5 ಹೊಸ ಪ್ರಿಪೇಯ್ಡ್ ಆಫರ್ ಘೋಷಿಸಿದ ರಿಲಯನ್ಸ್ ಜಿಯೋ!
- ಜಿಯೋ ಫ್ರೀಡಂ ಯೋಜನೆ ಘೋಷಿಸಿದ ಜಿಯೋ
- ಡೇಟಾದೊಂದಿಗೆ ದೈನಂದಿನ ಮಿತಿ ಇಲ್ಲದ ಹಾಗೂ ಅನಿಯಮಿತ ವಾಯ್ಸ್
- ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳು ಡಿಜಿಟಲ್ ಲೈಫ್‌ಗೆ ಮತ್ತಷ್ಟು ಆಯ್ಕೆ
ನವದೆಹಲಿ(ಜೂ.11): ದೂರಸಂಪರ್ಕ ಕಂಪೆನಿ ರಿಲಯನ್ಸ್ ಜಿಯೋ ಫ್ರೀಡಂ ಯೋಜನೆಗಳನ್ನು ಪರಿಚಯಿಸಿದೆ. ಐದು ಹೊಸ ದೈನಂದಿನ ಮಿತಿರಹಿತ ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳನ್ನು ಗ್ರಾಹಕರಿಗೆ ಜಿಯೋ ನೀಡುತ್ತಿದೆ. ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಹೊಸ ಯೋಜನೆಗಳು 127 ರೂಪಾಯಿಗೆ 15 ದಿನಗಳ ವ್ಯಾಲಿಡಿಟಿಯೊಂದಿಗೆ ಯೋಜನಾ ಅವಧಿಯಲ್ಲಿ 12 ಜಿಬಿ ತಡೆರಹಿತ ದೈನಂದಿನ ಡೇಟಾ ಆಫರ್‌ನೊಂದಿಗೆ ಆರಂಭವಾಗುತ್ತವೆ. 30 ದಿನಗಳು, 60 ದಿನಗಳು, 90 ದಿನಗಳು ಮತ್ತು 365 ದಿನಗಳ ಇತರೆ ಯೋಜನೆಗಳನ್ನು ಸಹ ಪರಿಚಯಿಸಲಾಗಿದೆ.
ಜಿಯೋ ಜೊತೆ ಸೇರಿ ಕೈಗೆಟುಕವ ದರದಲ್ಲಿ ಬರುತ್ತಿದೆ ಗೂಗಲ್ ಸ್ಮಾರ್ಟ್‌ಫೋನ್!
ಜಿಯೋ ಫ್ರೀಡಂ ಯೋಜನೆಗಳ ಅಡಿ ಪರಿಚಯಿಸಲಾಗಿರುವ ಐದು ಹೊಸ ದೈನಂದಿನ ಮಿತಿರಹಿತ ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳು ಡಿಜಿಟಲ್ ಲೈಫ್‌ಗೆ ಮತ್ತಷ್ಟು ಆಯ್ಕೆಗಳನ್ನು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹೊಸ ಪ್ರೀಪೇಯ್ಡ್ ಯೋಜನೆಗಳು, ಹಿಂದಿನ ಜನಪ್ರಿಯ 28 ದಿನಗಳು ಮತ್ತು ಬಹು ವಾಯಿದೆಯ ಪ್ರೀಪೇಯ್ಡ್ ಯೋಜನೆಗಳಿಗಿಂತ ವಿಭಿನ್ನವಾಗಿದ್ದು, 30 ದಿನಗಳ ಬಹು ವಾಯಿದೆಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.
ನಿಗದಿತ ಡೇಟಾದೊಂದಿಗೆ ದೈನಂದಿನ ಮಿತಿ ಇಲ್ಲದ ಹಾಗೂ ಅನಿಯಮಿತ ವಾಯ್ಸ್‌ಅನ್ನು ಈ ಐದು ಯೋಜನೆಗಳು ನೀಡಲಿವೆ. 'ದೈನಂದಿನ ಮಿತಿ ರಹಿತ' ಯೋಜನೆಗಳು, ದೈನಂದಿಯ ಮಿತಿಗಳು ಖಾಲಿಯಾಗುವ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲದೆ ತಡೆರಹಿತ ಡೇಟಾ ಬಳಕೆಯನ್ನು ಆನಂದಿಸಲು ಅಧಿಕ ಡೇಟಾ ಬಳಕೆದಾರರಿಗೆ ನೆರವಾಗುತ್ತದೆ. 30 ದಿನಗಳ ವ್ಯಾಲಿಡಿಟಿ ಚಕ್ರವು ರೀಚಾರ್ಜ್ ದಿನಾಂಕವನ್ನು ನೆನಪಿಸಲು ನೆರವಾಗುತ್ತದೆ ಎಂದು ಮೂಲಗಳು ಹೇಳಿವೆ.
ಕೊರೋನಾ ಸಂಕಷ್ಟದಲ್ಲಿ ಜಿಯೋ ಆಫರ್: ಪ್ರತಿ ತಿಂಗಳು 300 ನಿಮಿಷ ಔಟ್‌ಗೋಯಿಂಗ್ ಉಚಿತ!
ಈ ಯೋಜನೆಗಳು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಮತ್ತು ಇತರೆ ಆಪ್‌ಗಳು ಸೇರಿದಂತೆ ಜಿಯೋದ ಮಾಜಿತಿ ಹಾಗೂ ಯುಟಿಲಿಟಿ ಆಪ್‌ಗಳಿಗೆ ಪ್ರವೇಶ ಕಲ್ಪಿಸುತ್ತವೆ.
ಜಿಯೋ ವೆಬ್‌ಸೈಟ್ ಮಾಹಿತಿಯ ಪ್ರಕಾರ, 247 ರೂ. ದರದ ಯೋಜನೆಯು 30 ದಿನಗಳ ವ್ಯಾಲಿಡಿಟಿ ಮತ್ತು ಯಾವುದೇ ದೈನಂದಿನ ಮಿತಿಯಿಲ್ಲದೆ 25 ಜಿಬಿ ಡೇಟಾ ನೀಡುತ್ತಿದೆ. ಇತರೆ ಯೋಜನೆಗಳು 447 ರೂ., (60 ದಿನಗಳ ವ್ಯಾಲಿಡಿಟಿ, 50 ಜಿಬಿ ಡೇಟಾ), 597 ರೂ. (90 ದಿನಗಳ ವ್ಯಾಲಿಡಿಟಿ ಮತ್ತು 75 ಜಿಬಿ ಡೇಟಾ), ಮತ್ತು 2397 ರೂ. (365 ದಿನಗಳ ವ್ಯಾಲಿಡಿಟಿ ಮತ್ತು 365 ಜಿಬಿ ಡೇಟಾ) ದರವನ್ನು ಹೊಂದಿವೆ.