ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ರಿಲೀಸ್; ಚಾರ್ಜರ್, ಇಯರ್‌ಫೋನ್ ಫ್ರೀ ಸಿಗಲ್ಲ!
ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಎಸ್21 ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಸ್21 ಅಲ್ಟ್ರಾ ಫೋನ್ ಕ್ಯಾಮರಾ ಕ್ಷಮತೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಎಸ್21 ಸೀರಿಸ್ ಫೋನ್‌ಗಳು ವಿಶಿಷ್ಟವಾದ ಹಲವು ಫೀಚರ್‌ಗಳ ಮೂಲಕ ಗಮನ ಸೆಳೆದಿದೆ.
ಬಹು ನಿರೀಕ್ಷೆಯ ಸ್ಯಾಮ್ಸಂಗ್ ಎಸ್21 ಅಲ್ಟ್ರಾ 5ಜಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಫೋನ್ ಜತೆಗೆ ಗ್ಯಾಲಕ್ಸಿ ಎಸ್21 ಮತ್ತು ಗ್ಯಾಲಕ್ಸಿ ಎಸ್21 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್ಸಂಗ್ ಅನ್‌ಪ್ಯಾಕ್ಡ್ 2021 ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.
ಗ್ಯಾಲಕ್ಸಿ ಎಸ್21 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಕ್ಯಾಮರಾ ಹಿನ್ನೆಲೆಯಲ್ಲಿ ಹೆಚ್ಚು ವಿಶೇಷತೆಯನ್ನು ಪಡೆದುಕೊಂಡಿದೆ. 108 ಮೆಗಾಪಿಕ್ಸೆಲ್ ISOCELL HM3 image sensor ಅನ್ನು ಈ ಫೋನ್ ಹೊಂದಿದೆ. ಸ್ಯಾಮ್ಸಂಗ್ ಈವರೆಗೆ ಬಿಡುಗಡೆ ಮಾಡಿದವುಗಳ ಪೈಕಿ ಇದು ನಾಲ್ಕನೆಯದ್ದಾಗಿದೆ. ಸುಧಾರಿತ ಆಟೋಫೋಕಸ್, ವಿಸ್ತರಿತ ಡೈನಾಮಿಕ್ ರೇಂಜ್, ಕಡಿಮೆ ಬೆಳಕಿನಲ್ಲಿ ಅದ್ಭುತ ಪ್ರದರ್ಶನ ಮತ್ತು ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ. ಸದ್ಯಕ್ಕ 0.8 ಮೈಕ್ರಾನ್ ಗಾತ್ರದ ಪಿಕ್ಸೆಲ್ ಜತೆಗೆ 1/33″ ಸೆನ್ಸರ್ ಉತ್ಪಾದನೆಯಲ್ಲಿದೆ.
ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ...
108 ಮೆಗಾಪಿಕ್ಸೆಲ್ ಕ್ಯಾಮರಾ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ಹೊಸದೇನಲ್ಲ. ಈ ಹಿಂದೆ ಅಂದರೆ 2019ರಲ್ಲಿ ಸ್ಯಾಮ್ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳಿಗೆ 108 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಪರಿಚಯಿಸಿತ್ತು ಮತ್ತು ಅದು 10 ಕೋಟಿ ಪಿಕ್ಸೆಲ್‌ಗೂ ಹೆಚ್ಚಿರುವ ಮೊಬೈಲ್ ಕ್ಯಾಮರಾ ಆಗಿತ್ತು ಎನ್ನಲಾಗಿದೆ.
ಈ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮರಾ ಅತ್ಯುತ್ತಮ ಪ್ರದರ್ಶನ ನೀಡುತ್ತದೆ. ಈ ಕ್ಯಾಮರಾದ ಆಟೋಫೋಕಸ್ ವೇಗವನ್ನು ಪಡೆದುಕೊಂಡಿದೆ, ಸೂಪರ್ ಪಿಡಿ ಪ್ಲಸ್ ಫೀಚರ್‌ನೊಂದಿಗೆ ಸುಧಾರಿತ ಹೊಸ ಸೆನ್ಸರ್‌ಗಳಿವೆ. ಫೇಸ್ ಡಿಟೆಕ್ಷನ್ ಫೋಕಸಿಂಗ್‌ಗೆ ಬದಲಿಗೆ ಆಟೋಫೋಕಸ್ ಆಫ್ಟಿಮೈಸ್ಡ್ ಮೈಕ್ರೊ ಲೆನ್ಸ್‌ಗಳನ್ನು ಈ ಕ್ಯಾಮರಾ ಹೊಂದಿದೆ. ಕತ್ತೆಯಲ್ಲೂ ಈ ಕ್ಯಾಮರಾ ಅತ್ಯುತ್ತಮ ಫಲಿತಾಂಶ ನೀಡುತ್ತದೆ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ.
ದೊಡ್ಡ ಕಂಪನಿಗಳಿಗೆ ಪೋಕೋ ಶಾಕ್, ಆನ್‌ಲೈನ್ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ನಲ್ಲಿ 3ನೇ ಸ್ಥಾನ
ಈ ಕ್ಯಾಮರಾದ ಇನ್ನೊಂದು ವಿಶೇಷ ಏನೆಂದರೆ, ಸ್ಮಾರ್ಟ್ ಐಎಸ್ಒ ಪ್ರೋ ಫೀಚರ್ ಗಮನಾರ್ಹವಾಗಿದೆ. ಇದು ಉನ್ನತ-ಕ್ರಿಯಾತ್ಮಕ-ಶ್ರೇಣಿಯ ತಂತ್ರಜ್ಞಾನವಾಗಿದ್ದು, ಇದು ಅಂತರ್-ದೃಶ್ಯ ಡ್ಯುಯಲ್ ಪರಿವರ್ತನೆ ಲಾಭವನ್ನು ಹೆಚ್ಚಿಸುತ್ತದೆ. ಸ್ಮಾರ್ಟ್ ಐಎಸ್ಒ ಪ್ರೋ ಏಕಕಾಲಕ್ಕೆ ಐಎಸ್ಒನ ಹೈ ಮತ್ತು ಲೋ ಫ್ರೇಮ್‌ಗಳನ್ನು ಸೆರೆ ಹಿಡಿಯಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು 21 ಬಿಟ್ ಡೆಪ್ತ್‌ನಲ್ಲಿ ಒಂದುಗೂಡಿಸಲು ಯಶಸ್ವಿಯಾಗುತ್ತದೆ. ಅದರೆ, ಕಡಿಮೆ ಬೆಳಕಿನಲ್ಲೂ ಈ ತಂತ್ರಜ್ಞಾನದಿಂದಾಗಿ ಕ್ಯಾಮರಾ ಶುಭ್ರ ಮತ್ತು ಸ್ಪಷ್ಟವಾದ ಭಾವಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್21 ಅಲ್ಟ್ರಾ, ಎಸ್21 ಮತ್ತು ಎಸ್21 ಪ್ಲಸ್ ಫೋನ್‌ಗಳು ನಿಮಗೆ ಆರು ಬಣ್ಣಗಳಲ್ಲಿ ಮಾರಾಟಕ್ಕೆ ದೊರೆಯುತ್ತವೆ. ಪ್ಯಾಂಥಮ್ ಬ್ಲ್ಯಾಕ್, ಪ್ಯಾಂಥಮ್ ಸಿಲ್ವರ್, ಪ್ಯಾಂಥಮ್ ವಾಯ್ಲೆಟ್, ಪ್ಯಾಂಥಮ್ ವೈಟ್, ಪ್ಯಾಂಥಮ್ ಗ್ರೇ ಹಾಗೂ ಪ್ಯಾಂಥಮ್ ಪಿಂಕ್‌ಗಳಲ್ಲ ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗಲಿವೆ.
ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಬಿಡುಗಡೆ, ಏನೇನಿದೆ ವಿಶೇಷ?
ಸ್ಯಾಮ್ಸಂಗ್ ಈ ಬಾರಿ ಆಪಲ್ ಹಾದಿ ತುಳಿದಂತಿದೆ. ಸ್ಯಾಮ್ಸಂಗ್ ಎಸ್21 ಸೀರಿಸ್ ಫೋನ್‌ಗಳ ಜತೆ ಯಾವುದೇ ಚಾರ್ಜರ್, ಇಯರ್ ಫೋನ್ ಅಥವಾ ಚಾರ್ಜಿಂಗ್ ಅಡಾಪ್ಟರ್ ಬರುವುದಿಲ್ಲ. ಇಷ್ಟು ಮಾತ್ರವಲ್ಲದೇ, ಮೈಕ್ರೋ ಕಾರ್ಡ್ ಸ್ಲಾಟ್ ಕೂಡ ಇರುವುದಿಲ್ಲ. ನೀವು ದುಡ್ಡು ಕೊಟ್ಟೇ ಚಾರ್ಜರ್, ಇಯರ್ ಫೋನ್, ಚಾರ್ಜಿಂಗ್ ಅಡಾಪ್ಟರ್ ಅನ್ನು ಖರೀದಿಸಬೇಕಾಗುತ್ತದೆ.
8 ಜಿಬಿ ರ್ಯಾಮ್ ಮತ್ತು 128 ಜಿಬಿ ಎಸ್21 ಬೆಲೆ 69,999 ರೂ. ಇದ್ದರೆ, 8 ಜಿಬಿ ರ್ಯಾಮ್ ಮತ್ತು 256 ಜಿಬಿ ಮೆಮೊರಿ ಇರು ಫೋನ್ ಬೆಲೆ 73,999 ರೂ. ಇನ್ನು ಗ್ಯಾಲಕ್ಸಿ ಎಸ್21 ಪ್ಲಸ್(8ಜಿಬಿ ಮತ್ತು 128ಜಿಬಿ) 81,999 ರೂ. ಮತ್ತು 256 ಜಿಬಿ ಮೆಮೊರಿ ಫೋನ್ ಬೆಲೆ 85,99 ರೂ. ಎಂದು ನಿಗದಿಪಡಿಸಲಾಗಿದೆ. ಇನ್ನು ಗ್ಯಾಲಕ್ಸಿ ಎಸ್21 ಅಲ್ಟ್ರಾ 12 ಜಿಬಿ ರ್ಯಾಮ್ ಮತ್ತು 256 ಜಿಬಿ ಇಂಟರ್ನೆಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, 1,05,99 ರೂಪಾಯಿಯಾಗಿದೆ.
ಸ್ಯಾಮ್ಸಂಗ್ ಎಸ್21 ಅಲ್ಟ್ರಾ ಸ್ಮಾರ್ಟ್‌ಫೋನ್ ಅಲ್ಟ್ರಾ ವೈಡ್ಬ್ಯಾಂಡ್ ಕೆಪಬಿಲಿಟಿಸ್ಟ್(ಯುಡಬ್ಲೂಬಿ) ಫೀಚರ್ ಹೊಂದಿದೆ. ಈ ಫೀಚರ್ ಅನ್ನು ಬಳಸಿಕೊಂಡು ಗ್ರಾಹಕರು ತಮ್ಮ ಕಾರುಗಳ ಬಾಗಿಲುಗಳನ್ನು ಓಪನ್ ಮಾಡಬಹುದು. ಅಂದರೆ, ಈ ತಂತ್ರಜ್ಞಾನ ಸಪೋರ್ಟ್ ಮಾಡುವ ಕಾರುಗಳ ಡೋರ್‌ಗಳನ್ನು ಸ್ವಯಂವಾಗಿ ತೆರೆಯುವಂತೆ ಮಾಡಬಹುದು. ಆದರೆ, ಈ ಫೀಚರ್ ಕೆಲವೇ ಕೆಲವು ಕಾರುಗಳಿಗೆ ಸಪೋರ್ಟ್ ಮಾಡುತ್ತದೆ. ಆಡಿ, ಬಿಎಂಡಬ್ಲ್ಯೂ, ಫೋರ್ಡ್, ಜಿನಿಸಿಸ್ ಕಾರುಗಳಿಗೆ ಸಪೋರ್ಟ್ ಮಾಡುತ್ತದೆ.