ಸ್ಯಾಮ್‌ಸಂಗ್ ಹೊಚ್ಚ ಹೊಸ ಗ್ಯಾಲಕ್ಸಿ A56G, ಗ್ಯಾಲಕ್ಸಿ A36 5G ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಖರೀದಿಸುವವರಿಗೆ ಗಿಫ್ಟ್ ವೋಚರ್, ನೋ ಕಾಸ್ಟ್ ಇಎಂಐ ಸೇರಿದಂತೆ ಹಲವು ಆಫರ್ ಲಭ್ಯವಿದೆ.
ಬೆಂಗಳೂರು(ಮಾ.05): ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ ಸಂಗ್ ಇಂದು ಅದ್ಭುತ ಬುದ್ಧಿಮತ್ತೆಯುಳ್ಳ ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಗಳು ಅದ್ಭುತವಾದ ಸರ್ಚ್ ಮತ್ತು ವಿಶುವಲ್ ಅನುಭವವನ್ನು ಒದಗಿಸಲಿದೆ. ಹೊಸ ವಿನ್ಯಾಸ ಭಾಷೆಯನ್ನು ಹೊಂದಿರುವ ಈ ಹೊಸ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್ ಫೋನ್ ಗಳು ಹೆಚ್ಚು ಬಾಳಿಕೆ ಬರಲಿದೆ ಮತ್ತು ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಜೊತೆಗೆ ದೃಢವಾದ ಭದ್ರತೆ ಮತ್ತು ಪ್ರೈವೆಸಿ ಸುರಕ್ಷತೆ ಒದಗಿಸುತ್ತವೆ.
ಗ್ಯಾಲಕ್ಸಿ ಎ56 5ಜಿ ಬೆಲೆ
12ಜಿಬಿ 256ಜಿಬಿ ಬೆಲೆ 47,999 ರೂಪಾಯಿ
8ಜಿಬಿ 256ಜಿಬಿ ಬೆಲೆ 44,999 ರೂಪಾಯಿ
8ಜಿಬಿ 128ಜಿಬಿ 41,999 ರೂಪಾಯಿ
ಗ್ಯಾಲಕ್ಸಿ ಎ36 5ಜಿ
12ಜಿಬಿ 256ಜಿಬಿ 38,999 ರೂಪಾಯಿ
8ಜಿಬಿ 256ಜಿಬಿ 35,999 ರೂಪಾಯಿ
8ಜಿಬಿ 128ಜಿಬಿ 32,999 ರೂಪಾಯಿ
50MP+12MP+10MP ಕ್ಯಾಮೆರಾ ಸ್ಯಾಮಸ್ಂಗ್ ಫೋನ್ ಮೇಲೆ 50% ಡಿಸ್ಕೌಂಟ್
ಹೆಚ್ಚುವರಿ ಆಫರ್ ಗಳು
ಪ್ರೈಮರಿ ಸ್ಟೋರೇಜ್ ಉನ್ನತೀಕರಣ ಆಫರ್ ಜೊತೆಗೆ, ಗ್ರಾಹಕರು ಸ್ಯಾಮ್ ಸಂಗ್ ಕೇರ್+ ಒಂದು ವರ್ಷದ ಸ್ಕ್ರೀನ್ ಪ್ರೊಟೆಕ್ಷನ್ ಅನ್ನು ಕೇವಲ 999 ರೂಪಾಯಿಗೆ ಪಡೆಯಬಹುದು. ಇದು ಮೂಲ ಬೆಲೆಯಾದ 2,999 ರೂಪಾಯಿಗಿಂತ ಬಹಳ ಕಡಿಮೆಯಾಗಿದೆ. ಗ್ರಾಹಕರು ಗ್ಯಾಲಕ್ಸಿ ಎ56 5ಜಿ ಮೇಲೆ 18 ತಿಂಗಳವರೆಗೆ ಮತ್ತು ಗ್ಯಾಲಕ್ಸಿ ಎ36 5ಜಿ ಮೇಲೆ 16 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಪಡೆಯಬಹುದು. ಇದರ ಜೊತೆಗೆ, ಸ್ಯಾಮ್ ಸಂಗ್ ವ್ಯಾಲೆಟ್ ಬಳಸಿ ಆಯ್ದ ವಹಿವಾಟುಗಳಿಗೆ 400 ರೂಪಾಯಿವರೆಗಿನ ಅಮೆಜಾನ್ ವೋಚರ್ ಪಡೆಯಬಹುದು.
ಅದ್ಭುತ ಬುದ್ಧಿಮತ್ತೆ
ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಸ್ಮಾರ್ಟ್ ಫೋನ್ ಗಳು ಅದ್ಭುತ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಹೊಂದಿದೆ. ಎಐ ಟೆಕ್ ಹೊಂದಿರುವ ಸಮಗ್ರ ಮೊಬೈಲ್ ಇದಾಗಿದೆ. ಎಐ ಸೂಟ್ , ಗ್ಯಾಲಕ್ಸಿ ಅಭಿಮಾನಿಗಳ ಪ್ರೀತಿಯ ಎಐ ಫೀಚರ್ ಗಳು ಸೇರಿದಂತೆ ಅತ್ಯಾಧುನಿಕ ಎಐ ಫೀಚರ್ ಗಳನ್ನು ಒದಗಿಸುತ್ತದೆ. ಗೂಗಲ್ ನ ಸರ್ಕಲ್ ಟು ಸರ್ಚ್ ಫೋನ್ ಫೀಚರ್ ಸರ್ಚ್ ಮಾಡಲು ಬಹಳ ಸುಲಭ ಮಾರ್ಗವನ್ನು ಒದಗಿಸುತ್ತದೆ. ಸರ್ಕಲ್ ಟು ಸರ್ಚ್ ನ ಹೊಸ ಅಪ್ ಡೇಟ್ ಗಳಿಂದ ಬಳಕೆದಾರರು ಆಪ್ ಗಳನ್ನು ಬದಲಾಯಿಸದೆಯೇ ಅವರು ಕೇಳುತ್ತಿರವ ಹಾಡುಗಳನ್ನು ತಕ್ಷಣವೇ ಸರ್ಚ್ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೇಳುವ ಹಾಡಾಗಲೀ ಅಥವಾ ಸಮೀಪದ ಯಾವುದೋ ಸ್ಪೀಕರ್ ಗಳಿಂದ ಬರುವ ಸಂಗೀತವಾಗಲಿ, ನ್ಯಾವಿಗೇಷನ್ ಬಾರ್ ಅನ್ನು ದೀರ್ಘಕಾಲ ಒತ್ತಿ ಹಿಡಿದುಕೊಂಡು ಸರ್ಕಲ್ ಟು ಸರ್ಚ್ ಫೀಚರ್ ಅನ್ನು ಸಕ್ರಿಯಗೊಳಿಸಿ, ನಂತರ ಮ್ಯೂಸಿಕ್ ಬಟನ್ ಒತ್ತುವ ಮೂಲಕ ಹಾಡಿನ ಹೆಸರು ಮತ್ತು ಕಲಾವಿದರ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಅದ್ಭುತ ಬುದ್ಧಿಮತ್ತೆ ವಿಭಾಗದಲ್ಲಿ ಆಟೋ ಟ್ರಿಮ್, ಬೆಸ್ಟ್ ಫೇಸ್, ಇನ್ ಸ್ಟಂಟ್ ಸ್ಲೋ-ಮೋ ಮುಂತಾದ ವಿಶುವಲ್ ಎಡಿಟಿಂಗ್ ಫೀಚರ್ ಗಳ ಶ್ರೇಣಿಯನ್ನು ಸಹ ನೀಡಲಾಗಿದೆ. ಆಟೋ-ಟ್ರಿಮ್ ಮತ್ತು ಬೆಸ್ಟ್ ಫೇಸ್ ಎಂಬುದು ಉನ್ನತ ಮಟ್ಟದ ಎಐ ವೈಶಿಷ್ಟ್ಯಗಳಾಗಿದ್ದು, ಇವೀಗ ಗ್ಯಾಲಕ್ಸಿ ಎ56 5ಜಿಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೊಸ ಸ್ಮಾರ್ಟ್ ಫೋನ್ ಗಳು ಆಬ್ಜೆಕ್ಟ್ ಎರೇಸರ್ ಫೀಚರ್ ಅನ್ನು ಹೊಂದಿದ್ದು, ಈ ಫೀಚರ್ ಬಳಕೆದಾರರಿಗೆ ಫೋಟೋಗಳ ಅನಗತ್ಯ ಭಾಗಗಳನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಫಿಲ್ಟರ್ ಗಳು ಈಗಾಗಲೇ ಇರುವ ಫೋಟೋಗಳ ಬಣ್ಣಗಳು ಮತ್ತು ಸ್ಟೈಲ್ ಗಳನ್ನು ಬಳಸಿಕೊಂಡು ಕಸ್ಟಮ್ ಫಿಲ್ಟರ್ ಕ್ರಿಯೇಷನ್ ಆಯ್ಕೆ ಒದಗಿಸುತ್ತವೆ ಮತ್ತು ಆ ಮೂಲಕ ಮನಸ್ಥಿತಿ ಮತ್ತು ಅಭಿರುಚಿಗೆ ಅನುಗುಣವಾಗಿ ವಿಶಿಷ್ಟ ಮತ್ತು ವೈಯಕ್ತೀಕರಿಸಿದ ಸ್ಪರ್ಶವನ್ನು ಫೋಟೋಗಳಿಗೆ ನೀಡಬಹುದಾಗಿದೆ.
ಆಕರ್ಷಕ ವಿನ್ಯಾಸ
ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಫೋನ್ ಗಳು ಸಂಪೂರ್ಣ ಹೊಸ ವಿನ್ಯಾಸ ಭಾಷೆಯಲ್ಲಿ ಲಭ್ಯವಿದ್ದು, ಇದು ಈಗ ಗ್ಯಾಲಕ್ಸಿ ಎ ಸರಣಿಗೆ ಹೊಸ ಮಾನದಂಡ ಹಾಕಿಕೊಟ್ಟಿದೆ. ಈ ಹೊಸ ವಿನ್ಯಾಸ ಭಾಷೆ ಲೀನಿಯರ್ ಫ್ಲೋಟಿಂಗ್ ಕ್ಯಾಮೆರಾ ಮಾಡ್ಯೂಲ್ ಮತ್ತು ‘ರೇಡಿಯನ್ಸ್’ ಎಂಬ ಆಕರ್ಷಕ ಬಣ್ಣದ ಥೀಮ್ ಅನ್ನು ಒಳಗೊಂಡಿದೆ. ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಕರ್ಷಕ ಸ್ಲಿಮ್ ಡಿವೈಸ್ ಗಳಾಗಿದ್ದು, ಕೇವಲ 7.4 ಎಂಎಂ ದಪ್ಪವನ್ನು ಹೊಂದಿವೆ.
ಆಕರ್ಷಕ ಡಿಸ್ ಪ್ಲೇ
ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಉತ್ತಮ-ಗುಣಮಟ್ಟದ, ಆಕರ್ಷಕ ವೀಕ್ಷಣಾ ಅನುಭವ ಒದಗಿಸುವ ದೊಡ್ಡ ಡಿಸ್ ಪ್ಲೇಯನ್ನು ಹೊಂದಿವೆ. ಎರಡೂ ಮೊಬೈಲ್ ಗಳು 6.7-ಇಂಚಿನ ಎಫ್ಎಚ್ ಡಿ+ ಸೂಪರ್ ಅಮೋಲ್ಡ್ ಡಿಸ್ ಪ್ಲೇಯನ್ನು ಹೊಂದಿದ್ದು, 1200 ನಿಟ್ ಗಳವರೆಗಿನ ಬ್ರೈಟ್ ನೆಸ್ ಅನ್ನು ಹೊಂದಿದೆ. ಹೊಸ ಸ್ಟಿರಿಯೋ ಅತ್ಯುತ್ತಮ ಆಡಿಯೋ ಹೊಂದಿದೆ.
ಆಕರ್ಷಕ ಕ್ಯಾಮೆರಾ
ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಸ್ಮಾರ್ಟ್ ಫೋನ್ ಗಳು ಶಕ್ತಿಶಾಲಿ ಟ್ರಿಪಲ್- ಕ್ಯಾಮೆರಾ ಸಿಸ್ಟಮ್ ಹೊಂದಿದ್ದು, ಇದರಲ್ಲಿ 50 ಎಂಪಿ ಮುಖ್ಯ ಲೆನ್ಸ್ ಇದೆ. ಗ್ಯಾಲಕ್ಸಿ ಎ56 5ಜಿ ಮತ್ತು ಗ್ಯಾಲಕ್ಸಿ ಎ36 5ಜಿ ಮೊಬೈಲ್ ಗಳು ಉತ್ತಮ ಮತ್ತು ಸ್ಪಷ್ಟ ಸೆಲ್ಫಿಗಳನ್ನು ಒದಗಿಸುವ 10 ಬಿಟ್ ಹೆಚ್ ಡಿ ಆರ್ ಫ್ರಂಟ್ ಲೆನ್ಸ್ ರೆಕಾರ್ಡಿಂಗ್ ಸೌಲಭ್ಯ ಹೊಂದಿವೆ. ಗ್ಯಾಲಕ್ಸಿ ಎ56 5ಜಿ 12 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ನೊಂದಿಗೆ ಬರುತ್ತದೆ ಮತ್ತು ಅತ್ಯುತ್ತಮ ನೈಟೋಗ್ರಫಿ ಸೌಲಭ್ಯ ಒದಗಿಸುತ್ತದೆ. ಲೋ ನಾಯ್ಸ್ ಮೋಡ್ ಮೂಲಕ 12 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿಯೂ ಕಡಿಮೆ ಬೆಳಕಿನ ಸಂದರ್ಭಗಳಲ್ಲಿ ಅತ್ಯುತ್ತಮ ಫೋಟೋ ತೆಗೆಯಬಹುದಾಗಿದೆ ಮತ್ತು ಹೆಚ್ಚುವರಿ ವೈಡ್ ಕ್ಯಾಮೆರಾ ಬೆಂಬಲ ಕೂಡ ಇದೆ.
