ಚೀನಾದ ದೈತ್ಯ ಶಿಯೋಮಿಯ ಸಬ್ ಬ್ರ್ಯಾಂಡ್ ಆಗಿದ್ದ ಪೋಕೋ ಇದೀಗ ಸ್ವತಂತ್ರ ಬ್ರ್ಯಾಂಡ್ ಆಗಿರುವುದು ಗೊತ್ತು. ಈ ಬ್ರ್ಯಾಂಡ್ ಎಲ್ಲ ಪ್ರಭಾವಿ ಬ್ರ್ಯಾಂಡ್‌ಗಳನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಂಬ ಕೀರ್ತಿಗೆ ಪಾತ್ರವಾಗಿದೆ.
ಒಂದೊಂದು ಸಾರಿ ತೀರಾ ಅನಿರೀಕ್ಷಿತ ಘಟನೆಗಳು ನಡೆದು ಬಿಡುತ್ತವೆ. ಯಾಕೆಂದರೆ, ಕೆಲವೊಮ್ಮೆ ಯಾವುದೇ ನಿರೀಕ್ಷೆಗಳೇ ಇಲ್ಲದ ಕಂಪನಿ, ಬ್ರ್ಯಾಂಡುಗಳು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಶಾಕ್ ನೀಡುತ್ತವೆ. ಇದೀಗ ಪೋಕೋ ಸ್ಮಾರ್ಟ್‌ಫೋನ್ ಕಂಪನಿ ಭಾರತದ ಮೂರನೇ ಅತಿದೊಡ್ಡ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎನಿಸಿಕೊಂಡಿದೆ. ಈ ವಿಷಯವನ್ನು ಪೋಕೋ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಒಂದು ಮತ್ತು ಎರಡನೇ ಸ್ಥಾನದಲ್ಲಿ ಶಿಯೋಮಿ ಹಾಗೂ ಸ್ಯಾಮ್ಸಂಗ್ ಕಂಪನಿಗಳಿವೆ.
New Sensation: ವಾಟ್ಸಾಪ್ ಹಿಂದಿಕ್ಕುವ ಸಿಗ್ನಲ್
ಈ ಮೊದಲು ಚೀನಾ ಮೂಲದ ಶಿಯೋಮಿ ಒಡೆತನದಲ್ಲಿದ್ದ ಪೋಕೋ ಬ್ರ್ಯಾಂಡ್ ಕಳೆದ ವರ್ಷ ಫೆಬ್ರವರಿಯಲ್ಲಿ ಸ್ವತಂತ್ರವಾಗಿ ತನ್ನ ಬ್ರ್ಯಾಂಡ್ ರೂಪಿಸಿಕೊಂಡಿತ್ತು. ಇದೀಗ, ಕೌಂಟರ್ ಪಾಯಿಂಟ್ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಪೋಕೋ ಆಗಲೇ ಪ್ರಭಾವಿ ಬ್ರ್ಯಾಂಡ್‌ಗಳಾದ ಒನ್‌ಪ್ಲಸ್ ಮತ್ತು ರಿಯಲ್‌ಮೀ ಕಂಪನಿಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಬಜೆಟ್ ಫೋನ್‌ಗಳಾದ ಪೋಕೋ ಎಂ2 ಮತ್ತು ಪೋಕೋ ಸಿಎಂ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಹೆಚ್ಚು ಮಾರಾಟ ಕಂಡಿವೆ.
ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಪೋಕೋ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಗ್ರಾಹಕರನ್ನು ಸಂತುಷ್ಟಗೊಳಿಸುತ್ತಿದೆ. ಹಾಗಾಗಿಯೇ, ಕಂಪನಿ ಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿದೆ. 2018ರಲ್ಲಿ ಚೀನಾ ಮೂಲದ ಶಿಯೋಮಿ ಕಂಪನಿ ಸಬ್ ಬ್ರ್ಯಾಂಡ್ ಆಗಿ ಪೋಕೋ ತನ್ನ ಪಯಣವನ್ನು ಆರಂಭಿಸಿತು. ಫೋಕೋ ಎಫ್1, ಎರಡನೇ ಫೋನ್ ಪೋಕೋ ಎಕ್ಸ್2 ಸ್ಮಾರ್ಟ್‌ಫೋನ್‌ಗಳು ಮಾರಾಟ ಕಂಡವು. ಒಂದು ವರ್ಷದ ಬಳಿಕ ಪೋಕೋ ಶಿಯೋಮಿಯಿಂದ ಹೊರ ಬಂದು ಸ್ವಂತ ಬ್ರ್ಯಾಂಡ್ ಆಗಿ ರೂಪುಗೊಂಡಿತು. ಆ ಬಳಿಕ ಕಂಪನಿ ಇನ್ನಷ್ಟು ಪ್ರಾಬಲ್ಯವನ್ನು ಬೆಳೆಸಿಕೊಂಡಿತು. 2020ರಲ್ಲಿ ಪೋಕೋ ಐದು ವೈವಿಧ್ಯಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ, ಬಳಕೆದಾರರ ಮನವನ್ನುಗೆಲ್ಲುವಲ್ಲಿ ಯಶಸ್ವಿಯಾಯಿತು. 2020 ಸಾಧನೆಯನ್ನೇ 2021ರಲ್ಲೂ ಪುನಾರ್ವರ್ತಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ ಎಂದು ಹೇಳಬಹುದು. ಅತಿ ದೊಡ್ಡ ಉತ್ಪನ್ನಗಳತ್ತ ಏನೂ ಗಮನವಿಲ್ಲ. ನಮ್ಮಿಂದ ಏನು ಮಾಡಲು ಸಾಧ್ಯವೋ ಅಷ್ಟರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇವೆ ಎಂಬುದು ಕಂಪನಿಯ ಅಂಬೋಣವಾಗಿದೆ.
ನಾವು ಕ್ಲೀನ್ ಸಾಫ್ಟ್‌ವೇರ್‌ನೊಂದಿಗೆ ಅತ್ಯುತ್ತಮ ಸಾಧನವನ್ನು ರೂಪಿಸಲು ಮತ್ತು ಗ್ರಾಹಕರ ಹೆಚ್ಚಿನ ಸಂತುಷ್ಟವನ್ನು ಸಂಪಾದಿಸಲು ನಾವು ಪ್ರಯತ್ನಿಸುತ್ತೇವೆ ಪೋಕೋ ಇಡಿಯಾ ಡೈರೆಕ್ಟರ್ ಅನುಜ್ ಶರ್ಮಾ ತಿಳಿಸಿದ್ದಾರೆ.
ಪೋಕೋ ಲ್ಯಾಪ್‌ಟ್ಯಾಪ್ ಕೂಡ ಬಿಡುಗಡೆ ಮಾಡಲಿದೆ ಎಂಬುದು ಸುದ್ದಿಯಲ್ಲಿತ್ತು. ಆದರೆ, ಇದನ್ನು ಕಂಪನಿ ಅಲ್ಲಗಳೆದಿದ್ದು, ಸದ್ಯಕ್ಕೆ ಅಂಥ ಯಾವುದೇ ಪ್ಲ್ಯಾನ್ ಇಲ್ಲ ಎಂದು ಹೇಳಿದೆ. ಆದರೆ, ಫೋಕೋ ತಯಾರಿಸಿರುವ ಮೊದಲ ಎರ್‌ಬಡ್ ಅರ್ಥಾತ್ ಪೋಕೋ ಪಾಪ್ ಬಡ್ಸ್ ಇನ್ನೂ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪೋಕೋ ಎಫ್2 ಕೂಡ ಸಿದ್ಧತೆಯಲ್ಲಿ ಹಾದಿಯಲ್ಲಿದೆ.
ಬಿಎಸ್ಸೆನ್ನೆಲ್‍ನ 2399 ಮತ್ತು 1999 ರೂ. ಪ್ಲ್ಯಾನ್ ಪರಿಷ್ಕರಣೆ, ಯಾವೆಲ್ಲ ಆಫರ್?
ಕಳೆದ ವರ್ಷವಷ್ಟೇ ಪೋಕೋ ಜಾಗತಿಕವಾಗಿ ಸ್ವತಂತ್ರ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಈ ಬಗ್ಗೆ ಪೋಕೋ ತನ್ನ ತನ್ನ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ತಿಳಿಸಿತ್ತು. ಭಾರತೀಯ ಅಂಗಸಂಸ್ಥೆ ಶಿಯೋಮಿಯಿಂದ ಬೇರ್ಪಟ್ಟ ನಂತರ ಸ್ವತಂತ್ರ ಬ್ರಾಂಡ್ ಆದ 10 ತಿಂಗಳ ನಂತರ ಈ ಪ್ರಕ್ರಿಯೆ ನಡೆದಿದೆ. ಚೀನಾದ ದೈತ್ಯ ಶಿಯೋಮಿ ಪೊಕೊವನ್ನು 2018ರಲ್ಲಿ ತನ್ನ ಉಪ-ಬ್ರಾಂಡ್ ಆಗಿ ಮಾರುಕಟ್ಟೆಗೆ ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಬಳಿಕ ನಿಧಾನವಾಗಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡ ಪೋಕೋ, ಬಜೆಟ್ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಯಿತು. ಇದೀಗ ಮೂರನೇ ಅತಿ ದೊಡ್ಡ ಕಂಪನಿಯಾಗುತ್ತಿರುವುದು ಕೂಡ ಪೋಕೋ ಇಂಡಿಯಾದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಭಾರತೀಯ ಸ್ಮಾರ್ಟ್‌ಫೋನ್ ಉತ್ಪಾದನಾ ವಲಯದಲ್ಲಿ ಸ್ಯಾಮ್ಸಂಗ್, ಶಿಯೋಮಿ, ಒನ್‌ಪ್ಲಸ್ ಸೇರಿದಂತೆ ಅನೇಕ ದೊಡ್ಡ ಕಂಪನಿಗಳಿವೆ. ಈ ಮಧ್ಯೆ ಪೋಕೋ ಸ್ವತಂತ್ರ ಬ್ರ್ಯಾಂಡ್ ಆಗಿ ಅದ್ಭುತ ಸಾಧನೆ ಮಾಡುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 13, 2021, 6:31 PM IST