Asianet Suvarna News Asianet Suvarna News

Samsung Galaxy A53 5G, A33 5G ಲಾಂಚ್: ಭಾರತದಲ್ಲಿ ಯಾವಾಗ ಬಿಡುಗಡೆ? ಬೆಲೆ ಎಷ್ಟು?

* ಗ್ಯಾಲಕ್ಸಿ ಎ ಇವೆಂಟ್‌ನಲ್ಲಿ ಸ್ಯಾಮ್ಸಂಗ್ ಕಂಪನಿಯ ಎರಡು ನಿರೀಕ್ಷಿತ ಫೋನುಗಳು ಬಿಡುಗಡೆ
* ಎರಡೂ ಫೋನುಗಳು ರಿಯರ್ ಕ್ವಾಡ್ ಕ್ಯಾಮೆರಾ ಹಾಗೂ ಅಕ್ಟಾ ಕೋರ್ ಪ್ರೊಸೆಸರ್‌ಗಳನ್ನು ಹೊಂದಿವೆ.
* ಭಾರತದಲ್ಲಿ ಈ ಸ್ಮಾರ್ಟ್‌ಫೋನುಗಳ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

Samsung Galaxy A53 5G and Galaxy A33 5G launched to global market
Author
Bengaluru, First Published Mar 18, 2022, 2:42 PM IST

 Tech Desk: ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 5ಜಿ (Samsung Galaxy A53 5G) ಹಾಗೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎ33 5ಜಿ (Samsung Galaxy A33 5G) ಸ್ಮಾರ್ಟ್‌ ಫೋನ್‌ಗಳು ಬಿಡುಗಡೆಯಾಗಿವೆ. ಇತ್ತೀಚೆಗಷ್ಟೇ ನಡೆದ ಗ್ಯಾಲಕ್ಸಿ ಎ ಇವೆಂಟ್‌ನಲ್ಲಿ ಕಂಪನಿಯು ಈ ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನುಗಳು ಸಾಕಷ್ಟು ಫೀಚರ್‌ಗಳನ್ನು ಹೊಂದಿದೆ, ಬಳಕೆದಾರರ ಸ್ನೇಹಿಯೂ ಆಗಿದೆ. ಎರಡೂ ಫೋನುಗಳ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳ ಸೆಟ್‌ಅಪ್, ಅಕ್ಟಾ ಕೋರ್ ಪ್ರೊಸೆಸರ್‌ಗಳನ್ನು ಕಾಣಬಹುದು. ಆಂಡ್ರಾಯ್ಡ್ 12 ಆಧರಿತವಾಗಿರುವ ಈ ಪೋನುಗಳು 25 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತವೆ. ಇದೇ ವೇಳೆ, ಭಾರತೀಯ ಮಾರುಕಟ್ಟೆಗೆ ಯಾವಾಗ ಈ ಫೋನುಗಳ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಆದರೆ, ಏಪ್ರಿಲ್ 1ರಿಂದ ಆಯ್ದ ಮಾರುಕಟ್ಟೆಗಳ್ಲಲಿ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್ ಫೋನ್ ಮಾರಾಟಕ್ಕೆ ಸಿಗಲಿದೆ. ಆದರೆ, ಗ್ಯಾಲಕ್ಸಿ ಎ33 5ಜಿ ಸ್ಮಾರ್ಟ್‌ಫೋನ್ ಖರೀದಿಗೆ ಏಪ್ರಿಲ್ 22ರವರೆಗೂ ಕಾಯಬೇಕಾಗುತ್ತದೆ. ಮೊದಲಿಗೆ ಎ53 5ಜಿ ಸ್ಮಾರ್ಟ್‌ ದೊರೆಯಲಿದ್ದು, ಆ ನಂತರ ಎ33 5ಜಿ ಸ್ಮಾರ್ಟ್‌ ಫೋನ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಎರಡೂ ಸ್ಮಾರ್ಟ್‌ಫೋನುಗಳ ಅವೇಸಮ್ ಬ್ಲ್ಯಾಕ್, ಅವೇಸಮ್ ಬ್ಲೂ, ಅವೇಸಮ್ ಪೀಚ್ ಮತ್ತು ಅವೇಸಮ್ ವೈಟ್ ಬಣ್ಣಗಳಲ್ಲಿ ಸಿಗಲಿದೆ. ಇದೇ ವೇಳೆ, ಗ್ಯಾಲಕ್ಸಿ ಎ73 5ಜಿ (Galaxy A73 5G) ಸ್ಮಾರ್ಟ್‌ಫೋನ್ ಕೂಡ ಏಪ್ರಿಲ್ 22ರಂದು ಆಯ್ದ ಮಾರುಕಟ್ಟೆಗಳಲ್ಲಿ ಸಿಗಲಿದೆ ಎಂದು ಸ್ಯಾಮ್ಸಂಗ್ ಖಚಿತಪಡಿಸಿದೆ. 

Samsung Galaxy A53 5G ಆಂಡ್ರಾಯ್ಡ್ 12  UI 4.1 ಜೊತೆಗೆ ರನ್ ಆಗುತ್ತದೆ. 120Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಪೂರ್ಣ HD+ ಸೂಪರ್ AMOLED ಇನ್ಫಿನಿಟಿ-O ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಫೋನ್ 8 ಜಿಬಿ RAM ಜೊತೆಗೆ ಆಕ್ಟಾ-ಕೋರ್ SoCನಿಂದ ಚಾಲಿತವಾಗಿದೆ. ಸ್ಯಾಮ್ಸಂಗ್ ಎ53 5ಜಿ ಸ್ಮಾರ್ಟ್‌ನಲ್ಲಿ 256 ಜಿಬಿವರೆಗೂ ಸ್ಟೋರೇಜ್‌ ಇರಲಿದೆ. ಹಾಗೆಯೇ, ಇದನ್ನು ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:   Redmi 10 ಫೋನ್ ಲಾಂಚ್, 50 ಎಂಪಿ ಕ್ಯಾಮೆರಾ, ಬೆಲೆ ಕೇವಲ 10,999 ರೂ.!

ಇನ್ನೂ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಒಟ್ಟಾರೆ ನಾಲ್ಕು ಕ್ಯಾಮೆರಾಗಳನ್ನು ಕಂಪನಿಯು ಫೋನ್‌ ಹಿಂಬದಿಯಲ್ಲಿ ನೀಡಿದೆ. ಈ ಪೈಕಿ 12- ಮೆಗಾ ಪಿಕ್ಸೆಲ್ ಅಲ್ಟ್ರಾ- ವೈಡ್ ಶೂಟರ್, 5- ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 5-ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಜೊತೆಗೆ 64- ಮೆಗಾ ಪಿಕ್ಸೆಲ್ ಪ್ರಾಥಮಿಕ ಮುಖ್ಯ ಕ್ಯಾಮೆರಾ ಇದೆ.  ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, Samsung Galaxy A53 5G ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸರ್‌ನೊಂದಿಗೆ f/2.2 ಲೆನ್ಸ್‌ನೊಂದಿಗೆ ಬರುತ್ತದೆ.

ಇನ್ನು Samsung Galaxy A33 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧಾರಿತ One UI 4.1 ನೊಂದಿಗೆ ಬರುತ್ತದೆ. ಆದಾಗ್ಯೂ, ಇದು 6.4-ಇಂಚಿನ ಪೂರ್ಣ-HD+ ಸೂಪರ್ AMOLED ಇನ್ಫಿನಿಟಿ-U ಪ್ರದರ್ಶಕವನ್ನು 90Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಫೋನ್ 8GB RAM ಜೊತೆಗೆ ಆಕ್ಟಾ-ಕೋರ್ SoC ನಿಂದ ಚಾಲಿತವಾಗಿದೆ. 

ಎ53 5ಜಿ ಸ್ಮಾರ್ಟ್‌ಫೋನ್ ಕ್ಯಾಮೆರಾಗೆ ಹೋಲಿಸಿದರೆ, ಮೆಗಾ ಪಿಕ್ಸೆಲ್‌ನಲ್ಲಿ ವ್ಯತ್ಯಾಸ ಕಾಣಬಹುದು. ಆದರೆ ಫೋನಿನಲ್ಲೂ ಕಂಪನಿ ನಾಲ್ಕು ಕ್ಯಾಮೆರಾಗಾಳ ಸೆಟ್‌ಅಪ್ ನೀಡಿದೆ. 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಮೇಲ್ಭಾಗದಲ್ಲಿ f/1.8 ಲೆನ್ಸ್ ಅನ್ನು ಹೊಂದಿದೆ. ಇನ್ನುಳಿದಿಂತೆ 8-ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಸಹ ಒಳಗೊಂಡಿದೆ.

 ಇದನ್ನೂ ಓದಿ:  Indian OS for Mobiles: ಮೊಬೈಲ್‌ಗಳಿಗೆ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ!

ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ಫೋನ್ ಬೆಲೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 37,800 ರೂ.ನಿಂದ ಆರಂಭವಾಗುತ್ತವೆ. ಹಾಗೆಯೇ, ಗ್ಯಾಲಕ್ಸಿ ಎ33 5ಜಿ ಸ್ಮಾರ್ಟ್‌ಫೋನ್ ಬೆಲೆ 31,000 ರೂ.ನಿಂದ ಶುರುವಾಗುತ್ತದೆ. ಬೆಲೆಯನ್ನು ಗಮನಿಸಿದರೆ ಈ ಎರಡೂ ಫೋನ್‌ಗಳನ್ನು ಪ್ರೀಮಿಯಂ ಕೆಟಗರಿಗೆ ಸೇರಿಸಬಹುದು.

Follow Us:
Download App:
  • android
  • ios