ಜಿಯೋದಿಂದ Call ಮಾಡೋದಕ್ಕೆ ಕೈಗೆಟುಕುವ ಟಾಕ್‌ಟೈಮ್ ಪ್ಲಾನ್‌ಗಳು; 10 ರೂ.ಯಿಂದ ಸ್ಟಾರ್ಟ್
ರಿಲಯನ್ಸ್ ಜಿಯೋ ಕೇವಲ ಕರೆ ಮಾಡುವ ಗ್ರಾಹಕರಿಗಾಗಿ ಸರಳ ಮತ್ತು ಕೈಗೆಟುಕುವ ಟಾಕ್‌ಟೈಮ್ ಆಯ್ಕೆಗಳನ್ನು ಪರಿಚಯಿಸಿದೆ. ಕೀಪ್ಯಾಡ್ ಮೊಬೈಲ್ ಬಳಕೆದಾರರಿಗೆ ಡೇಟಾ ಪ್ಲಾನ್‌ಗಳ ಅನಿವಾರ್ಯತೆ ಇಲ್ಲದೆ, ಕೇವಲ 10 ರೂ.ಗಳಿಂದ ಆರಂಭವಾಗುವ ಟಾಕ್‌ಟೈಮ್ ವೋಚರ್‌ಗಳನ್ನು ಜಿಯೋ ನೀಡುತ್ತಿದೆ.
ಮುಂಬೈ: ಸುಮಾರು 10-15 ವರ್ಷಗಳ ಹಿಂದೆ ಫ್ರೀ ಕಾಲಿಂಗ್ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ಗ್ರಾಹಕರು ರೀಚಾರ್ಜ್ ಮಾಡಿಸಿಕೊಳ್ಳಬೇಕಿತ್ತು. ಈ ಹಣದಲ್ಲಿ ಒಂದಿಷ್ಟು ಕಳೆದ ಬಹುತೇಕ ಮೊತ್ತ ಬಳಕೆದಾರರ ಸಂಖ್ಯೆ ಜಮೆ ಆಗುತ್ತಿತ್ತು. ಕರೆ ಮಾಡಿದಾಗ ನಿಮಿಷ ಅಥವಾ ಸೆಕೆಂಡುಗಳ ಲೆಕ್ಕದಲ್ಲಿ ಹಣ ಕಡಿತಗೊಳ್ಳುತ್ತಿತ್ತು. ಆದರೆ ಇದೀಗ ಎಲ್ಲಾ ಟೆಲಿಕಾಂ ಕಂಪನಿಗಳು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಇದೀಗ ರಿಲಯನ್ಸ್ ಜಿಯೋ ಹಳೆ ಕಾಲಕ್ಕೆ ತನ್ನ ಗ್ರಾಹಕರನ್ನು ಕರೆದುಕೊಂಡು ಹೋಗುತ್ತಿದೆ. ಕೇವಲ ಕರೆ ಮಾಡುವ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಸರಳ ಮತ್ತು ಕೈಗೆಟುಕುವ ಆಯ್ಕೆಗಳನ್ನು ತಂದಿದೆ.
ಇಂದಿಗೂ ಎಷ್ಟೋ ಜನರು ಕೀ ಪ್ಯಾಡ್ ಮೊಬೈಲ್‌ಗಳನ್ನು ಬಳಸುತ್ತಾರೆ. ಈ ವರ್ಗದ ಜನರು ಕೇವಲ ಕರೆ ಮಾಡಲು ಮತ್ತು ಸ್ವೀಕರಿಸಲು ಮೊಬೈಲ್ ಬಳಕೆ ಮಾಡುತ್ತಾರೆ. ಆದ್ರೆ ಇಂದಿನ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ಆಧಾರಿತ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಅನಿವಾರ್ಯವಾಗಿ ಇಂಟರ್‌ನೆಟ್ ಬಳಕೆ ಮಾಡದಿದ್ದರೂ ಡೇಟಾ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬೇಕಿದೆ.
ನಮಗೆ ಯಾವುದೇ ಇಂಟರ್‌ನೆಟ್, ಹೆಚ್ಚುವರಿ ಆಪ್‌ಗಳ ಆಕ್ಸೆಸ್ ಬೇಡ. ನಾವು ಕೇವಲ ಕರೆ ಮಾಡಲು ಮತ್ತು ಸ್ವೀಕರಿಸಲು ಮಾತ್ರ ಮೊಬೈಲ್ ಬಳಕೆ ಮಾಡುತ್ತೇವೆ, ನಮಗೆ ಮೊದಲಿನಂತೆಯೇ ಟಾಕ್‌ಟೈಮ್ ವೋಚರ್ ಆಯ್ಕೆಯನ್ನು ಒದಗಿಸಬೇಕು ಎಂಬುವುದು ಹಲವರ ಅಭಿಪ್ರಾಯವಾಗಿತ್ತು. ಈವರೆಗೆ ಜಿಯೋ ಮಾತ್ರ ಟಾಕ್‌ಟೈಮ್-ಮಾತ್ರ ಟಾಪ್-ಅಪ್ ವೋಚರ್‌ಗಳನ್ನು ಒದಗಿಸುತ್ತಿದೆ. ಇಂಟರ್‌ನೆಟ್ ಬಳಕೆ ಮಾಡದೇ ಇರೋರು ಟಾಕ್‌ಟೈಮ್ ಮೂಲಕ ವೋಚರ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ಹಿಂದಿನಂತೆ ಕೇವಲ 10 ರೂಪಾಯಿಗಳಿಂದ ಜಿಯೋ ಟಾಕ್‌ಟೈಮ್ ಟಾಪ್-ಅಪ್ ವೋಚರ್‌ಗಳು ಆರಂಭವಾಗುತ್ತವೆ.
ಬೆಲೆ | ಟಾಕ್‌ಟೈಮ್ |
10 ರೂಪಾಯಿ | 7.47 ರೂಪಾಯಿ |
20 ರೂಪಾಯಿ | 14.95 ರೂಪಾಯಿ |
50 ರೂಪಾಯಿ | 39.37 ರೂಪಾಯಿ |
100 ರೂಪಾಯಿ | 81.75 ರೂಪಾಯಿ |
500 ರೂಪಾಯಿ | 420.73 ರೂಪಾಯಿ |
1000 ರೂಪಾಯಿ | 844.46 ರೂಪಾಯಿ |
ಇದನ್ನೂ ಓದಿ: ಸ್ಯಾಮ್‌ಸಂಗ್ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್
ಪ್ರತ್ಯೇಕ ರೀಚಾರ್ಜ್ ಮಾಡುವ ಪ್ರಸ್ತಾಪನೆ ಇಲ್ಲ
ಲೋಕಸಭಾ ಕಲಾಪದ ವೇಳೆ, ನಮ್ಮ ದೇಶದಲ್ಲಿ ಇಂದಿಗೂ ಹಲವರು ಸ್ಮಾರ್ಟ್‌ಫೋನ್ ಬಳಕೆ ಮಾಡೋದಿಲ್ಲ. ಕೀಪ್ಯಾಡ್‌ನಂತಹ ಚಿಕ್ಕ ಫೋನ್ ಬಳಕೆ ಮಾಡುತ್ತಿರೋದರಿಂದ ಇವರಿಗೆ ಯಾವುದೇ ಡೇಟಾದ ಅಗತ್ಯವಿರಲ್ಲ. ಒಂದು ವೇಳೆ ಇದ್ರೂ ಅದು ತುಂಬಾ ವಿರಳವಾಗಿರುತ್ತದೆ. ಹಾಗಾಗಿ ಈ ವರ್ಗದ ಬಳಕೆದಾರರಿಗೆ ವಿಶೇಷ ಟ್ಯಾರಿಫ್ ಪ್ಲಾನ್‌ಗಳು ಪರಿಚಯಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯಾ ಎಂದು ಪ್ರಶ್ನೆ ಮಾಡಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ದೂರ ಸಂಚಾರ ಸಚಿವಾಲಯ, ಸದ್ಯಕ್ಕೆ ಸರ್ಕಾರರ ಮುಂದೆ ಆ ರೀತಿಯ ಯಾವುದೇ ಯೋಜನೆ ಇಲ್ಲ. ಈ ಸಂಬಂದ ಯಾವುದೇ ಪ್ರಸ್ತಾವನೆಯೂ ಸಲ್ಲಿಕೆಯಾಗಿಲ್ಲ ಎಂದು ಸದನಕ್ಕೆ ಉತ್ತರ ನೀಡಿದೆ
ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಕಂಡುಹಿಡಿಯುವುದು ಹೇಗೆ?