ಫೋನ್ ಸ್ಕ್ರೀನ್‌ನಿಂದ ಬರುವ ಬ್ಲೂ ಲೈಟ್ ಕಣ್ಣುಗಳಿಗೆ ಹಾನಿ ಮಾಡುತ್ತದೆ . ಇದು ನಿದ್ರೆಯ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ, ಸೆಟ್ಟಿಂಗ್ಸ್‌ನಲ್ಲಿ ಡಿಸ್‌ಪ್ಲೇಗೆ ಹೋಗಿ ನೈಟ್ ಮೋಡ್ ಆನ್ ಮಾಡಿ.
ನಿಮ್ಮ ಫೋನಲ್ಲಿ ಡಾರ್ಕ್ ಮೋಡ್ ಆನ್ ಮಾಡಿ ಕಣ್ಣುಗಳಿಗೆ ಆರಾಮ ಮತ್ತು ಬ್ಯಾಟರಿ ಉಳಿಸುತ್ತದೆ. ವಾಟ್ಸಾಪ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಆ್ಯಪ್‌ಗಳಲ್ಲಿ ಇನ್‌ಬಿಲ್ಟ್ ಡಾರ್ಕ್ ಮೋಡ್ ಸೆಟ್ಟಿಂಗ್ ಇರುತ್ತದೆ.
ಆಟೋ ಬ್ರೈಟ್‌ನೆಸ್ ಆನ್ ಮಾಡಿದರೆ, ನಿಮ್ಮ ಸುತ್ತಲಿನ ಬೆಳಕಿಗೆ ತಕ್ಕಂತೆ ಸ್ಕ್ರೀನ್ ಅಡ್ಜಸ್ಟ್ ಆಗುತ್ತದೆ. ಇದಕ್ಕಾಗಿ ಫೋನ್ ಸೆಟ್ಟಿಂಗ್ಸ್‌ನಲ್ಲಿ ಡಿಸ್‌ಪ್ಲೇ ಒಳಗೆ 'Adaptive Brightness' ಆಯ್ಕೆಯನ್ನು ಆನ್ ಮಾಡಿ.
ದೀರ್ಘಕಾಲ ಸೋಷಿಯಲ್ ಮೀಡಿಯಾ ಅಥವಾ ಗೇಮ್ ಆಡಿದರೆ ಕಣ್ಣುಗಳು ಹಾನಿಯಾಗುತ್ತವೆ. ಹಾಗಾಗಿ, 'Digital Wellbeing'ಗೆ ಹೋಗಿ ಆ್ಯಪ್ ಟೈಮರ್‌ಗಳನ್ನು ಸೆಟ್ ಮಾಡಿ. ಇದರಿಂದ ನಿಮ್ಮ ಸ್ಕ್ರೀನ್ ಟೈಮ್ ನಿಯಂತ್ರಣಕ್ಕೆ ಬರುತ್ತದೆ.
ಕೆಲವು ಫೋನಲ್ಲಿ ರೀಡಿಂಗ್ ಮೋಡ್ ಆಯ್ಕೆ ಇರುತ್ತದೆ. ಇದು ಸ್ಕ್ರೀನ್‌ಗೆ ಹಳದಿ ಅಥವಾ ಹಗುರವಾದ ಟೋನ್ ನೀಡುತ್ತದೆ. ಸೆಟ್ಟಿಂಗ್ಸ್‌ನಲ್ಲಿ ಡಿಸ್‌ಪ್ಲೇಗೆ ಹೋಗಿ, ರೀಡಿಂಗ್ ಮೋಡ್‌ನಲ್ಲಿ 'Comfort View' ಮೇಲೆ ಕ್ಲಿಕ್ ಮಾಡಿ.
ನೀವು ಹೆಚ್ಚು ಹೊತ್ತು ಫೋನ್ ಬಳಸುವುದಾದರೆ, ಆ್ಯಂಟಿ-ಗ್ಲೇರ್ ಅಥವಾ ಮ್ಯಾಟ್ ಸ್ಕ್ರೀನ್ ಪ್ರೊಟೆಕ್ಟರ್ ಬಳಸುವುದು ಒಳ್ಳೆಯದು. ಇದು ಸ್ಕ್ರೀನ್‌ನಿಂದ ಬರುವ ಪ್ರತಿಫಲನ ಕಡಿಮೆ ಮಾಡುತ್ತದೆ.
ಪ್ರತಿ 20 ನಿಮಿಷಗಳಿಗೊಮ್ಮೆ, 20 ಸೆಕೆಂಡುಗಳ ಕಾಲ, 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.