Galaxy S25 Ultra ಸ್ಮಾರ್ಟ್‌ಫೋನ್‌ ಫೋಟೋ ಲೀಕ್‌ ಮಾಡಿದ ಉದ್ಯೋಗಿಗಳನ್ನು ವಜಾ ಮಾಡಿದ ಸ್ಯಾಮ್‌ಸಂಗ್‌!

ಆನ್‌ಲೈನ್‌ನಲ್ಲಿ ಫೋಟೋ ಸೋರಿಕೆಯಾಗಿದ್ದು, ಗ್ಯಾಜೆಟ್‌ ಉತ್ಸಾಹಿಗಳಿಗೆ ಫ್ಲ್ಯಾಗ್‌ಶಿಪ್‌ ಫೋನ್‌ನ ನೋಟವನ್ನು ನೀಡಿದೆ. ಈ ಫೋನ್‌ಅನ್ನು 2025ರ ಜನವರಿ 22 ರಂದು ಸ್ಯಾಮ್‌ಸಂಗ್‌ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ.

Galaxy S25 Ultra images Leaked ahead of launch Samsung fires employees san

ಬೆಂಗಳೂರು (ಡಿ.23): ವಿಶ್ವದ ಪ್ರಖ್ಯಾತ ಸ್ಮಾರ್ಟ್‌ಪೋನ್‌ ಕಂಪನಿ ಸ್ಯಾಮ್‌ಸಂಗ್‌ ತನ್ನ ಪ್ರಮುಖ ಫ್ಲ್ಯಾಗ್‌ಶಿಪ್‌ ಫೋನ್‌ Galaxy S25 ಸರಣಿಯ ಅಲ್ಟ್ರಾ ಫೋನ್‌ಅನ್ನು ಅನಾವರಣ ಮಾಡಲು ಸಿದ್ದತೆ ನಡೆಸಿದೆ. ಆದರೆ, ಕಂಪನಿಯ ಉದ್ಯೋಗಿಗಳು ಮಾಡಿದ ಸಣ್ಣ ತಪ್ಪು ಹೆಜ್ಜೆಯಿಂದ ಪ್ರಮುಖ ಫೋನ್‌ ಅಧಿಕರತವಾಗಿ ಅನಾವರಣಗೊಳ್ಳುವ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಜಗತ್ತಿಗೆ ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನ್‌ನ ಸಂಪೂರ್ಣ ಲುಕ್‌ಅನ್ನು ನೀಡಿದೆ. ಆದರೆ, ಉದ್ಯೋಗಿಗಳ ಈ ಪ್ರಮಾದವನ್ನು ಸ್ಯಾಮ್‌ಸಂಗ್‌ ಸಹಿಸಿಕೊಂಡಿಲ್ಲ. ಫೋನ್‌ ಅರೆನಾ ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ, ಫೋನ್‌ನ ಮೇಲ್ವಿಚಾರಣೆಗೆ ಕಾರಣವಾಗಿದ್ದ ಎಲ್ಲಾ ಉದ್ಯೋಗಿಗಳನ್ನು ಕಂಪನಿ ಮುಲಾಜಿಲ್ಲದೆ ವಜಾ ಮಾಡಿದೆ.ಆನ್‌ಲೈನ್‌ನಲ್ಲಿ ಫೋಟೋ ಸೋರಿಕೆಯಾಗಿದ್ದು, ಗ್ಯಾಜೆಟ್‌ ಉತ್ಸಾಹಿಗಳಿಗೆ ಫ್ಲ್ಯಾಗ್‌ಶಿಪ್‌ ಫೋನ್‌ನ ನೋಟವನ್ನು ನೀಡಿದೆ. ಈ ಫೋನ್‌ಅನ್ನು 2025ರ ಜನವರಿ 22 ರಂದು ಸ್ಯಾಮ್‌ಸಂಗ್‌ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ.

Galaxy S25 ಅಲ್ಟ್ರಾ ಲಾಂಚ್ ವಿವರಗಳು ಸೋರಿಕೆಯಾಗಿದ್ದು ಹೇಗೆ?: ಎಕ್ಸ್‌ ಯೂಸರ್‌  @Jukanlosreve ಇತ್ತೀಚೆಗೆ ತಮ್ಮ ಅಕೌಂಟ್‌ನಲ್ಲಿ Galaxy S25+ ಸರಣಿಯ ಎಕ್ಸ್‌ಕ್ಲೂಸಿವ್‌ ಆದ ಫೋಟೋಗಳನ್ನು ಅವರು ಶೇರ್‌ ಮಾಡಿದ್ದರು. ಈ ಫೋಟೋಗಳು ಮೇಲ್ವಿಚಾರಣೆ ಮಾಡುವ ವಿಸಿಬಲ್‌ ಡಿವೈಸ್‌ ಐಡೆಂಟಿಫಿಕೇಶನ್‌ ನಂಬರ್‌ ಕೂಡ ಒಳಗೊಂಡಿತ್ತು. ಅದರೊಂದಿಗೆ ಈ ಟೀಮ್‌ನಲ್ಲಿದ್ದ ಕಂಪನಿಯ ಉದ್ಯೋಗಿಗಳೇ ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಅನ್ನೋದನ್ನ ಪತ್ತೆಹಚ್ಚಲು ಸ್ಯಾಮ್‌ಸಂಗ್‌ ಕಂಪನಿಗೆ ಸುಲಭವಾಗಿತ್ತು. ಅದರೊಂದಿಗೆ ಮೇಲ್ವಿಚಾರಣೆ ಟೀಮ್‌ನಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನೂ ಕಂಪನಿ ವಜಾ ಮಾಡುವ ನಿರ್ಧಾರ ಮಾಡಿದೆ.

ಟೆಕ್ ಜಗತ್ತಿಗೆ ಸೋರಿಕೆಗಳು ಹೊಸದಲ್ಲ, ಆದರೆ ಅಧಿಕೃತ ಪ್ರಾಡಕ್ಟ್‌ ಲಾಂಚ್‌ಗೆ ಬಝ್ ಸೃಷ್ಟಿಸಲು ಹೆಚ್ಚು ಹೂಡಿಕೆ ಮಾಡುವ Samsung ನಂತಹ ಕಂಪನಿಗಳಿಗೆ ಅವು ದುಃಸ್ವಪ್ನವಾಗಿದೆ. ಸೋರಿಕೆಗಳು ಉತ್ಸಾಹವನ್ನು ಉಂಟುಮಾಡಬಹುದಾದರೂ, ಅನ್ಪ್ಯಾಕ್ಡ್ ಇವೆಂಟ್‌ಗಳಿಗೆ ಎಚ್ಚರಿಕೆಯಿಂದ ಯೋಜಿಸಲಾದ ಅಚ್ಚರಿಯ ಅಂಶವನ್ನು ಅವು ಹಾಳುಮಾಡುತ್ತವೆ.
ಅಚ್ಚರಿ ಏನೆಂದರೆ, ಜನವರಿಯ ಈವೆಂಟ್ ಅನ್ನು ದೃಢೀಕರಿಸುವ ಪ್ರಚಾರದ ಪೋಸ್ಟರ್ ಜೊತೆಗೆ ಹೆಸರಾಂತ ಲೀಕರ್ ಇವಾನ್ ಬ್ಲಾಸ್ ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಮತ್ತು ಎಸ್ 25+ ನ ಹೆಚ್ಚುವರಿ ಚಿತ್ರಗಳನ್ನು ಪೋಸ್ಟ್ ಮಾಡುವ ಒಂದು ದಿನದ ಮೊದಲು ಫೋಟ್‌ ಲೀಕ್‌ ವಿಚಾರವಾಗಿ ಸ್ಯಾಮ್‌ಸಂಗ್‌ನ ಕ್ರಮದ ಸುದ್ದಿ ಬಂದಿದೆ. ಅಲ್ಟ್ರಾ, S25+ ಮತ್ತು ಸ್ಟ್ಯಾಂಡರ್ಡ್ S25 ಸೇರಿದಂತೆ S25 ಸರಣಿಯು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ನಿರೀಕ್ಷೆಯಿದೆ.

Shyam Benegal Dies: ಅನಂತ್‌ನಾಗ್‌ರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದ ನಿರ್ದೇಶಕ ಶ್ಯಾಮ್‌ ಬೆನಗಲ್‌ ಇನ್ನಿಲ್ಲ!

ಇನ್ನೂ ಕೆಲವರಿಗೆ ಅತ್ಯಂತ ನಿರೀಕ್ಷೆಯಲ್ಲಿರುವ ಸಾಧನಗಳ ಇಮೇಜ್‌ಗಳನ್ನು ಲೀಕ್‌ ಮಾಡುವುದು ಪ್ರಾಡಕ್ಟ್‌ನ ಕುರಿತಾಗಿ ಕುತಹಲವನ್ನು ಇನ್ನಷ್ಟು ಏರಿಕೆ ಮಾಡುತ್ತದೆ. ಆದರೆ, ಈ ಘಟನೆಯಲ್ಲಿ ಉದ್ಯೋಗಿಗಳ ಒಂದು ಸಣ್ಣ ತಪ್ಪು ಹೆಜ್ಜೆ ಅವರ ಉದ್ಯೋಗಕ್ಕೆ ಕಂಟಕವಾಗಿದೆ.

Digital Arrest: 18 ದಿನದ ಅಂತರದಲ್ಲಿ 11.8 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಟೆಕ್ಕಿ!

Latest Videos
Follow Us:
Download App:
  • android
  • ios