ಕೊರೋನಾ ಸಂಕಷ್ಟದಲ್ಲಿ ಜಿಯೋ ಆಫರ್: ಪ್ರತಿ ತಿಂಗಳು 300 ನಿಮಿಷ ಔಟ್‌ಗೋಯಿಂಗ್ ಉಚಿತ!

  • ಪ್ರತಿ ತಿಂಗಳೂ 300 ನಿಮಿಷಗಳ ಔಟ್‌ಗೋಯಿಂಗ್ ವಾಯ್ಸ್ ಕರೆ ಉಚಿತ 
  • ಪ್ರತಿ ಜಿಯೋಫೋನ್ ಪ್ಲಾನ್ ಜೊತೆಗೆ ಒಂದು-ಖರೀದಿಸಿ-ಒಂದು-ಪಡೆಯಿರಿ
  • ಕೊರೋನಾ ಸಂಕಷ್ಟದಲ್ಲಿ ಫ್ರೀ ಆಫರ್ ಘೋಷಿಸಿದ ಜಿಯೋ
jio phone users to get 300 minutes of outgoing voice calls per month free in Covid times ckm

ಮುಂಬೈ(ಮೇ.14): ಕೊರೋನಾ ಸಂಕಷ್ಟ ಸಮಯದಲ್ಲಿ ಜಿಯೋ ಬಂಪರ್ ಕೂಡುಗೆ ನೀಡಿದೆ. ಉಚಿತ ವಾಯ್ಸ್ ಕಾಲ್, ಒನ್ ಟು ಡಬಲ್ ಆಫರ್ ಸೇರಿದಂತೆ ಪ್ರಮುಖ ಆಫರ್ ಘೋಷಿಸಿದೆ.   ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ , ಪರಸ್ಪರ ಸಂಪರ್ಕದಲ್ಲಿರುವುದು ಅತೀ ಅವಶ್ಯಕವಾಗಿದೆ. ಇದಕ್ಕಾಗಿ, ಜಾಗತಿಕ ಸೋಂಕಿನ ಅವಧಿಗಾಗಿ ಜಿಯೋ ಎರಡು ವಿಶೇಷ ಆಫರ್ ಘೋಷಿಸಿದೆ:

4G ಡೌನ್‌ಲೋಡ್ ಸ್ಪೀಡ್: ಮೊದಲ ಸ್ಥಾನದಲ್ಲಿ ರಿಲಯನ್ಸ್ ಜಿಯೋ! 

1. ಜಿಯೋ, ಸದ್ಯದ ಜಾಗತಿಕ ಸೋಂಕಿನಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದ ಜಿಯೋಫೋನ್ ಬಳಕೆದಾರರಿಗೆ ಜಾಗತಿಕ ಸೋಂಕಿನ ಸಂಪೂರ್ಣ ಅವಧಿಗೆ ಪ್ರತಿ ತಿಂಗಳೂ 300 ಉಚಿತ ನಿಮಿಷಗಳ ಔಟ್‌ಗೋಯಿಂಗ್ ಕರೆಗಳನ್ನು (ದಿನಕ್ಕೆ 10 ನಿಮಿಷಗಳು) ಒದಗಿಸಲಿದೆ.

2. ಹೆಚ್ಚುವರಿಯಾಗಿ, ಅದು ಇನ್ನಷ್ಟು ಸುಲಭವಾಗಿ ಕೈಗೆಟುಕುವಂತೆ ಮಾಡಲು, ಜಿಯೋಫೋನ್ ಬಳಕೆದಾರರು ರೀಚಾರ್ಜ್ ಮಾಡಿದ ಪ್ರತಿ ಜಿಯೋಫೋನ್ ಪ್ಲಾನ್‌ಗೆ*, ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಪ್ಲಾನ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಉದಾಹರಣೆಗೆ, ರೂ. 75  ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡುವ ಜಿಯೋಫೋನ್ ಬಳಕೆದಾರರು ರೂ. 75ರ ಹೆಚ್ಚುವರಿ ಪ್ಲಾನ್ ಅನ್ನು ಸಂಪೂರ್ಣ ಉಚಿತವಾಗಿ ಪಡೆಯುತ್ತಾರೆ.

ಈ ಸವಾಲಿನ ಕಾಲದಲ್ಲಿ ಎಲ್ಲ ಭಾರತೀಯರ ಜೊತೆಯಲ್ಲೂ ನಿಲ್ಲಲು ರಿಲಯನ್ಸ್ ಬದ್ಧವಾಗಿದೆ, ಮತ್ತು ಜಾಗತಿಕ ಸೋಂಕಿನಿಂದ ಉಂಟಾಗಿರುವ ತೊಂದರೆಗಳನ್ನು ನಿವಾರಿಸಲು ನಮ್ಮ ಜೊತೆಯ ನಾಗರಿಕರಿಗೆ ಅನುವು ಮಾಡಿಕೊಡುವ ಎಲ್ಲ ಪ್ರಯತ್ನಗಳನ್ನೂ ಮುಂದುವರಿಸಲಿದೆ.

Latest Videos
Follow Us:
Download App:
  • android
  • ios