ಫ್ಲಿಪ್‌ಕಾರ್ಟ್ ಫೆಬ್ರವರಿ ತಿಂಗಳ ಕೊನೆಯಲ್ಲಿ ಒಂದು ಅದ್ಭುತ ಆಫರ್ ನೀಡುತ್ತಿದೆ. ಇದರ ಅಡಿಯಲ್ಲಿ Samsung Galaxy S23 5G ಮೊಬೈಲ್ 50% ರಿಯಾಯಿತಿಯಲ್ಲಿ ಲಭ್ಯವಿದೆ.
ಫ್ಲಿಪ್‌ಕಾರ್ಟ್ ಇತ್ತೀಚೆಗೆ Flipkart Month End Mobile Festival Sale ಅನ್ನು ಪ್ರಾರಂಭಿಸಿದೆ, ಇದರಲ್ಲಿ ಫೆಬ್ರವರಿ 28 ರವರೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G ಮೊಬೈಲ್ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
ಈ ಸೇಲ್ ಅಡಿಯಲ್ಲಿ Samsung Galaxy S23 5G ಮೊಬೈಲ್ ಫೋನ್ ಅನ್ನು ಕೇವಲ 39,999 ರೂಪಾಯಿಗೆ ಖರೀದಿಸಬಹುದಾಗಿದೆ.
Samsung Galaxy S23 5G ಮೊಬೈಲ್ ಫೋನ್ ಬಿಡುಗಡೆಯಾದಾಗ ಇದರ ಆರಂಭಿಕ ಬೆಲೆ 74,999 ರೂಪಾಯಿ ಇತ್ತು. ಅಂದರೆ ಇದರ ಮೇಲೆ ಸುಮಾರು 50% ವರೆಗೆ ರಿಯಾಯಿತಿ ಸಿಗುತ್ತಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G ಯಲ್ಲಿ 6.1 ಇಂಚಿನ ಫುಲ್ HD+ ಡಿಸ್ಪ್ಲೇ ಇದೆ. ಸ್ಕ್ರೀನ್ ಪ್ರೊಟೆಕ್ಷನ್ ಗಾಗಿ ಇದರಲ್ಲಿ ಕಾರ್ನಿಂಗ್ ಗೊರಿಲ್ಲಾ ವಿಕ್ಟಸ್ 2 ಅನ್ನು ಅಳವಡಿಸಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G ಮೊಬೈಲ್‌ನಲ್ಲಿ 8 ಜಿಬಿ ರ್ಯಾಮ್‌ನೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನರೇಶನ್ 2 ಪ್ರೊಸೆಸರ್ ಬರುತ್ತದೆ.
Samsung Galaxy S23 5G ಮೊಬೈಲ್ ಮೂರು ಕ್ಯಾಮೆರಾಗಳೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಇದೆ. ಇದರ ಜೊತೆಗೆ 2ನೇ ಕ್ಯಾಮೆರಾ 10 ಮತ್ತು 3ನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ನಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G ಮೊಬೈಲ್‌ನ 3900 mAh ಲೀಥಿಯಂ ಆಯಾನ್ ಬ್ಯಾಟರಿ ಇದೆ. ಈ ಫೋನ್ 4 ಬಣ್ಣಗಳಲ್ಲಿ ಲಭ್ಯವಿದೆ, ಕ್ರೀಮ್, ಗ್ರೀನ್, ಲ್ಯಾವೆಂಡರ್ ಮತ್ತು ಫ್ಯಾಂಟಮ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.