Galaxy S21 FE 5G: AMOLED ಡಿಸ್ಪ್ಲೇ, ಟ್ರಿಪಲ್ ಕ್ಯಾಮೆರಾಗಳೊಂದಿಗೆ ಸ್ಯಾಮಸಂಗ್‌ ಹೊಸ ಫೋನ್ ಲಾಂಚ್!

ಭಾರತದಲ್ಲಿ Samsung Galaxy S21 FE ಬಿಡುಗಡೆಯ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದಾಗ್ಯೂ,  ಫೋನ್ ತನ್ನ ಜಾಗತಿಕ ಬಿಡುಗಡೆಯೊಂದಿಗೆ ಭಾರತದಲ್ಲೂ ಬಿಡುಗಡೆಯಾಗಬಹುದು ಎಂದು ಇತ್ತೀಚಿನ ವರದಿಯೊಂದು ಸೂಚಿಸಿದೆ.

Samsung Galaxy S21 FE 5G with AMOLED Display Triple Rear Cameras Launched Price Specifications mnj

Tech Desk: Samsung Galaxy S21 FE 5G ಸ್ಮಾರ್ಟ್‌ಫೋನ್ಅನ್ನು 4 ಜನವರಿ 2022 ರಂದು ಬಿಡುಗಡೆ ಮಾಡಲಾಗಿದೆ. ಈ ಫೋನ್ ಬಗ್ಗೆ ಬಹಳ ಸಮಯದಿಂದ ಚರ್ಚೆಯಾಗುತಿತ್ತು. Samsung ನ ಹೊಸ ಫೋನ್ Samsung Galaxy S21 ಮತ್ತು Samsung Galaxy S20 FE ನ  ಹೊಸ ಆವೃತ್ತಿಯಾಗಿದೆ. ಇದರಲ್ಲಿ 120 Hz AMOLED ಡಿಸ್ಪ್ಲೇ ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ನೀಡಲಾಗಿದೆ. ಫೋನ್ 8 GB RAM ಮತ್ತು 256 GB ವರೆಗೆ ಸಂಗ್ರಹಣೆಯನ್ನು ಸಹ ಹೊಂದಿದೆ.

ಈ ಫೋನ್ ಸುಧಾರಿತ ನೈಟ್ ಮೋಡ್‌ನೊಂದಿಗೆ ಬಂದಿದೆ. ಇದರಿಂದಾಗಿ ಸಾಮಾನ್ಯ ಬಳಕೆದಾರರಿಗೆ ರಾತ್ರಿಯೂ ಸಹ ಸಾಕಷ್ಟು ಅನುಕೂಲವಾಗುತ್ತದೆ. ಭಾರತದಲ್ಲಿ Samsung Galaxy S21 FE ಬಿಡುಗಡೆಯ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದಾಗ್ಯೂ,  ಫೋನ್ ತನ್ನ ಜಾಗತಿಕ ಬಿಡುಗಡೆಯೊಂದಿಗೆ ಭಾರತದಲ್ಲೂ ಬಿಡುಗಡೆಯಾಗಬಹುದು ಎಂದು ಇತ್ತೀಚಿನ ವರದಿಯೊಂದು ಸೂಚಿಸಿದೆ.‌

Samsung Galaxy S21 FE 5G ಬೆಲೆ ಮತ್ತು ಲಭ್ಯತೆ

Samsung UK ವೆಬ್‌ಸೈಟ್‌ನ ಪ್ರಕಾರ, Samsung Galaxy S21 FE 5G 128GB ಸ್ಟೋರೇಜ್ ರೂಪಾಂತರಕ್ಕಾಗಿ GBP 699 (ಅಂದಾಜು ರೂ 70,200) ಮತ್ತು 256GB ಸ್ಟೋರೇಜ್ ಫೋನ್‌ಗೆ EUR 749 (ಅಂದಾಜು ರೂ 75,200) ದರವನ್ನು ನಿಗದಿಪಡಿಸಲಾಗಿದೆ. ಫೋನ್ ಗ್ರ್ಯಾಫೈಟ್, ಲ್ಯಾವೆಂಡರ್, ಆಲಿವ್ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಜನವರಿ 11 ರಿಂದ ವಿಶ್ವದ ವಿವಿಧ ಭಾಗಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.

Samsung Galaxy S21 FE 5G specifications

Samsung Galaxy S21 FE 5G ಆಂಡ್ರಾಯ್ಡ್ 12 ನಲ್ಲಿ  One UI 4  ಜೊತೆಗೆ ರನ್ ಆಗುತ್ತದೆ. ಇದು 6.4-ಇಂಚಿನ Full-HD+ ಡೈನಾಮಿಕ್ AMOLE 2X ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಫೋನ್ 8GB RAM ಜೊತೆಗೆ ಆಕ್ಟಾ-ಕೋರ್ SoC ಅನ್ನು ಹೊಂದಿದೆ. ಮಾರುಕಟ್ಟೆಯನ್ನು ಅವಲಂಬಿಸಿ SoC ಅನ್ನು ಸ್ನಾಪ್‌ಡ್ರಾಗನ್ 888 ಅಥವಾ Exynos 2100 ಎಂದು ಊಹಿಸಲಾಗಿದೆ.

ಇದನ್ನೂ ಓದಿSamsung Galaxy Tab A8: 7040mAh ಬ್ಯಾಟರಿ, ವೇಗದ ಚಾರ್ಜಿಂಗ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

Galaxy S21 FE 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 12- ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ f/1.8 ವೈಡ್-ಆಂಗಲ್ ಲೆನ್ಸ್ ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಅನ್ನು ಹೊಂದಿದೆ.‌ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ f/2.2 ಲೆನ್ಸ್‌ನೊಂದಿಗೆ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲ!

ಸ್ಮಾರ್ಟ್‌ಫೋನ್‌ನಲ್ಲಿ 4,500mAh ಬ್ಯಾಟರಿಯನ್ನು ಒದಗಿಸಿದೆ, ಇದು 25W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ಸಾಧನಗಳನ್ನು ವೈರ್‌ಲೆಸ್ ಆಗಿ ಚಾರ್ಜ್ ಮಾಡಲು ಸ್ಯಾಮ್‌ಸಂಗ್‌ನ ವೈರ್‌ಲೆಸ್ ಪವರ್‌ಶೇರ್ ವೈಶಿಷ್ಟ್ಯದೊಂದಿಗೆ ಫೋನ್ ಬರುತ್ತದೆ. ಇದು IP68 ಪ್ರಮಾಣೀಕೃತವಾಗಿದ್ದು  ಸ್ವಲ್ಪ ಮಟ್ಟಿಗೆ ಧೂಳು ಮತ್ತು ನೀರನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಫೋನ್ 155.7x74.5x7.9mm ಅಳತೆ ಮತ್ತು 177 ಗ್ರಾಂ ತೂಗುತ್ತದೆ

ಇದನ್ನೂ ಓದಿ: Largest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme!

ಹೊಸ Samsung Galaxy S21 FE 5G 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬೋರ್ಡ್‌ನಲ್ಲಿರುವ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್, ಗೈರೊ, ಮ್ಯಾಗ್ನೆಟೋಮೀಟರ್ ಮತ್ತು ಪ್ರೋಕ್ಸಿಮಿಟಿ ಸೆನ್ಸರ್ ಸೇರಿವೆ. ಫೋನ್ ಇನ್-ಡಿಸ್ಪ್ಲೇ (ಆಪ್ಟಿಕಲ್) ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.

Latest Videos
Follow Us:
Download App:
  • android
  • ios