ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸಿರೀಸ್ 24 ಗಂಟೆಯಲ್ಲಿ 1.4 ಲಕ್ಷ ಬುಕಿಂಗ್ ದಾಖಲೆ!
ಸ್ಯಾಮ್‌ಸಂಗ್ ಭಾರತದಲ್ಲಿ ಗ್ಯಾಲಕ್ಸಿ ಸಿರೀಸ್ ಫೋನ್ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಸ್23 ಸೀರಿಸ್ ಫೋನ್ ಕೇವಲ 24 ಗಂಟೆಯಲ್ಲಿ 1.4 ಲಕ್ಷ ಫೋನ್ ಬುಕಿಂಗ್ ಆಗಿವೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಜೊತೆಗೆ ಗ್ಯಾಲಕ್ಸಿ ಎಸ್23 ಫೋನ್ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಆಫರ್ ನೀಡಲಾಗಿದೆ.
ಬೆಂಗಳೂರು(ಫೆ.14): ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸಿರೀಸ್ ಫೋನ್ ಭಾರಿ ಸದ್ದು ಮಾಡುತ್ತಿದೆ. ಬುಕಿಂಗ್ ಆರಂಭಿಸಿದ ಕೇವಲ 24 ಗಂಟೆಯಲ್ಲಿ S23 ಸಿರೀಸ್ ಹೊಸ ದಾಖಲೆ ಬರೆದಿದೆ. ಒಂದು ದಿನದಲ್ಲಿ 1.4 ಲಕ್ಷ ಸ್ಯಾಮ್‌ಸಂಗ್ S23 ಸಿರೀಸ್ ಫೋನ್ ಬುಕ್ ಆಗಿವೆ.ಗ್ಯಾಲಕ್ಸಿ ಎಸ್23 ಹೊಸ ಅಲ್ಟ್ರಾ 200 ಎಂಪಿ ಸೆನ್ಸಾರ್ ನೊಂದಿಗೆ ಲಭ್ಯವಿದೆ. ಇದರಲ್ಲಿ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿಯುವ ಅಡಾಪ್ಟೀವ್ ಪಿಕ್ಸೆಲ್‌ಗಳಿವೆ. ಸೂಪರ್ ಕ್ವಾಡ್ ಪಿಕ್ಸೆಲ್ ಎಎಫ್ ನಿಂದ, ಹಿಂಭಾಗದ ಕ್ಯಾಮೆರಾ 50% ವೇಗವಾಗಿ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ. ಮುಂಭಾಗದ ಕ್ಯಾಮೆರಾ ಡ್ಯುಯಲ್ ಪಿಕ್ಸೆಲ್ ಆಟೋ-ಫೋಕಸ್ ತಂತ್ರಜ್ಞಾನದೊಂದಿಗೆ ನೈಟೋಗ್ರಫಿಯೊಂದಿಗೆ ಲಭ್ಯವಿದ್ದು, ಇದು ಕಡಿಮೆ ಬೆಳಕಿನ ಸ್ಥಿತಿಯಲ್ಲಿ ಶೂಟಿಂಗ್ ಮಾಡುತ್ತದೆ. ಡ್ಯುಯಲ್ ಪಿಕ್ಸೆಲ್ ಆಟೋ ಫೋಕಸ್ ತಂತ್ರಜ್ಞಾನ ಮುಂಭಾಗದ ಕ್ಯಾಮೆರಾದಿಂದ 60% ವೇಗವಾದ ಫೋಕಸ್ ಭರವಸೆ ನೀಡುತ್ತದೆ.
"ದಾಖಲೆಯ ಮುಂಗಡ ಬುಕ್ಕಿಂಗ್ ಗ್ಯಾಲಕ್ಸಿ ಎಸ್23 ಶ್ರೇಣಿಯ ಅತ್ಯದ್ಭುತ ಕ್ಯಾಮೆರಾ ಸಾಮರ್ಥ್ಯಗಳು, ಭವಿಷ್ಯ ಸನ್ನದ್ಧ ಮೊಬೈಲ್ ಗೇಮಿಂಗ್ ಅನುಭವ ಹಾಗೂ ಪರಿಸರ ಸ್ನೇಹಿ ವಸ್ತುಗಳು ಭಾರತೀಯ ಗ್ರಾಹಕರ ಕಾತರತೆಯನ್ನು ತೋರಿಸುತ್ತದೆ, ಹೊಸ ಗ್ಯಾಲಕ್ಸಿ ಎಸ್23 ಸರಣಿ ನೊಯ್ಡಾ ಫ್ಯಾಕ್ಟರಿಯಲ್ಲಿ ತಯಾರಾಗಿದ್ದು, ಇದು ಭಾರತದ ತಯಾರಿಕೆ ಮತ್ತು ಬೆಳವಣಿಗೆಯ ಕಥೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಮೊಬೈಲ್ ಬಿಸಿನೆಸ್ ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿದ್ದಾರೆ.
ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಆಕರ್ಷಕ ಆಫರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಲಭ್ಯ!
ಗ್ಯಾಲಕ್ಸಿ ಎಸ್23 ಸರಣಿಯಲ್ಲಿ ವೀಡಿಯೋಗಳು ಸೂಪರ್ ಹೆಚ್ ಡಿ ಆರ್, ವಿಸ್ತರಿತ ಶಬ್ದ ನಿಯಂತ್ರಣ ಆಲ್ಗರಿದಂ, ಮತ್ತು 2x ಅಗಲವಾದ ಓಐಎಸ್ ನೊಂದಿಗೆ ಹೆಚ್ಚು ಸಿನೆಮ್ಯಾಟಿಕ್ ಆಗಿರುವುದರಿಂದ, ರಾತ್ರಿಯ ಸಮಯದಲ್ಲಿ ಸುಗಮವಾದ ಹಾಗೂ ತೀಕ್ಷ್ಣವಾದ ಫಲಿತಾಂಶ ಪಡೆಯಬಹುದು.ಗ್ಯಾಲಕ್ಸಿ ಎಸ್23 ಸರಣಿ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲಾದ ಸ್ನ್ಯಾಪ್ ಡ್ರ್ಯಾಗನ್ 8 ಜೆನ್ 2 ಮೊಬೈಲ್ ಪ್ಲಾಟ್ ಫಾರ್ಮ್ ನೊಂದಿಗೆ ಗ್ಯಾಲಕ್ಸಿಗೆ ಲಭ್ಯವಿದ್ದು, ಇದು ವಿಶ್ವದ ಅತಿವೇಗವಾದ ಮೊಬೈಲ್ ಗ್ರಾಫಿಕ್ಸ್ ನೀಡಲು ನೆರವಾಗುತ್ತದೆ. ಇದು 2.7x ದೊಡ್ಡದಾದ ವೇಪರ್ ಕೂಲಿಂಗ್ ಚೇಂಬರ್ ನೊಂದಿಗೆ ಲಭ್ಯವಿದ್ದು, ಇದು ವಿಶ್ವಾಸಾರ್ಹ ಗೇಮಿಂಗ್ ಸಾಮರ್ಥ್ಯ ನೀಡುತ್ತದೆ. ಗ್ಯಾಲಕ್ಸಿ ಎಸ್23 ಸರಣಿ ವಾಸ್ತವ ಸಮಯದ ರೇ ಟ್ರೇಸಿಂಗ್ ನೊಂದಿಗೆ ಮೊಬೈಲ್ ಗೇಮಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಸ್ಯಾಮ್‌ಸಂಗ್‌ನಿಂದ 5G ಸರ್ವೀಸ್ ಗ್ಯಾಲಕ್ಸಿ A ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆ!
ಗ್ಯಾಲಕ್ಸಿ ಎಸ್23 ಅಲ್ಟ್ರಾ (12/1ಟಿಬಿ): 154999 ರೂಪಾಯಿ(ಫ್ಯಾಂಟಮ್ ಬ್ಲ್ಯಾಕ್, ಕ್ರೀಂ, ಗ್ರೀನ್)
ಗ್ಯಾಲಕ್ಸಿ ಎಸ್23 ಅಲ್ಟ್ರಾ (12/512 ಜಿಬಿ); 134999 ರೂಪಾಯಿ
ಗ್ಯಾಲಕ್ಸಿ ಎಸ್23 ಅಲ್ಟ್ರಾ (12/256 ಜಿಬಿ): 124999 ರೂಪಾಯಿ
ಗ್ಯಾಲಕ್ಸಿ ಎಸ್23+ (8/512 ಜಿಬಿ): 104999 ರೂಪಾಯಿ(ಫ್ಯಾಂಟಮ್ ಬ್ಲ್ಯಾಕ್, ಕ್ರೀಂ)
ಗ್ಯಾಲಕ್ಸಿ ಎಸ್23+ (8/256 ಜಿಬಿ): 94999 ರೂಪಾಯಿ
ಗ್ಯಾಲಕ್ಸಿ ಎಸ್23 (8/256 ಜಿಬಿ): 79999 ರೂಪಾಯಿ (ಫ್ಯಾಂಟಮ್ ಬ್ಲ್ಯಾಕ್, ಕ್ರೀಂ, ಗ್ರೀನ್, ಲ್ಯಾವೆಂಡರ್)
ಗ್ಯಾಲಕ್ಸಿ ಎಸ್23 (8/128 ಜಿಬಿ): 74999 ರೂಪಾಯಿ
ಮುಂಗಡ ಬುಕ್ಕಿಂಗ್ ಕೊಡುಗೆ
ಗ್ಯಾಲಕ್ಸಿ ಎಸ್23 ಅಲ್ಟ್ರಾ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ಗ್ಯಾಲಕ್ಸಿ ವಾಚ್4 ಎಲ್ ಟಿ ಇ ಕ್ಲಾಸಿಕ್ ಮತ್ತು ಗ್ಯಾಲಕ್ಸಿ ಬಡ್ಸ್2 ಅನ್ನು ಕೇವಲ ರೂ 4999 ಕ್ಕೆ ಪಡೆಯಬಹುದು. ಗ್ಯಾಲಕ್ಸಿ ಎಸ್23+ ಮುಂಗಡ ಬುಕ್ಕಿಂಗ್ ಮಾಡುವ ಗ್ತಾಹಕರು ಗ್ಯಾಲಕ್ಸಿ ವಾಚ್4 ಬಿಟಿ ಯನ್ನು ರೂ 4999 ರ ಬೆಲೆಯಲ್ಲಿ ಪಡೆಯಬಹುದು. ಗ್ಯಾಲಕ್ಸಿ ಎಸ್23 ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ರೂ 5000 ಮೌಲ್ಯದ ಸ್ಟೋರೇಜ್ ಅಪ್ ಗ್ರೇಡ್ ಪಡೆಯಬಹುದು. ಗ್ರಾಹಕರು ಗ್ಯಾಲಕ್ಸಿ ಎಸ್23 ಸರಣಿ ಖರೀದಿಯ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಪಡೆಯಬಹುದು.