Asianet Suvarna News Asianet Suvarna News

Samsung Galaxy A73 ಬೆಲೆ, ಮಾರಾಟ ದಿನಾಂಕ ಬಹಿರಂಗ: 3,000 ಕ್ಯಾಶ್‌ಬ್ಯಾಕ್ ಆಫರ್!

Samsung Galaxy A73 ಕಳೆದ ವಾರ ಭಾರತದಲ್ಲಿ ಘೋಷಿಸಲಾಗತ್ತು, ಈಗ ಇದರ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಲಾಗಿದೆ. Galaxy A73 ಮುಂಗಡವಾಗಿ ನೋಂದಾಯಿಸುವ ಗ್ರಾಹಕರು Galaxy Buds Live ಕೇವಲ ರೂ 499 ಬೆಲೆಯಲ್ಲಿ ಖರೀದಿಸಬಹುದು.

Samsung Galaxy A73 sale date April 8 price features specifications mnj
Author
Bengaluru, First Published Apr 4, 2022, 2:23 PM IST | Last Updated Apr 4, 2022, 2:23 PM IST

Samsung Galaxy A73 Sale: Samsung Galaxy A73 ಕಳೆದ ವಾರ ಭಾರತದಲ್ಲಿ ಘೋಷಿಸಲಾಗಿತ್ತು ಮತ್ತು ಇದೀಗ ಫೋನ್‌ನ ಬೆಲೆಯನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಇದರ ಬೆಲೆ ರೂ 41,999 ರಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಎಂಡ್ ಮಾಡೆಲ್‌ಗೆ ರೂ 44,999 ವರೆಗೆ ಹೋಗುತ್ತದೆ. ಈ ಸ್ಮಾರ್ಟ್‌ಫೋನ್ ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಯದಿಂದ ಲಭ್ಯವಿದೆ ಮತ್ತು ಅದೇ ರೂಪಾಂತರವು ಈ ವಾರದ ನಂತರ ಭಾರತದಲ್ಲಿ ಮಾರಾಟವಾಗಲಿದೆ.

Samsung Galaxy A73 ಭಾರತದಲ್ಲಿ ಬೆಲೆ: ಭಾರತದಲ್ಲಿ, Samsung Galaxy A73 ಎರಡು ರೂಪಾಂತರಗಳಲ್ಲಿ ಬರುತ್ತದೆ. 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಮೂಲ ಮಾದರಿಯು ರೂ 41,999 ಬೆಲೆಯಲ್ಲಿ ಬರುತ್ತದೆ. ಸ್ಮಾರ್ಟ್‌ಫೋನ್‌ನ ಟಾಪ್-ಎಂಡ್ ಮಾದರಿಯು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಈ ಮಾದರಿಯು 44,999 ರೂ ಬೆಲೆಯಲ್ಲಿ ಲಭ್ಯವಿರಲಿದೆ. ಫೋನ್ ಆಸಮ್ ಮಿಂಟ್, ಆಸಮ್ ಗ್ರೇ ಮತ್ತು ಆಸಮ್ ವೈಟ್ ಸೇರಿದಂತೆ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.‌

ಇದನ್ನೂ ಓದಿ: 6,000mAh ಬ್ಯಾಟರಿಯೊಂದಿಗೆ ಬಜೆಟ್‌ ಬೆಲೆಯಲ್ಲಿ Samsung Galaxy M33 5G ಭಾರತದಲ್ಲಿ ಲಾಂಚ್  

Samsung Galaxy A73  ಮಾರಾಟದ ವಿವರಗಳು: ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮಸಂಗ್ ತನ್ನ ವೆಬ್‌ಸೈಟ್‌ನಲ್ಲಿ ವಿಶೇಷವಾದ Galaxy A73 ಮಾರಾಟವನ್ನು ಏಪ್ರಿಲ್ 8 ರಂದು 6 PM IST ಕ್ಕೆ ಘೋಷಿದಿದೆ. ಮಾರಾಟದ ಸಮಯದಲ್ಲಿ, ಗ್ರಾಹಕರು ಸ್ಯಾಮ್‌ಸಂಗ್ ಫೈನಾನ್ಸ್ +, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ರೂ 3,000 ಹೆಚ್ಚುವರಿ ತ್ವರಿತ ಕ್ಯಾಶ್‌ಬ್ಯಾಕನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. Galaxy A73 ಮುಂಗಡವಾಗಿ ನೋಂದಾಯಿಸುವ ಜನರು Galaxy Buds Live ರೂ 499 ಕ್ಕೆ ಖರೀದಿಸಬಹುದು, ಇದು ಮೂಲತಃ ರೂ 6,990 ಬೆಲೆಯಲ್ಲಿ ಲಭ್ಯವಿದೆ.

Samsung Galaxy A73 ಫೀಚರ್ಸ್:‌ Samsung Galaxy A73 ಹಿಂದಿನ Galaxy A72 ಗಿಂತ ಕೆಲವು ಗಮನಾರ್ಹವಾದ ನವೀಕರಣಗಳೊಂದಿಗೆ ಬಿಡುಗಡೆಯಾಗಿದೆ, ವಿಶೇಷವಾಗಿ ಕ್ಯಾಮೆರಾಗಳ ವಿಷಯದಲ್ಲಿ. ಇದು 6.7-ಇಂಚಿನ FHD+ ಸೂಪರ್ AMOLED Infinity-O ಡಿಸ್ಪ್ಲೇ ಜೊತೆಗೆ 1080×2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ. ಇದು 32-ಮೆಗಾಪಿಕ್ಸೆಲ್ ಇಮೇಜ್ ಸೆನ್ಸರಾ ಜತೆಗೆ ಪಂಚ್-ಹೋಲ್ ಡಿಸ್ಪ್ಲೇಯನ್ನು ಒಳಗೊಂಡಿದೆ.

ಹಿಂಭಾಗದ ಪ್ಯಾನೆಲ್‌ನಲ್ಲಿ, ಫೋನ್ 108-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್, 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 5-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರನ್ನು ಒಳಗೊಂಡಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ.

ಇದನ್ನೂ ಓದಿSamsung Galaxy A ಸರಣಿಯ 5 ಹೊಸ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್:‌ ಬೆಲೆ ₹14,999ರಿಂದ ಪ್ರಾರಂಭ

ಫೋನ್ Adreno 642L GPU ನೊಂದಿಗೆ ಜೋಡಿಸಲಾದ Qualcomm Snapdragon 778G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಹಾಗೂ 8GB RAM ಮತ್ತು 256GB ಆಂತರಿಕ ಸಂಗ್ರಹಣೆ ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ. ಸಾಫ್ಟ್‌ವೇರ್ ನೋಡುವುದಾದರೆ, ಫೋನ್ ಆಂಡ್ರಾಯ್ಡ್ 12 ಆಧಾರಿತ OneUI 4.1 ಕಸ್ಟಮ್ ಸ್ಕಿನ್‌ನಲ್ಲಿ ಔಟ್‌ ಆಫ್‌ ದಿ  ಬಾಕ್ಸ್‌ ಕಾರ್ಯನಿರ್ವಹಿಸುತ್ತದೆ.

Galaxy A73 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, AKG ಸೌಂಡ್‌ನೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್‌ನೊಂದಿಗೆ ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್‌ ಮಾಡಲಾಗಿದೆ. 

Latest Videos
Follow Us:
Download App:
  • android
  • ios