OnePlus Tablet: OLED ಡಿಸ್ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್
*ಬಜೆಟ್ ಸ್ಮಾರ್ಟ್‌ವಾಚ್ ಬಿಡುಗಡೆ ನಂತರ ಒನ್‌ಪ್ಲಸ್ ಟ್ಯಾಬ್ಲೆಟ್ ಲಾಂಚ್‌ಗೆ ಸಿದ್ಧತೆ
*ಒನ್‌ಪ್ಲಸ್ ಟ್ಯಾಬ್ ಒಎಲ್ಇಡಿ ಡಿಸ್‌ಪ್ಲೇ, ವೇಗದ ಪ್ರೊಸೆಸರ್ ಮತ್ತಿರ ವಿಶೇಷತೆಗಳನ್ನು ಹೊಂದಿದೆ.
*ಈಗಾಗಲೇ ಈ ಸಾಧನ ಬಗ್ಗೆ ಸಾಕಷ್ಟು ಮಾಹಿತಿ ಸೋರಿಕೆ, ಕಂಪನಿಯಿಂದ ಮಾಹಿತಿ ಇಲ್ಲ.
OnePlus Tablet: ಬಜೆಟ್ ಸ್ನೇಹಿ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಲಾಂಚ್ ಮಾಡಿದ ನಂತರ, ಒನ್ ಪ್ಲಸ್ ಟ್ಯಾಬ್ಲೆಟ್ (OnePlus Tablet) ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿದೆ. ಕೆಲವೇ ದಿನಗಳ ಹಿಂದೆ, ಒನ್ಪ್ಲಸ್ ಪ್ಯಾಡ್ ಈಗಾಗಲೇ ಬೃಹತ್ ಸಂಖ್ಯೆಯಲ್ಲಿ ಉತ್ಪಾದನೆಯಾಗುತ್ತಿದೆ ಮತ್ತು ಶೀಘ್ರದಲ್ಲೇ ಮಾರುಕಟ್ಟೆಗೆ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ಟಿಪ್ಸಟರ್ ಒಬ್ಬರು ಮಾಹಿತಿ ಲೀಕ್ ಮಾಡಿದ್ದರು. ಈ ಟ್ಯಾಬ್ಗೆ ಸಂಬಂಧಿಸಿದಂತೆ ಕೆಲವು ಟೆಕ್ ವಿಶೇಷತೆಗಳು ಹಾಗೂ ಬೆಲೆಯ ವಿವರ ಈಗಾಗಲೇ ಆನ್ಲೈನ್ನಲ್ಲಿ ಕಾಣಿಸಿಕೊಂಡಿವೆ.
OnePlus Pad ಫಾಸ್ಟ್ ಚಾರ್ಜಿಂಗ್ಗೆ ಉತ್ತಮ ಬೆಂಬಲದೊಂದಿಗೆ ಬೃಹತ್ ಡಿಸ್ಪ್ಲೇ ಮತ್ತು ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಮತ್ತೊಬ್ಬ ಟಿಪ್ಸ್ಟರ್ ಸೂಚಿಸಿದ್ದಾರೆ. ಮುಂಬರುವ OnePlus ಟ್ಯಾಬ್ಲೆಟ್ ಈಗಾಗಲೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರ ವಿಶೇಷತೆಗಳು, ಬೆಲೆಯ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ.
ಕೆಲವು ಮಾಹಿತಿಗಳ ಪ್ರಕಾರ OnePlus ಟ್ಯಾಬ್ಲೆಟ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್‌ನೊಂದಿಗೆ ಬರಲಿದದೆ. ಇದು 6GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದು Android 12L ನೊಂದಿಗೆ ಪೂರ್ವ-ಸ್ಥಾಪಿತವಾಗಿ ಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮಾ.31ಕ್ಕೆ ಭಾರತದಲ್ಲಿ OnePlus 10 Pro ಲಾಂಚ್: ಕ್ಯಾಮೆರಾ, ಪ್ರೊಸೆಸರ್ ಯಾವುದು?
ಈ ಟ್ಯಾಬ್ಲೆಟ್ 10,090mAh ಬ್ಯಾಟರಿಯನ್ನು ಒಳಗೊಂಡಿರಬಹುದು. OnePlus ಪ್ಯಾಡ್ ಹೆಚ್ಚಾಗಿ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಟ್ಯಾಬ್ಲೆಟ್‌ಗಳಲ್ಲಿ ವೇಗದ ಚಾರ್ಜಿಂಗ್ ಅಸಾಮಾನ್ಯವಾಗಿರುವುದರಿಂದ ಇದು ಟ್ಯಾಬ್ಲೆಟ್‌ಗೆ ಮಾರಾಟವನ್ನು ಹೆಚ್ಚಿಸುವ ಅಂಶವಾಗಿರುವ ಸಾಧ್ಯತೆ ಇದೆ.
OnePlus ಪ್ಯಾಡ್ ದೊಡ್ಡ 12.4-ಇಂಚಿನ OLED ಪ್ರದರ್ಶಕವನ್ನು ಹೊಂದಬಹುದಾದ ನಿರೀಕ್ಷೆ ಇದೆ. ಈ ಹಿಂದಿನ ಮಾಹಿತಿಯ ಪ್ರಕಾರ ಈ ಡಿಸ್‌ಪ್ಲೇ 120Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಎಂದು ಸೂಚಿಸಿದೆ. ಇದು ಮಾರುಕಟ್ಟೆಯಲ್ಲಿ ಅತಿದೊಡ್ಡ ಪರದೆಯ ಗಾತ್ರವಲ್ಲದಿದ್ದರೂ, ಕಂಪನಿಯು ನಿರೀಕ್ಷಿಸುವುದಕ್ಕಿಂತ ದೊಡ್ಡದಾದ ಪ್ರದರ್ಶನವನ್ನು ನೀಡಲು ಉದ್ದೇಶಿಸಿದೆ ಎಂದು ತೋರುತ್ತದೆ.
ಸ್ಯಾಮ್‌ಸಂಗ್ ತನ್ನ ಇತ್ತೀಚಿನ Galaxy Tab S8+ ಅನ್ನು ಅದೇ ರೀತಿಯ ಹೆಚ್ಚಿನ ರಿಫ್ರೆಶ್ ದರದ ಡಿಸ್‌ಪ್ಲೇ ಮತ್ತು ಬ್ಯಾಟರಿ ಘಟಕದೊಂದಿಗೆ ಬಿಡುಗಡೆ ಮಾಡಿದೆ. ಇನ್ನೂ ದೊಡ್ಡ ಪರದೆಯನ್ನು ಬಯಸುವವರಿಗೆ, Samsung Galaxy Tab S8 Ultra ಅನ್ನು ಬೃಹತ್ 14.6-ಇಂಚಿನ ಡಿಸ್‌ಪ್ಲೇನೊಂದಿಗೆ ಮಾರಾಟ ಮಾಡುತ್ತಿದೆ, ಇದು Apple ನ iPad Pro ನಲ್ಲಿ ಕಂಡುಬರುವ 12.9-ಇಂಚಿನ ಫಲಕಕ್ಕಿಂತ ದೊಡ್ಡದಾಗಿದೆ.
ಇದನ್ನೂ ಓದಿ: ಜಿಯೋ ಅಂಗ ಸಂಸ್ಥೆ ಆಸ್ಟರಿಯಾ ಏರೋಸ್ಪೇಸ್ SkyDeck ಆರಂಭ: ಏನಿದು ಹೊಸ ಸೇವೆ?
OnePlus ಪ್ಯಾಡ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಟ್ಯಾಬ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು. 13-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 5-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಕಂಪನಿ ಒದಗಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಾಧನವು ಸೆಲ್ಫಿಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.
ಆನ್ಲೈನ್ನಲ್ಲಿ ಸಾಕಷ್ಟು ಮಾಹಿತಿ ಹರಿದಾಡಿದರೂ ಟ್ಯಾಬ್ಲೆಟ್ ಅನ್ನು ಯಾವಾಗ ಲಾಂಚ್ ಆಗಲಿದೆ ಮತ್ತು ಯಾವ ಶ್ರೇಣಿಯಲ್ಲಿ ಬೆಲೆಗಳು ಇರಲಿವೆ ಎಂಬ ಮಾಹಿತಿಯನ್ನು ಕಂಪನಿಯು ಬಹರಿಂಗಪಡಿಸಿಲ್ಲ. ಕಂಪನಿಯು ಮಧ್ಯಮ ಶ್ರೇಣಿಯ ಪ್ರೀಮಿಯಂ ಟ್ಯಾಬ್ಲೆಟ್ ಮಾರುಕಟ್ಟೆಯನ್ನು ಗುರಿಯಾಗಿಸಬಹುದು ಎಂದು ವೈಶಿಷ್ಟ್ಯಗಳು ಸೂಚಿಸುತ್ತವೆ. ಒನ್ಪ್ಲಸ್ ಟ್ಯಾಬ್ ಬೆಲೆ ಭಾರತದಲ್ಲಿ ಸುಮಾರು 35,950 ರೂ. ಇರಬಹುದು ಎದು ಊಹೆ ಮಾಡಲಾಗುತ್ತಿದೆ. OnePlus ಇನ್ನೂ ಯಾವುದೇ ಟ್ಯಾಬ್ಲೆಟ್ ಅನ್ನು ದೃಢೀಕರಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.