ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗೆಲಾಕ್ಸಿ S25 ಸರಣಿಯು ಜನವರಿ 22 ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಆನ್‌ಲೈನ್‌ನಲ್ಲಿ ಬೆಲೆಗಳು ಸೋರಿಕೆಯಾಗಿವೆ. S25, S25+ ಮತ್ತು S25 ಅಲ್ಟ್ರಾ ಮಾದರಿಗಳ ಬೆಲೆಗಳು ಕ್ರಮವಾಗಿ ₹84,999, ₹1,04,999 ಮತ್ತು ₹1,34,999 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

ಬೆಂಗಳೂರು (ಜ.22): ಬಹುನಿರೀಕ್ಷಿತ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 25 ಸಿರೀಸ್‌ ಮೊಬೈಲ್‌ಗಳು ನಾಳೆ ಅಂದರೆ ಜನವರಿ 22 ರಂದು ಭಾರತದಲ್ಲಿ ಅನಾವರಣವಾಗಲಿದೆ. ಸ್ಯಾಮ್‌ಸಂಗ್‌ ಅದ್ದೂರಿ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಈ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಈ ಮೊಬೈಲ್‌ನ ಬೆಲೆಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿವೆ. ಸ್ಯಾಮ್‌ಸಂಗ್‌ ಮೊಬೈಲ್‌ ಫೋನ್‌ನ ಅಭಿಮಾನಿಗಳು ಗೆಲಾಕ್ಸಿ ಎಸ್‌ 25, ಗೆಲಾಕ್ಸಿ ಎಸ್‌ 25+ ಹಾಗೂ ಗೆಲಾಕ್ಸಿ ಎಸ್‌ 25 ಅಲ್ಟ್ರಾ ಫೋನ್‌ನ ಅನಾವರಣದ ಬಗ್ಗೆ ಗಮನ ನೀಡಿರುವಾಗಸ ಈ ಫೋನ್‌ನ ಬೆಲೆಗಳುಸ ಸೋಶಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಎಕ್ಸ್‌ ಪೇಜ್‌ ಮ್ಯಾಕ್‌ಸೋಲ್‌ ಟೆಕ್‌ ಪ್ರಕಾರ, ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 25 ಸಿರೀಸ್‌ಮ 12ಜಿಬಿ RAM ಹಾಗೂ 256 ಜಿಬಿ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ ಭಾರತದಲ್ಲಿ 84,999 ರೂಪಾಯಿಗೆ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದೇ ಸಿರೀಸ್‌ನ 12ಜಿಬಿ RAM + 512 ಜಿಬಿ ಮಾಡೆಲ್‌ಗೆ 94,999 ರೂಪಾಯಿ ದರ ಇರಬಹುದು ಎನ್ನಲಾಗಿದೆ. ಇನ್ನು ಗೆಲಾಕ್ಸಿ ಎಸ್ 25+ ಸಿರೀಸ್‌ ಫೋನ್‌ 12 ಜಿಬಿ RAM + 256 ಜಿಬಿ ಸ್ಟೋರೇಜ್ ಮಾದರಿಗೆ 1,04,999 ಆರಂಭಿಕ ಬೆಲೆಯನ್ನು ಹೊಂದುವ ನಿರೀಕ್ಷೆಯಿದ್ದರೆ, 512 ಜಿಬಿ ರೂಪಾಂತರದ ಬೆಲೆ ₹ 1,14,999 ಆಗಿರಬಹುದು ಎನ್ನಲಾಗಿದೆ.

ಇನ್ನು ಇಡೀ ಸೀರೀಟ್‌ನ ಟಾಪ್‌ ವೇರಿಯಂಟ್‌ ಆಗಿರುವ ಸ್ಯಾಮ್‌ಸಂಗ್‌ ಗೆಲಾಕ್ಸಿ S25 ಅಲ್ಟ್ರಾದ 12GB RAM + 256GB ಸ್ಟೋರೇಜ್ ಮೊಬೈಲ್‌ನ ಬೆಲೆಗೆ 1, 34,999 ರೂಪಾಯಿ ಆಗಿರಲಿದ್ದರೆ, 16GB RAM + 512GB ವೇರಿಯಂಟ್‌ ಮೊಬೈಲ್‌ಗೆ ₹1,44,999 ರೂಪಾಯಿ ಇರಲಿದೆ. ಇನ್ನು 1 ಟಿಬಿ ಸ್ಟೋರೇಜ್‌ ವೇರಿಯಂಟ್‌ನ ಮೊಬೈಲ್‌ಗೆ 1,64,999 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ ಎಂದು ವರದಿಯಾಗಿದೆ.

ಗೆಲಾಕ್ಸಿ ಎಸ್‌24 ಸಿರೀಸ್‌ ಜೊತೆ ಬೆಲೆ ಹೋಲಿಕೆ
ಹಿಂದಿನ Galaxy S24 ಸಿರೀಸ್‌ ಮೊಬೈಲ್‌ಗಳು ಈ ಕೆಳಗಿನ ಬೆಲೆಯಲ್ಲಿ ಬಂದಿದ್ದವು
ಗೆಲಾಕ್ಸಿ S24:
₹79,999 ರಿಂದ ಪ್ರಾರಂಭ (8GB RAM + 256GB ಸ್ಟೋರೇಜ್‌).
ಗೆಲಾಕ್ಸಿ S24+: ₹99,999 ರಿಂದ ಪ್ರಾರಂಭ (12GB RAM + 256GB ಸ್ಟೋರೇಜ್‌).
ಗೆಲಾಕ್ಸಿ S24 ಅಲ್ಟ್ರಾ: ₹1,29,999 ರಿಂದ ಪ್ರಾರಂಭ (12GB RAM + 256GB ಸ್ಟೋರೇಜ್‌).

ಪವರ್‌ಫುಲ್ ಫೀಚರ್ಸ್ ಜೊತೆ ಬರ್ತಿದೆ Samsung ಹೊಸ ಸಿರೀಸ್; ಹೆಚ್ಚಾಯ್ತು OnePlusಗೆ ಟೆನ್ಷನ್

ಇದಕ್ಕೂ ಮುನ್ನ ಗೆಲಾಕ್ಸಿS25 ಲೈನ್‌ಅಪ್‌ಗೆ ಗಮನಾರ್ಹ ಬೆಲೆ ಏರಿಕೆಯ ಸುಳಿವು ನೀಡಿದ್ದರೂ, ಸೋರಿಕೆಯಾದ ಈ ಅಂಕಿಅಂಶಗಳು ಬೆಲೆ ಕಳೆದ ವರ್ಷದ ಮಾದರಿಗಳಿಗೆ ಹತ್ತಿರದಲ್ಲಿಯೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆಯ ಈವೆಂಟ್‌ನಲ್ಲಿ ಅಧಿಕೃತ ದೃಢೀಕರಣ ಬರಲಿದ್ದು, ಈ ಸಂದರ್ಭದಲ್ಲಿ ಸ್ಯಾಮ್‌ಸಂಗ್ ಪ್ರಮುಖ ವೈಶಿಷ್ಟ್ಯಗಳು ಮತ್ತು ಅಪ್‌ಗ್ರೇಡ್‌ಗಳನ್ನು ಸಹ ಹೈಲೈಟ್ ಮಾಡುತ್ತದೆ.

Galaxy S25 Ultra ಸ್ಮಾರ್ಟ್‌ಫೋನ್‌ ಫೋಟೋ ಲೀಕ್‌ ಮಾಡಿದ ಉದ್ಯೋಗಿಗಳನ್ನು ವಜಾ ಮಾಡಿದ ಸ್ಯಾಮ್‌ಸಂಗ್‌!

Scroll to load tweet…