿರೀಸ್ 24 ಗಂಟೆಯಲ್ಲಿ 1.4 ಲಕ್ಷ ಬುಕಿಂಗ್ ದಾಖಲೆ!

Galaxy A54 5G ಮತ್ತು Galaxy A34 5G ಫ್ಲೋಟಿಂಗ್ ಕ್ಯಾಮರಾ ಸೆಟಪ್ ಮತ್ತು ಮೆಟಲ್ ಕ್ಯಾಮರಾ ಡೆಕೊ ಹೊಂದಿದ್ದು ಅದು ಡಿವೈಸ್‌ನ ಬಣ್ಣಕ್ಕೆ ಹೊಂದಿಕೊಳ್ಳುತ್ತದೆ. Galaxy A54 5G ಗಾಜಿನ ಹಿಂಬದಿ ಹೊಂದಿದ್ದು ಅದು ಪ್ರೀಮಿಯಂ ಲುಕ್ ಮತ್ತು ಫೀಲ್ ನೀಡುತ್ತದೆ.

Galaxy A54 5G ಮತ್ತು Galaxy A34 5G ನೀರು ಹಾರುವುದು ಮತ್ತು ಸಿಡಿಯುವುದರಿಂದ ರಕ್ಷಣೆ ನೀಡುತ್ತಿದ್ದು ಐಪಿ67 ರೇಟಿಂಗ್ ಹೊಂದಿವೆ ಅಂದರೆ 30 ನಿಮಿಷಗಳವರೆಗೆ 1 ಮೀಟರ್‌ನಷ್ಟು ನೀರಿನಲ್ಲಿ ಮುಳುಗಿದರೂ ಕಾರ್ಯ ನಿರ್ವಹಿಸಬಲ್ಲದು. ಅವುಗಳನ್ನು ಧೂಳು ಮತ್ತು ಮಣ್ಣಿನಿಂದ ರಕ್ಷಣೆ ನೀಡುವಂತೆಯೂ ನಿರ್ಮಿಸಲಾಗಿದೆ. ಎರಡೂ ಡಿವೈಸ್‌ಗಳ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿದ್ದು ಅದು ಸುಧಾರಿತ ಸ್ಕಾçಚ್ ಮತ್ತು ಬೀಳುವಿಕೆಯಿಂದ ರಕ್ಷಣೆ ನೀಡುತ್ತದೆ. Galaxy A54 5G  ಕೂಡಾ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಬ್ಯಾಕ್ ಪ್ಯಾನಲ್‌ಗೆ ಹೊಂದಿದೆ.

Galaxy A54 5G 50ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಹೊಂದಿದ್ದು ಅದರೊಂದಿಗೆ 12ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ, Galaxy A34 5G 48ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಮತ್ತು 8ಎಂಪಿ ಅಲ್ಟ್ರಾ -ವೈಡ್ ಲೆನ್ಸ್ ಹೊಂದಿದೆ. ಎರಡೂ ಮಾಡೆಲ್‌ಗಳು 5ಎಂಪಿ ಮ್ಯಾಕ್ರೊ ಲೆನ್ಸ್ನಿಂದ ಸನ್ನದ್ಧವಾಗಿವೆ. ಈ ಡಿವೈಸ್‌ಗಳು ಫ್ಲಾಗ್‌ಶಿಪ್ `ನೈಟೊಗ್ರಫಿ’ ಫೀಚರ್ ಹೊಂದಿದ್ದು ಅವು ಗ್ರಾಹಕರಿಗೆ ಕಡಿಮೆ ಬೆಳಕಿನಲ್ಲಿ ತೀಕ್ಷ್ಣ ಮತ್ತು ಹೊಳಪಿನ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲು ನೆರವಾಗುತ್ತವೆ. ಈ ಫೋನ್‌ಗಳು ಆಟೊ ನೈಟ್ ಮೋಡ್‌ನೊಂದಿಗೆ ಬಂದಿದ್ದು ಅವು ಕಡಿಮೆ ಬೆಳಕಿನ ಪರಿಸ್ಥಿತಿಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತವೆ, ಇದರಿಂದ ಬಳಕೆದಾರರು ಕ್ಯಾಮರಾ ಮೋಡ್‌ ಗಳನ್ನು ಸ್ವಯಂ ಬದಲಾಯಿಸಬೇಕಿಲ್ಲ.

ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಆಕರ್ಷಕ ಆಫರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಲಭ್ಯ!

ಅದ್ಭುತ ಡಿಸ್‌ಪ್ಲೇ ಮತ್ತು ಮನರಂಜನೆ
Galaxy A54 5G ಮತ್ತು Galaxy A34 5G ಸೂಪರ್ ಅಮೋಲ್ಡ್ ತಂತ್ರಜ್ಞಾನದಿಂದ ಬಂದಿವೆ ಮತ್ತು ಕನಿಷ್ಠ ಬೆಝೆಲ್‌ಗಳನ್ನು ಹೊಂದಿವೆ. ಎರಡೂ ಡಿವೈಸ್‌ಗಳಲ್ಲಿನ 120ಹರ್ಟ್ಸ್ ರಿಫ್ರೆಶ್ ರೇಟ್ ಅತ್ಯಂತ ವೇಗದ ಚಲನೆಯಲ್ಲೂ ಅಸಾಧಾರಣ ಮೃದುವಾದ ದೃಶ್ಯದಿಂದ ದೃಶ್ಯದ ಪರಿವರ್ತನೆ ನೀಡುತ್ತದೆ. ಇದರೊಂದಿಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಬ್ಯಾಟರಿಯ ದಕ್ಷತೆ ಹೆಚ್ಚಿಸುತ್ತದೆ, ವಿಷನ್ ಬೂಸ್ಟರ್ ಬಿರು ಬಿಸಿಲಿನಲ್ಲೂ ದೃಗ್ಗೋಚರತೆ ಹೆಚ್ಚಿಸುತ್ತದೆ. ಐ ಕಂಫರ್ಟ್ ಶೀಲ್ಡ್ ಅನ್ನು ಕೂಡಾ ಕ್ವಿಕ್ ಪ್ಯಾನೆಲ್ ಮೂಲಕ ಪಡೆಯಬಹುದಾಗಿದ್ದು ಇದು ಬಳಕೆದಾರರ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.

5000ಎಂಎಎಚ್ ಬ್ಯಾಟರಿಯೊಂದಿಗೆ Galaxy A54 5G ಮತ್ತು Galaxy A34 5G ಒಂದು ಬಾರಿ ಚಾರ್ಜ್ ಮಾಡಿದರೆ 2 ದಿನಗಳಿಗೂ ಹೆಚ್ಚು ಬಳಸಬಹುದು.

Galaxy A54 5G ಮತ್ತು Galaxy A34 5G ಸ್ಯಾಮ್‌ಸಂಗ್‌ನ ರಕ್ಷಣಾನ ಗುಣಮಟ್ಟದ ಭದ್ರತಾ ಪ್ಲಾಟ್‌ಫಾರಂ ನಾಕ್ಸ್ ನೊಂದಿಗೆ  ಅತ್ಯುತ್ತಮ ಭದ್ರತೆ ನೀಡುತ್ತದೆ ಅದು ನಿಮ್ಮ ವೈಯಕ್ತಿಕ ದತ್ತಾಂಶವನ್ನು ರಿಯಲ್ ಟೈಮ್‌ನಲ್ಲಿ ರಕ್ಷಿಸುತ್ತದೆ. Galaxy A54 5G ಮತ್ತು Galaxy A34 5G ನಾಲ್ಕು ಒಎಸ್ ಅಪ್‌ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಡಿವೈಸ್‌ಗಳು ಅಪ್-ಟು-ಡೇಟ್ ಮತ್ತು ಸುರಕ್ಷಿತವಾಗಿರುವುದನ್ನು ದೃಢೀಕರಿಸುತ್ತದೆ.

 

ಬೆಂಗಳೂರಿನಲ್ಲಿ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ ಕಾರ್ಯಕ್ರಮ ಆರಂಭ!

ಅದ್ಭುತ ಅನುಭವಗಳು
Galaxy A54 5G ಮತ್ತು Galaxy A34 5G ಗ್ರಾಹಕರಿಗೆ ಅವರ ಜೀವನಗಳನ್ನು ಶ್ರೀಮಂತಗೊಳಿಸುವ ಅರ್ಥಪೂರ್ಣ ಅನುಭವಪೂರ್ವಕ ವಿಶೇಷತೆಗಳನ್ನು ಹೊಂದಿದೆ. ಇದರ ವಿಶಿಷ್ಟ ವಾಯ್ಸ್ ಫೋಕಸ್ ಬಳಕೆದಾರರಿಗೆ ಸ್ಪಷ್ಟ ಧ್ವನಿ/ವಿಡಿಯೋ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ ಅದರಲ್ಲಿ ನಿಮ್ಮ ಧ್ವನಿಯು ಹಿನ್ನೆಲೆಯ ಗದ್ದಲದಿಂದ ಪ್ರತ್ಯೇಕಗೊಳ್ಳುತ್ತದೆ. ಹೊಚ್ಚಹೊಸ ಸ್ಯಾಮ್‌ಸಂಗ್ ವ್ಯಾಲೆಟ್ ತನ್ನ ಗ್ರಾಹಕರಿಗೆ ತಡೆರಹಿತ ಕಾರ್ಡ್ ಗಳ ಟ್ಯಾಪ್ ಅಂಡ್ ಪೇ ಮತ್ತು ಯುಪಿಐ ಪಾವತಿಗಳ ಅನುಭವ ನೀಡುತ್ತದೆ. ಬಳಕೆದಾರರು ಅವರ ಡಿಜಿಟಲ್ ಐಡಿಗಳಾದ ಪಾನ್, ಡ್ರೈವಿಂಗ್ ಲೈಸೆನ್ಸ್, ವ್ಯಾಕ್ಸಿನ್ ಸರ್ಟಿಫಿಕೇಟ್‌ಗಳು ಮತ್ತಿತರವುಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ನಾಕ್ಸ್ ರಕ್ಷಣಾ ಮಟ್ಟದ ಭದ್ರತೆಯಿಂದ ರಕ್ಷಿಸಲ್ಪಟ್ಟಿದೆ.

ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ಪಾಸ್‌ನ ಕಾರ್ಯ ನಿರ್ವಹಣೆಯನ್ನು ಹೊಂದಿದ್ದು ಅದು ಸುರಕ್ಷಿತವಾಗಿ ಪಾಸ್‌ ವರ್ಡ್ ಗಳನ್ನು ಸಂಗ್ರಹಿಸಿಕೊಳ್ಳುತ್ತದೆ ಮತ್ತು ಬಳಕೆದಾರರಿಗೆ ಆ್ಯಪ್‌ಗಳು ಮತ್ತು ಸೇವೆಗಳಿಗೆ ಸುಲಭವಾಗಿ ಲಾಗಿನ್ ಆಗಲು ನೆರವಾಗುತ್ತದೆ. Galaxy A54 5G ಮತ್ತು Galaxy A34 5G ಅತ್ಯಾಧುನಿಕ ಒನ್ ಯುಐ 5.1 ಹೊಂದಿದ್ದು ಅದು ಸ್ಟಿಕರ್‌ಗಳು, ಎಮೊಜಿಗಳು ಮತ್ತು ಜಿಐಎಫ್ ಮೀಮ್‌ ಗಳ ಉನ್ನತೀಕರಿಸಿದ ಕಸ್ಟಮೈಸೇಷನ್ ನೀಡುತ್ತದೆ.

Follow Us:
Download App:
  • android
  • ios