Largest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme!

*ಭಾರತದಲ್ಲಿ ಮೊಬೈಲ್‌ ಕಂಪನಿಗಳ ಪೈಪೋಟಿ
*ಶಾಓಮಿ ನಂ. 1 : ರಿಯಲ್‌ ಮಿಗೆ ಎರಡನೇ ಸ್ಥಾನ
*ಫ್ಲಿಪ್‌ಕಾರ್ಟ್‌ನಲ್ಲಿ ಮಿಂಚಿದ ರಿಯಲ್‌ ಮಿ!

Realme becomes Indias second largest smartphone brand in October 2021 Xiaomi remains at the top mnj

ನವದೆಹಲಿ(ಡಿ. 12): ತಂತ್ರಜ್ಞಾನ ಬೆಳೆದಂತೆ ಸ್ಮಾರ್ಟ್‌ ಫೋನ್‌ ಉದ್ಯಮ (Smartphone Market) ವಿಸ್ತಾರವಾಗುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ಮೊಬೈಲ್‌ ಫೋನ್‌ ಬಿಡುಗಡೆಯಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೋಬೈಲ್‌ ಕಂಪನಿಗಳ ಪೈಪೋಟಿ ಜೋರಾಗಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಕಂಪನಿಗಳು ಇನ್ನಿಲ್ಲದ ಮಾರ್ಕೆಟಿಂಗ್‌, ಬ್ರ್ಯಾಂಡಿಂಗ್‌ ಮಾಡುತ್ತವೆ. ಭಾರತ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು. ಇಲ್ಲಿ ಟಾಪ್‌ ಸ್ಥಾನದಲ್ಲಿ ಉಳಿಯಲು ತೀವ್ರ ಪೈಪೋಟಿ ಇದೆ. ಸದ್ಯಕ್ಕೆ ಶಾಓಮಿ (Xiaomi) ಭಾರತದಲ್ಲಿ ಅತಿ ಬಳಕೆಯ ಮೊಬೈಲ್‌ ಬ್ರ್ಯಾಂಡ್‌ ( Largest smartphone Brand) ಆಗಿದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ಎರಡನೇ ಸ್ಥಾನದಲ್ಲಿದ್ದ ಸ್ಯಾಮಸಂಗ್‌ಅನ್ನು (Samsung) ಹಿಂದಿಕ್ಕಿ ರಿಯಲ್‌ ಮಿ (Realme) ಈಗ ಎರಡನೇ ಸ್ಥಾನಕ್ಕೇರಿದೆ. ಅಕ್ಟೋಬರ್ 2021 ರ ಹೊತ್ತಿಗೆ ರಿಯಲ್‌ ಮಿ ಭಾರತದಲ್ಲಿ ಶೇಕಡಾ 18 ರಷ್ಟು ಮಾರುಕಟ್ಟೆ ಪಾಲನ್ನು  ಹೊಂದಿದ್ದು  ರಿಯಲ್‌ ಮಿಯ ದೇಶದಲ್ಲಿನ ಇದುವರೆಗಿನ ಅತ್ಯಧಿಕ ಮಾರುಕಟ್ಟೆ ಪಾಲು ಇದಾಗಿದೆ.

ಶಾಓಮಿ 20 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿರುವ ನಂಬರ್ ಒನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ, ನಂತರ Realme, Samsung ಮತ್ತು Vivo ಸ್ಥಾನಪಡೆದಿವೆ. ಅಕ್ಟೋಬರ್ 2021 ರ ಹೊತ್ತಿಗೆ ಸ್ಯಾಮ್‌ಸಂಗ್ ಮತ್ತು ವಿವೋ ಕ್ರಮವಾಗಿ 16 ಮತ್ತು 13 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿವೆ.

ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ ಮಿಗೆ ಅಗ್ರಸ್ಥಾನ

ರಿಯಲ್‌ ಮಿ 52 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ನಂಬರ್ ಒನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.  ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ 27 ಶೇಕಡಾ ಮಾರುಕಟ್ಟೆ ಪಾಲು ಹೊಂದುವ ಮೂಲಕ ಅಗ್ರ ಎರಡು ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ರಿಯಲ್‌ ಮಿ ಸ್ಥಾನ ಪಡೆದಿದೆ. ಭಾರತೀಯ ಸ್ಮಾರ್ಟ್‌ಫೋನ್ ಉದ್ಯಮವು ಅಕ್ಟೋಬರ್ ತಿಂಗಳಲ್ಲಿ ಸ್ಮಾರ್ಟ್‌ಫೋನ್ ವಹಿವಾಟಿನಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ.

Moto G51 5G: Motorolaದ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ!

"2022 ಲ್ಲಿ  ಭಾರತದಲ್ಲಿ ನಂ. 1 ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವುದು ನಮ್ಮ ಗುರಿ ಮತ್ತು ಈ ಮೈಲಿಗಲ್ಲು ಆ ದೃಷ್ಟಿಯನ್ನು ಸಾಕಾರಗೊಳಿಸಲು ಮತ್ತೊಂದು ಮೆಟ್ಟಿಲು." ಎಂದು  ರಿಯಲ್‌ಮೆ ಇಂಡಿಯಾದ ಸಿಇಒ ಮಾಧವ್ ಶೇತ್ (Madhav Sheth) ಹೇಳಿದ್ದಾರೆ.

ಒಟ್ಟು 9.3 ಮಿಲಿಯನ್ ಯೂನಿಟ್ ಮಾರಾಟ!

2021 ರ ಹಬ್ಬದ ಋತುವಿನಲ್ಲಿ, Realme ಎಲ್ಲಾ ಆನ್‌ಲೈನ್ ಸೇರಿದಂತೆ ಮಾರುಕಟ್ಟೆಯಲ್ಲಿ ಒಟ್ಟು 9.3 ಮಿಲಿಯನ್ ಯೂನಿಟ್ ಸ್ಮಾರ್ಟ್‌ಫೋನ್‌ಗಳು, AIOT ಮತ್ತು ಟೆಕ್ಲೈಫ್ ಉತ್ಪನ್ನಗಳನ್ನು ಮಾರಾಟ ಮಾಡಿದೆ. ರಿಯಲ್‌ ಮಿ ವರ್ಷದಿಂದ ವರ್ಷಕ್ಕೆ 40 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇತ್ತೀಚೆಗೆ ಬಿಡುಗಡೆಯಾದ ರಿಯಲ್‌ ಮಿ GT ಸರಣಿಯು 300 ಸಾವಿರ ಮಾರಾಟವಾಗಿದೆ ಮತ್ತು Realme Narzo ಸರಣಿಯು 1.4 ಮಿಲಿಯನ್ ಮಾರಾಟವನ್ನು ದಾಖಲಿಸಿದೆ.

Smartphone Sales in 2021 ಕೊರೋನಾ ಕಾರಣದಿಂದಾಗಿ ಆನ್‌ಲೈನ್ ಮೊಬೈಲ್‌ ಖರೀದಿಯಲ್ಲಿ ಭಾರೀ ಏರಿಕೆ!

 ರಿಯಲ್‌ ಮಿ ಸಂಸ್ಥೆ ಪ್ರಾರಂಭವಾದಾಗಿನಿಂದ ಜಾಗತಿಕವಾಗಿ ಒಟ್ಟು 100 ಮಿಲಿಯನ್ ಸಾಧನಗಳನ್ನು ಮಾರಾಟ ಮಾಡಿದೆ ಎಂದು ಈ ವರ್ಷ ಸಂಸ್ಥೆ ತಿಳಿಸಿದೆ . 2021ರ ಎರಡನೇ ತ್ರೈಮಾಸಿಕದಲ್ಲಿ (Q2 2021) ಕೌಂಟರ್‌ಪಾಯಿಂಟ್ ಡೇಟಾದ  ಪ್ರಕಾರ ಜಾಗತಿಕವಾಗಿ ಟಾಪ್ 6 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ರಿಯಲ್‌ ಮಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾದ  ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ರಿಯಲ್‌ ಮಿ ಕೂಡ ಒಂದಾಗಿದೆ.

Latest Videos
Follow Us:
Download App:
  • android
  • ios