ಸ್ಯಾಮ್‌ಸಂಗ್‌ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್

ನೋಕಿಯಾ C32 5G ಸ್ಮಾರ್ಟ್‌ಫೋನ್ ₹4999 ಕ್ಕೆ ಲಭ್ಯ. 75Hz ಡಿಸ್‌ಪ್ಲೇ, 5000mAh ಬ್ಯಾಟರಿ, ಮತ್ತು 50MP ಕ್ಯಾಮೆರಾ ಹೊಂದಿದೆ.

Nokia C32 5G Smartphone in exchange offer 5000mah power full Battery price and details mrq

Nokia C32 5G Smart Phone: ನೋಕಿಯಾ 2023ರಲ್ಲಿ Nokia C32 ಹೆಸರಿನ 5G ಸ್ಮಾರ್ಟ್‌ಫೋನ್‌ನನ್ನು ಬಿಡುಗಡೆ ಮಾಡಿತ್ತು. ಇದೀಗ  Nokia C32 5G ಸ್ಮಾರ್ಟ್‌ಫೋನ್ ಖರೀದಿ ಮೇಲೆ 2 ಸಾವಿರ ರೂ.ವರೆಗೆ ಗ್ರಾಹಕರಿಗೆ ಡಿಸ್ಕೌಂಟ್‌ ಸಿಗುತ್ತಿದೆ. ಹಾಗಾಗಿ ಪವರ್‌ಫುಲ್ ಬ್ಯಾಟರಿಯ ಸ್ಮಾರ್ಟ್‌ಫೋನ್ ಗ್ರಾಹರಕರಿಗೆ ಕೈಗೆಟಕುವ ದರದಲ್ಲಿ ಸಿಗಲಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 75Hz ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ 200 ಗ್ರಾಂ ತೂಕವನ್ನು ಹೊಂದಿದ್ದು, ಮೂರು ಕಲರ್‌ಗಳಲ್ಲಿ ಲಭ್ಯವಿದೆ. ಇದರ ಜೊತೆ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ಒಳಗೊಂಡಿದೆ.  

ನೀವೇನಾದ್ರೂ  ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಪ್ಲಾನ್ ಮಾಡುತ್ತಿದ್ರೆ ಸುವರ್ಣವಕಾಶವೊಂದು ಬಂದಿದೆ.   ಈ 5ಜಿ ಸ್ಮಾರ್ಟ್‌ಫೋನ್ ನಿಮಗೆ ಲಾಭದಾಯಕವಾಗಬಹುದು. ಈ ಫೋನ್‌ನಲ್ಲಿ ಬಳಕೆದಾರರಿಗೆ ಪವರ್‌ಫುಲ್ ಪ್ರೊಸೆಸರ್‌ ಸೇರಿದಂತೆ ಹಲವು ವೈಶಿಷ್ಟ್ಯತೆಗಳು ಸಿಗುತ್ತವೆ.

Display And Processor
ನೋಕಿಯಾ ಈ 5G ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಪವರ್‌ಫುಲ್ ಪ್ರೊಸೆಸರ್ ನೀಡಲಾಗಿದೆ. 6.5 ಇಂಚಿನ ಡಿಸ್‌ಪ್ಲೇ, ಒಪಿಎಸ್ ಡಿಸ್‌ಪ್ಲೇ ಮತ್ತು   75Hz ರಿಫ್ರೆಶ್ ರೇಟ್ ನೊಂದಿಗೆ ಬರಲಿದೆ.

ಇದನ್ನೂ ಓದಿ: ನೋಕಿಯಾದಿಂದ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ 5G ಸ್ಮಾರ್ಟ್‌ಫೋನ್; 108MP ಕ್ಯಾಮೆರಾ, 6000mAh ಬ್ಯಾಟರಿ

Camera And Battery
50 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾ ಬರಲಿದೆ. ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್  5000mah ಪವರ್ ಫುಲ್ ಬ್ಯಾಟರಿ ಜೊತೆ 20 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಿಗುತ್ತದೆ. ಲೌಡ್ ಸ್ಪೀಕರ್,  ಸೈಡ್ ಮೌಂಟೆಂಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೇರಿದಂತೆ ಇನ್ನಿತರ ಫೀಚರ್ಸ್‌ ಲಭ್ಯವಿದೆ. 

Price And Other Details
ಈ ಸ್ಮಾರ್ಟ್‌ಫೋನ್ 2023ರಲ್ಲಿ ಮೊದಲು ಲಾಂಚ್ ಆಗಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ 6,999 ರೂಪಾಯಿಯಲ್ಲಿ ಲಭ್ಯವಿದೆ. ಎಕ್ಸ್‌ಚೇಂಜ್ ಆಫರ್ ಸಹ ನೀಡಲಾಗಿದ್ದು, ಇದರಲ್ಲಿ ಗ್ರಾಹಕರಿಗೆ 2,000 ರೂ.ವರೆಗೆ ಡಿಸ್ಕೌಂಟ್ ಸಿಗಲಿದೆ.  ಡಿಸ್ಕೌಂಟ್ ಬಳಿಕ Nokia C32 5G ಸ್ಮಾರ್ಟ್‌ಫೋನ್ ಕೇವಲ  4999 ರೂಪಾಯಿಯಲ್ಲಿ ಲಭ್ಯವಾಗುತ್ತದೆ.

ಇದನ್ನೂ ಓದಿ: ನೋಕಿಯಾದಿಂದ 300MP ಕ್ಯಾಮೆರಾ ಜೊತೆ 7200mAh ಪವರ್‌ಫುಲ್ ಬ್ಯಾಟರಿಯ ವಾಟರ್‌ಪ್ರೂಫ್ ಸ್ಮಾರ್ಟ್‌ಫೋನ್

Latest Videos
Follow Us:
Download App:
  • android
  • ios